ರಾಯಚೂರು: ಲಿಂಗಸುಗೂರಿನ ರೋಡಲಬಂಡಾ ಗ್ರಾಮ ಪಂಚಾಯತಿ ಅಧ್ಯಕ್ಷ ಅಮರೇಶ್ ಸಂಗಪ್ಪ ಮೇಟಿಯನ್ನ ಕಿಡ್ನ್ಯಾಪ್ ಮಾಡಿದ್ದಾರೆ.
ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂನ್ 21 ರಂದು ಬೀಳಗಿಯಲ್ಲಿರುವ ಲಾಡ್ಜ್ ಒಂದಕ್ಕೆ ಏಕಾಏಕಿಯಾಗಿ ನುಗ್ಗಿದ ಗ್ಯಾಂಗ್ ಒಂದು, ಅಮರೇಶ್ ಸಂಗಪ್ಪ ಅವರನ್ನ ಎಳೆದುಕೊಂಡು ಹೋಗಿದ್ದಾರೆ. 15 ತಿಂಗಳ ಕಾಲ ಅಧ್ಯಕ್ಷರಾಗಿ ಮೊನ್ನೆಯಷ್ಟೇ ಅಮರೇಶ್ ಸಂಗಪ್ಪ ಮೇಟಿಯನ್ನ ಒತ್ತಾಯಪೂರ್ವಕವಾಗಿ ರಾಜೀನಾಮೆ ನೀಡಿದ್ದರಂತೆ. ರಾಜೀನಾಮೆ ನೀಡಿದ ಬೆನ್ನಲ್ಲೇ ಅಪಹರಣ ಮಾಡಲಾಗಿದೆ.
ಕಿಡ್ನ್ಯಾಪ್ ಮಾಡಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬೀಳಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಯಾಕೆ ಕಿಡ್ನ್ಯಾಪ್ ಮಾಡಲಾಗಿದೆ? ಯಾರು ಮಾಡಿದ್ದಾರೆ ಅನ್ನೋದ್ರ ವಿವರ ಇನ್ನೂ ಲಭ್ಯವಾಗಿಲ್ಲ.
ರೀಲ್ ಅಲ್ಲ, ರಿಯಲ್..! ಲಾಡ್ಜ್ಗೆ ನುಗ್ಗಿ ಗ್ರಾಪಂ ಮಾಜಿ ಅಧ್ಯಕ್ಷನ ಕಿಡ್ನ್ಯಾಪ್ -ವಿಡಿಯೋ https://t.co/NTycScaGcw #newsfirstlive #NewsFirstKannada@BSBommai pic.twitter.com/T8Zm2WG1FX
— NewsFirst Kannada (@NewsFirstKan) June 24, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post