ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ಗೆ ರೆಡಿಯಾಗ್ತಿದೆ. ಆದ್ರೆ, ಈ ನಡುವೆ ರೋಹಿತ್ ಶರ್ಮಾ ಪಡೆಗೆ, ಆ ಇಬ್ಬರು ಆಟಗಾರರ ಅಲಭ್ಯತೆ ಕಾಡೋ ಸಾಧ್ಯತೆ ಇದೆ. ಯಾರು ಆ ಆಟಗಾರರು ಅಂತೀರಾ..? ಈ ಸ್ಟೋರಿ ನೋಡಿ..!
ಬರ್ಮಿಂಗ್ಹ್ಯಾಮ್ನಲ್ಲಿ ಬಲಿಷ್ಠ ಬೆನ್ಸ್ಟೋಕ್ಸ್ ಪಡೆಗೆ, ಮಣ್ಣು ಮುಕ್ಕಿಸಲು ರೋಹಿತ್ ಶರ್ಮಾ ರೆಡಿಯಾಗಿದೆ. ಆ ಮೂಲಕ ಆಂಗ್ಲರ ನಾಡಲ್ಲಿ ಮೂರನೇ ಬಾರಿ ಟೆಸ್ಟ್ ಸರಣಿ ಗೆದ್ದು, ಇತಿಹಾಸ ಸೃಷ್ಟಿಸೋ ಪಣ ತೊಟ್ಟಿದೆ. ಈಗಾಗ್ಲೇ ಇಂಗ್ಲೆಂಡ್ ತಲುಪಿರೋ ಟೀಮ್ ಇಂಡಿಯಾ ಆಟಗಾರರು, ಭರ್ಜರಿ ಪ್ರಾಕ್ಟೀಸ್ ನಡೆಸಿದ್ದಾರೆ.
ಕಳೆದ ವರ್ಷ ನಡೆದ್ದಿದ ನಾಲ್ಕು, ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಎರಡು ಪಂದ್ಯಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಜಯ ಸಾಧಸಿದ್ರೆ, ಮತ್ತೊಂದು ಟೆಸ್ಟ್ ಡ್ರಾನಲ್ಲಿ ಅಂತ್ಯವಾಗಿತ್ತು. ಈಗ ಬಾಕಿ ಉಳಿದಿರೋ ಒಂದೇ ಒಂದು ಟೆಸ್ಟ್ನ ಡ್ರಾ ಮಾಡಿಕೊಂಡರೂ, ಸರಣಿ ಭಾರತದ ಪಾಲಾಗಲಿದೆ. ಆದ್ರೆ, ಈ ಬಾರಿ ಆಂಗ್ಲರನ್ನ ಮಣಿಸೋದು ಅಷ್ಟು ಸುಲಭವಲ್ಲ.
ಎಲ್ಲಾ ಡಿಪಾರ್ಟ್ಮೆಂಟ್ಗಳಲ್ಲೂ ಆಂಗ್ಲರ ಸೈನ್ಯ ಸಖತ್ ಸ್ಟ್ರಾಂಗ್ ಆಗಿದೆ. ತವರಿನಲ್ಲಿ ಸದ್ಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರೋ ಟೆಸ್ಟ್ ಸರಣಿಯಲ್ಲಿ, ಇಂಗ್ಲೆಂಡ್ ಅದ್ಭುತ ಪ್ರದರ್ಶನ ನೀಡ್ತಿದೆ. ಮತ್ತೊಂದೆಡೆ ಸಿರೀಸ್ ಡಿಸೈಡರ್, ಹೈವೋಲ್ಟೇಜ್ ಟೆಸ್ಟ್ ದಂಗಲ್ನಲ್ಲಿ, ಕೆಲ ಪ್ರಮುಖ ಆಟಗಾರರ ಅಲಭ್ಯತೆ, ಟೀಮ್ ಇಂಡಿಯಾಗೆ ಕಾಡೋ ಸಾಧ್ಯತೆ ಇದೆ.
ರೋಹಿತ್ ಪಡೆಗೆ ಕಾಡಲಿದ್ಯಾ ಕೆ.ಎಲ್ ರಾಹುಲ್ ಅಲಭ್ಯತೆ..!
ಆಂಗ್ಲರ ನಾಡಲ್ಲಿ ರಾಹುಲ್ ಉತ್ತಮ ದಾಖಲೆ..!
ಯೆಸ್, ಕೆ.ಎಲ್ ರಾಹುಲ್, ಕ್ಲಾಸ್ ಆ್ಯಂಡ್ ಟೆಕ್ನಿಕಲಿ ಸ್ಟ್ರಾಂಗ್ ಆಗಿರೋ ಬ್ಯಾಟ್ಸ್ಮನ್. ಅಲ್ಲದೇ ಇಂಗ್ಲೆಂಡ್ ಕಂಡೀಷನ್, ಅಲ್ಲಿನ ಪಿಚ್ಗಳು ಎಲ್ಲದರ ಬಗ್ಗೆ ರಾಹುಲ್ ಚೆನ್ನಾಗಿ ಅರಿತಿದ್ದಾರೆ. ಆದ್ರೆ, ಇಂಜುರಿ ಕಾರಣದಿಂದಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ರಾಹುಲ್ ಹೊರುಗುಳಿದಿದ್ದಾರೆ. ಇದು, ಟೀಮ್ ಇಂಡಿಯಾಗೆ ದೊಡ್ಡ ಶಾಕ್ ನೀಡಿದೆ.
