ಕೋಲಾರ: ಮುಳಬಾಗಿಲು ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಆರೋಪಿ ಬಾಲಾಜಿ ಸಿಂಗ್ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಸುಫಾರಿ ಕಿಲ್ಲರ್ ಬಾಲಾಜಿ ಚಲುವನಹಳ್ಳಿ ಬಳಿಯಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮುಳಬಾಗಿಲು ಪೊಲೀಸ್ ಅಧಿಕಾರಿಗಳು ಆತನನ್ನ ಬಂಧಿಸಲು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆ ಬಾಲಾಜಿ ಹಲ್ಲೆಗೆ ಮುಂದಾಗಿದ್ದಾನೆ. ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ಫೈರಿಂಗ್ ಮಾಡಿದ್ದಾರೆ.
ಆರೋಪಿಯನ್ನ ಹಡೆಮುರಿ ಕಟ್ಟಿರುವ ಪೊಲೀಸರು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವ್ರ ಬಲಗೈ ಬಂಟರಾಗಿದ್ದ ಜಗನ್‌ಮೋಹನ್ ರೆಡ್ಡಿಯನ್ನ ಜೂನ್ 7 ರಂದು ನಾಲ್ವರು ದುಷ್ಕರ್ಮಿಗಳು ಮುತ್ಯಾಲಪೇಟೆ ಬಳಿ ದಾಳಿ ಮಾಡಿ ಸಾಯಿಸಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post