ಬೆಂಗಳೂರು: ಆಟೋಗಳನ್ನೇ ಟಾರ್ಗೇಟ್ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಕಲಾಸಿಪಾಳ್ಯ ಪೋಲಿಸರು ಬಂಧಿಸಿದ್ದಾರೆ. ಇಂದು ಬೆಳಗಿನ ಜಾವ 3 ಗಂಟೆಗೆ ವ್ಯಕ್ತಿಯೊರ್ವ ತರಕಾರಿ ತೆಗೆದುಕೊಳ್ಳಲೆಂದು ಆಟೋದಲ್ಲಿ ಮಾರ್ಕೇಟ್ ಗೆ ಬಂದಿದ್ದ.
ಬಳಿಕ ಪಾರ್ಕ್ ಮಾಡಿರೊ ಸ್ಥಳಕ್ಕೆ ಹೋಗಿ ನೋಡಿದಾಗ ಆಟೋ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಕಲಾಸಿಪಾಳ್ಯ ಪೊಲೀಸ್ರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೋಲಿಸರು ಕೊನೆಗೂ ಆರೋಪಿಗಳನ್ನು ಬಂಧಸಿದ್ದಾರೆ. ಇನ್ನು ಬಂಧಿತ ಆರೋಪಿಗಳಿಂದ 16 ಲಕ್ಷ ಮೌಲ್ಯದ 9 ಆಟೋ ರಿಕ್ಷಾ ವಶಕ್ಕೆ ಪಡೆಯಲಾಗಿದೆ.
ಬರೋಬ್ಬರಿ 16 ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ ಆಸಾಮಿಯ ಬಂಧನ..
ದ್ವಿಚಕ್ರ ವಾಹನ ಕಳ್ಳತನ ಮಾಡ್ತಿದ್ದ ಖತರ್ನಾಕ್ ಆಸಾಮಿಯನ್ನ ಬೆಂಗಳೂರಿನ ಜೆಜೆ ನಗರ ಪೊಲೀಸರು ಬಂಧಿಸಿದ್ದಾರೆ. ಬೈಕ್ ಕಳ್ಳತನದ ಕುರಿತು ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದಾಗ ಖತರ್ನಾಕ್ ಖದೀಮ ಸೆರೆಸಿಕ್ಕಿದ್ದಾನೆ.
ಬಂಧಿತ ಬರೋಬ್ಬರಿ 16 ಬೈಕ್ಗಳನ್ನ ಕಳ್ಳತನ ಮಾಡಿದ್ದು, 9 ಲಕ್ಷ 80 ಸಾವಿರ ರೂಪಾಯಿ ಮೌಲ್ಯದ 16 ಬೈಕ್ಗಳನ್ನ ಪೊಲೀಸರು ಜಫ್ತಿ ಮಾಡಿದ್ದಾರೆ. ಬಂಧಿತನ ವಿರುದ್ದ ಬಸವನ ಗುಡಿ, ಜೆಜೆನಗರ, ವಿಜಯನಗರ ಸೇರಿ ಹಲವು ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದವು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post