ಮುಂಬೈ: ಟಾಟಾ ಕಂಪನಿಯ ನೆಕ್ಸಾನ್ ಎಲೆಕ್ಟ್ರಿಕಲ್ ಕಾರಿಗೆ ಇಂಡಿಯಾದಲ್ಲಿ ಬಹುಬೇಡಿಕೆ ಇದೆ. ಆದ್ರೆ ಇದೇ ಐಷಾರಾಮಿ ಎಲೆಕ್ಟ್ರಾನಿಕ್ ಕಾರು ನಿನ್ನೆ ಮುಂಬೈನಲ್ಲಿ ಇದ್ದಕ್ಕಿದಂತೆ ಹೊತ್ತಿ ಉರುದಿದೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಈ ಮಾದರಿಯ ಕಾರಿನಲ್ಲಿ ಬೆಂಕಿ ಕಾಣಿಸಿರೋದು ಗ್ರಾಹಕರನ್ನ ಚಿಂತೆಗೀಡು ಮಾಡಿದೆ.
ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣ ಒಂದೆರೆಡಲ್ಲ. ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ಇವಿ ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿದ್ವು. ಇದು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕೊಳ್ಳುವ ಗ್ರಾಹಕರನ್ನ ಆತಂಕಕ್ಕೆ ತಳ್ಳಿತ್ತು. ಆದ್ರೀಗ ದೇಶದ ಅತ್ಯಂತ ಸುರಕ್ಷಿತ ಕಾರು ಎಂದೇ ಪ್ರಸಿದ್ಧಿಪಡೆದಿರೋ ಟಾಟಾ ನೆಕ್ಸಾನ್ ಇವಿ ಕಾರು ಕೂಡಾ ಬೆಂಕಿಗೆ ಆಹುತಿಯಾಗಿದೆ.
ಟಾಟಾ ಮೋಟರ್ಸ್ ಎಲೆಕ್ಟ್ರಿಕ್ ಕಾರು ಸುಟ್ಟು ಭಸ್ಮ!
ದೇಶದಲ್ಲೇ ಮೊದಲ ಬಾರಿಗೆ ಈ ಮಾದರಿ ಕಾರಿನಲ್ಲಿ ಬೆಂಕಿ!
ಮುಂಬೈನಲ್ಲಿ ಟಾಟಾ ಮೋಟರ್ಸ್ನ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನ ಚಲಾಯಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡಿದೆ. ಕಾರನ್ನ ಚಾರ್ಜ್ ಮಾಡಿ ಕೇವಲ 5 ಕಿಲೋ ಮೀಟರ್ ಪ್ರಯಾಣಿಸ್ತಿದ್ದಂತೆ ಶಾರ್ಟ್ ಸರ್ಕ್ಯೂಟ್‌ನಿಂದ ಐಷಾರಾಮಿ ಎಲೆಕ್ಟ್ರಾನಿಕ್ ಕಾರು ಬೆಂಕಿಯಲ್ಲಿ ಭಸ್ಮವಾಗಿದೆ. ತಕ್ಷಣವೇ ಕಾರಿನಿಂದ ಇಳಿದು ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನೂ ಟಾಟಾ ಕಂಪನಿಯ ಎಲೆಕ್ಟ್ರಿಕ್ ಕಾರಲ್ಲಿ ಈ ದೋಷ ಕಾಣಿಸಿಕೊಂಡಿರೋದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.
ಕಾರ್ನಲ್ಲಿ ಬೆಂಕಿ ಕಾಣಿಸಿದ್ದೇಗೆ?
ಸ್ಲೋ ಚಾರ್ಜರ್‌ನಲ್ಲಿ ಮಾಲೀಕ ಕಾರನ್ನು ಚಾರ್ಜಿಂಗ್ ಮಾಡಿದ್ದಾನೆ. ಬಳಿಕ ಮನೆಗೆ ಹೋಗುವಾಗ 5 ಕಿಲೋ ಮೀಟರ್ ಪ್ರಯಾಣಿಸಿದಾಗ ಕಾರಿನಿಂದ ವಿಚಿತ್ರ ಶಬ್ದವೊಂದು ಕೇಳಿಸಿದೆ. ಈ ವೇಳೆ ಕಾರಿನ ಡಿಸ್‌ಪ್ಲೇಯಲ್ಲಿ ಅಪಾಯದ ಮುನ್ಸೂಚನೆ ಪ್ರಕಟವಾಗಿತ್ತಂತೆ ಕಾರಿನ ಮಾಲೀಕ ಕೆಳಗೆ ಇಳಿದಿದ್ದಾನೆ. ಕೆಲ ಹೊತ್ತಲ್ಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗಿಸಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
#Mumbai : A #TataNexon #electric vehicle burst into flames at a busy intersection in Vasai Road.
