ಕನ್ನಡಿಗ ರಕ್ಷಿತ್ ಶೆಟ್ಟಿಯ ಚಾರ್ಲಿ ಚಿತ್ರ ಪ್ರಪಂಚದಾದ್ಯಂತ ರಿಲೀಸ್ ಆದ್ಮೇಲೆ ಶ್ವಾನಗಳ ಬಗ್ಗೆ ಇರುವ ಭಾವನೆಗಳು ತುಂಬಾ ಬದಲಾಗುತ್ತಿವೆ. ಅವುಗಳ ಮೇಲಿರುವ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತಿದೆ. ಹಾಗೆಯೇ ನಾಯಿಗಳ ಕುರಿತ ಸುದ್ದಿಗಳು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಟ್ರೆಂಡಿಂಗ್ನಲ್ಲಿವೆ.
ಅಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಎರಡು ನಾಯಿಗಳಿಗೆ ಮದುವೆ ಮಾಡಿಸಿರೋ ವಿಡಿಯೋ ಒಂದು ವೈರಲ್ ಆಗಿದೆ. ಮಳೆಗಾಗಿ ಕಪ್ಪೆ, ಕತ್ತೆಗಳಿಗೆ ಮದುವೆ ಮಾಡಿರುವ ಬಗ್ಗೆ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲಿ ನಾಯಿಯಗಳ ದಾಂಪತ್ಯ ಜೀವನಕ್ಕಾಗಿಯೇ ಮದುವೆ ಮಾಡಿಸಲಾಗಿದೆ.
ಮಹಿಳೆಯೊಬ್ಬರು ಎರಡು ನಾಯಿಗಳಿಗೆ ಮದುವೆ ಮಾಡಿಸಿ, ಪ್ರಮಾಣ ವಚನ ಬೋಧಿಸಿದ್ದಾರೆ. ಈ ಶುಭಕಾರ್ಯದಲ್ಲಿ ಗಂಡು ನಾಯಿಗೆ ಬ್ಲ್ಯಾಕ್ ಕೋಟ್ ತೊಡಿಸಲಾಗಿತ್ತು. ಹೆಣ್ಣು ನಾಯಿ ಲೂನಾಗೆ ಉದ್ದವಾದ ಗೌನ್ ಹಾಕಿ ಶೃಂಗರಿಸಲಾಗಿತ್ತು.
Hey My Name is Luna ಎಂಬ ಹೆಸರಿನ ಇನ್ಸ್ಟಾಗ್ರಾಮ್ನಲ್ಲಿ ಮದುವೆಯ ವಿಡಿಯೋವನ್ನ ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ನಾಯಿಗಳು ಮದುವೆ ಆಗುತ್ತಿರೋದನ್ನ ನೋಡಬಹುದಾಗಿದೆ. ಮಹಿಳೆಯೊಬ್ಬರು ಮದುವೆ ಕಾರ್ಯಕ್ರಮವನ್ನ ನಡೆಸಿಕೊಟ್ಟಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನ 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post