ಇನ್ನು ರಾಹುಲ್, ಆಂಗ್ಲರ ನಾಡಲ್ಲಿ ರಾಹುಲ್ ಸಾಲಿಡ್ ರೆಕಾರ್ಡ್ ಹೊಂದಿದ್ದಾರೆ. ಕಳೆದ ವರ್ಷ ನಡೆದ ನಾಲ್ಕು ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್, ಅದ್ಭುತ ಬ್ಯಾಟಿಂಗ್ ಮೂಲಕ ಮಿಂಚಿದ್ರು. ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ನಂತರ, ಅತಿಹೆಚ್ಚು ರನ್ಗಳಿಸಿದವ್ರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ರು.
2021ರಲ್ಲಿ ಕೆ.ಎಲ್ ರಾಹುಲ್ ಪ್ರದರ್ಶನ..!
ಕಳೆದ ವರ್ಷ ನಾಲ್ಕು 8 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ಕೆ.ಎಲ್ ರಾಹುಲ್, 39.38ರ ಸರಾಸರಿಯಲ್ಲಿ 315 ರನ್ ಗಳಿಸಿದ್ರು. ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 129 ರನ್ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.
ಇಂಗ್ಲೆಂಡ್ನಲ್ಲಿ ರಾಹುಲ್ ಬ್ಯಾಟಿಂಗ್..!
ಇನ್ನು ಇಂಗ್ಲೆಂಡ್ನಲ್ಲಿ ಈವರೆಗೂ 22 ಇನ್ನಿಂಗ್ಸ್ಗಳಲ್ಲಿ ರಾಹುಲ್ ಬ್ಯಾಟಿಂಗ್ ಮಾಡಿದ್ದು, 38.50ರ ಸರಾಸರಿಯಲ್ಲಿ 3 ಶತಕ ಹಾಗೂ 1 ಅರ್ಧಶತಕ ಗಳಿಸಿದ್ದಾರೆ. ಇಂಗ್ಲೆಂಡ್ನಂತ ಸ್ಪೀಡ್ ಟ್ರ್ಯಾಕ್ಗಳಲ್ಲಿ ಬ್ಯಾಟ್ ಬೀಸೋದು ಸುಲಭದ ಮಾತಲ್ಲ. ಆದ್ರೆ, ರಾಹುಲ್ ಇಂಗ್ಲೆಂಡ್ನಲ್ಲಿ ಮೂರು ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಒಮ್ಮೆ ಕೇವಲ 1 ರನ್ನಿಂದ ದ್ವಿಶತಕ ಮಿಸ್ ಮಾಡಿಕೊಂಡಿದ್ದಾರೆ.
ಈ ಬಾರಿ ತಂಡದಲ್ಲಿಲ್ಲ ಟೆಸ್ಟ್ ಸ್ಪೆಷಲಿಸ್ಟ್ ಅಜಿಂಕ್ಯ ರಹಾನೆ..!
ಕಳೆದ ಬಾರಿ ಇಂಗ್ಲೆಂಡ್ ಪ್ರವಾಸದಲ್ಲಿ ಅಜಿಂಕ್ಯ ರಹಾನೆ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿದ್ರು. ಆದ್ರೆ, ಈ ಬಾರಿ ಔಟ್ ಆಫ್ ಫಾರ್ಮ್ನಿಂದಾಗಿ ಟೆಸ್ಟ್ ಸ್ಪೆಷಲಿಸ್ಟ್ ಟೀಮ್ ಇಂಡಿಯಾದಿಂದ ಹೊರುಗುಳಿದಿದ್ದಾರೆ. ಹೀಗಾಗಿ ರಹಾನೆ ಅಲಭ್ಯತೆಯೂ ಮಿಡಲ್ ಆರ್ಡರ್ನಲ್ಲಿ ತಂಡಕ್ಕೆ ಕಾಡಲಿದೆ.
ರಹಾನೆ ಇಂಗ್ಲೆಂಡ್ ನೆಲದಲ್ಲಿ ಹೇಳಿಕೊಳ್ಳುವಂತ ದಾಖಲೆ ಹೊಂದಿಲ್ಲ. ಆದ್ರೆ, ಆಂಗ್ಲರ ಡೆಡ್ಲಿ ಬೌಲಿಂಗ್ ಅಟ್ಯಾಕ್ನಾ ಎದುರಿಸುವಲ್ಲಿ, ಜೊತೆಗೆ ಮಿಡಲ್ ಆರ್ಡರ್ನಲ್ಲಿ ರಹಾನೆ ಅನುಭವ ಖಂಡೀತಾ ತಂಡಕ್ಕೆ ನೆರವಾಗುತ್ತಿತ್ತು, ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಲಾರ್ಡ್ಸ್ ಅಂಗಳದಲ್ಲಿ ಶತಕ ದಾಖಲಿಸಿದ ಕೆಲವೇ ಕೆಲವು ಇಂಡಿಯನ್ ಬ್ಯಾಟ್ಸ್ಮನ್ಗಳ ಪೈಕಿ ರಹಾನೆಯೂ ಒಬ್ರು.
ಅದೇನೆ ಇರಲಿ, ರಾಹುಲ್ ಹಾಗೂ ರಹಾನೆ ಅಲಭ್ಯತೆ ಟೀಮ್ ಇಂಡಿಯಾಗೆ ಕಾಡಿದ್ರು ಅಚ್ಚರಿ ಇಲ್ಲ. ಆದ್ರೆ, ಹಾಗಾಗದಿರಲಿ, ತಂಡದ ಇತರೆ ಬ್ಯಾಟ್ಸ್ಮನ್ಗಳು ಅಬ್ಬರಿಸಿ ಭಾರತಕ್ಕೆ ಸರಣಿ ಜಯ ತಂದುಕೊಡಲಿ ಅನ್ನೋದೆ ಅಭಿಮಾನಿಗಳ ಆಶಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post