Foam was utilised to put out the electric fire by the #vasai #FireBrigade.There were no recorded accidents. pic.twitter.com/VxJwEy82N8
— Indian fire service (@Indianfireserv2) June 23, 2022
ಇನ್ನೂ ಈ ಪ್ರಕರಣವನ್ನು ಟಾಟಾ ಮೋಟಾರ್ಸ್ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ನೆಕ್ಸಾನ್ ಕಾರಿನಲ್ಲಿರೋ ದೋಷದ ಬಗ್ಗೆ ತನಿಖೆ ಮಾಡುವುದಾಗಿ ತಿಳಿಸಿದೆ. ಅಲ್ಲದೇ ಕೇಂದ್ರ ಸರ್ಕಾರ ಕೂಡಾ ಎಲೆಕ್ಟ್ರಿಕ್ ಕಾರು ಹೊತ್ತಿ ಉರಿದಿರೋ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶಿಸಿದೆ.
ತನಿಖೆಗೆ ಆದೇಶ!
ಟಾಟಾ ಮೋಟರ್ಸ್ನ ನೆಕ್ಸಾನ್ ಕಂಪನಿಯ ಕಾರು ಇದಾಗಿದ್ದು ಅಗ್ನಿ ಅವಘಡದ ಬಗ್ಗೆ ಇನ್ನೂ ನಿಖರ ಮಾಹಿತಿಗಳು ಹೊರಬಿದ್ದಿಲ್ಲ. ಟಾಟಾ ಮೋಟರ್ಸ್ ಕಂಪನಿ 30,000ಕ್ಕೂ ಅಧಿಕ ಎಲೆಕ್ಟ್ರಿಕ್ ಕಾರಗಳನ್ನು ಮಾರಾಟ ಮಾಡಿದ್ದೇವೆ. ಆದರೆ ಈ ಮಾದರಿಯ ಕಾರಿನಲ್ಲಿ ಇದೇ ಮೊದಲ ಬಾರಿಗೆ ಬೆಂಕಿ ಕಾಣಿಸಿಕೊಂಡಿದೆ. ವಾಹನಗಳ ಹಾಗೂ ಅವುಗಳ ಬಳಕೆದಾರರ ಸುರಕ್ಷತೆಗೆ ನಾವು ಜವಾಬ್ದಾರರಾಗಿರುತ್ತೇವೆ. ಈ ಪ್ರಕರಣವನ್ನ ಟಾಟಾ ಮೋಟಾರ್ಸ್ ಗಂಭೀರವಾಗಿ ಪರಿಗಣಿಸಲಾಗಿದೆ ಎಂದಿದೆ. ಅಲ್ಲದೇ ಈ ಪ್ರಕರಣವನ್ನ ಸ್ವತಂತ್ರ ತನಿಖೆಗೆ ಕೇಂದ್ರ ಸರ್ಕಾರ ಆದೇಶಿದೆ.
ಒಟ್ಟಿನಲ್ಲಿ ದೇಶದಲ್ಲಿ ದುಬಾರಿ ಎಲೆಕ್ಟ್ರಾನಿಕ್ ವಾಹನಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಲೇ ಇದೆ. ಹಾಗೆಯೇ ಮುಂಬೈನಲ್ಲೂ ಮೊಟ್ಟ ಮೊದಲ ಬಾರಿಗೆ ಟಾಟಾ ಮೋಟರ್ಸ್ಎಲೆಕ್ಟ್ರಾನಿಕ್ ನೆಕ್ಸಾನ್ ಕಾರು ಬೆಂಕಿಯಲ್ಲಿ ಹೊತ್ತಿ ಉರಿದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post