ಈಕೆ ಮಾಡೆಲ್ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದ ಚೆಲುವೆ. ಇನ್ನಷ್ಟು ದೊಡ್ಡ ಹೆಸರು ಮಾಡ್ಬೇಕು, ಸೌಂದರ್ಯ ಲೋಕದಲ್ಲಿ ಚಿಟ್ಟೆಯಂತೆ ಹಾರಾಡಬೇಕು ಅಂತ ಕನಸು ಕಂಡವಳು. ವಯಸ್ಸು ಬರೀ 27 ಅಷ್ಟೇ, ಬಟ್ ಯಾರೋ ಮಾಡಿದ ತಪ್ಪಿಗೆ ಎರಡು ತಿಂಗಳು ಅಕ್ಷರಶಃ ನರಕ ಅನುಭವಿಸಿದ್ದಾಳೆ, ಅಂತಿಮವಾಗಿ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾಳೆ. ತಮಿಳಿನ ಶಂಕರ್ ನಿರ್ದೇಶನದ, ವಿಕ್ರಮ್ ಅಭಿನಯನದ ಐ ಸಿನಿಮಾ 2015 ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿತ್ತು. ಆ ಸಿನಿಮಾದಲ್ಲಿ ವೈರಿಗಳು ಹೇಗೆ ಸಡ್ಯಂತ್ರ ಮಾಡ್ತಾರೆ. ಅದಕ್ಕೆ ಪ್ರತಿಯಾಗಿ ವೈರಿಗಳ ಹೆಡೆಮುರಿಯನ್ನು ಹೀರೋ ಹೇಗೆ ಕಡ್ತಾನೆ ಅನ್ನೋದನ್ನು ಚೆಂದವಾಗಿ ತೋರಿಸ್ಲಾಗಿದೆ. ಸಿನಿಮಾದಲ್ಲಿ ಮಾಡಲ್ ಆಗಿ ಕಾಣಿಸಿಕೊಂಡ ವಿಕ್ರಮ್ ಹಣ, ಖ್ಯಾತಿ ಎಲ್ಲವನ್ನು ಸಂಪಾದಿಸುತ್ತಾನೆ.
ಇನ್ನು ದೊಡ್ಡ ಮಟ್ಟದಲ್ಲಿ ಹೆಸರು ಮಾಡೋ ಕನಸು ಹೊಂದಿರ್ತಾನೆ. ಆದ್ರೆ ವೈರಿಗಳು ಕುರೂಪಿಯಾಗುವಂತೆ ಮಾಡಿ ಬಿಡ್ತಾರೆ. ಗುರುತಿಸಲು ಸಾಧ್ಯವಿಲ್ಲದ ಮಟ್ಟಿಗೆ ಅಂದವನ್ನು ಕೆಡಿಸಿ ಬಿಡ್ತಾರೆ. ಆಮೇಲೆ ಅದಕ್ಕೆ ವಿಕ್ರಮ್ ಸೇಡು ತೀರಿಸಿಕೊಳ್ತಾರೆ ಅನ್ನೋದು ಬೇರೆ ವಿಚಾರ. ಅದು ಸಿನಿಮಾ ಅಷ್ಟೇ, ಬಟ್ ನಿಜ ಜೀವನದಲ್ಲಿಯೂ ಮಾಡೆಲ್‌ಗಳಿಗೆ ವೈರಿಗಳು ಇರ್ತಾರೆ. ಯಾವ ಸಮಯದಲ್ಲಿ ಜೀವಕ್ಕೆ ಸಂಚಕಾರ ತರ್ತಾರೆ ಅಂತ ಹೇಳಲು, ಊಹಿಸಲು ಸಾಧ್ಯವೇ ಇಲ್ಲ. ವಿಶೇಷ ಅಂದ್ರೆ, ಅಚಾತುರ್ಯದ ಸಾವು, ಸಹಜ ಸಾವು ಅಂತ ಕಾಣಿಸಿಕೊಂಡ ಅದೆಷ್ಟೋ ಪ್ರಕರಣಗಳ ಹಿಂದೆ ಕಾಣದ ಕೈಗಳ ಷಡ್ಯಂತ ಇರುತ್ತೆ. ಯಾರದ್ದೋ ದ್ವೇಷ ಇರುತ್ತೆ.
ಬಳಕುವ ಬಳ್ಳಿಯಂತೆ ತೆಳ್ಳಗೆ ಬೆಳ್ಳಗೆ ಇರೋ ಈ ಮಾಡೆಲ್ ನೋಡ್ತಾ ಇದ್ರೆ ಬ್ಯಾಚುಲರ್‌ಗಳು ಒಮ್ಮೆ ಕ್ರಶ್‌ಗೆ ಒಳಗಾಗಿ ಬಿಡ್ತಾರೆ. ಹಾಲು ಬಿಳುಪಿನ ಬೆಳಕಿನಲ್ಲಿ ಈಕೆ ಹೆಜ್ಜೆ ಹಾಕ್ತಾ ಇದ್ರೆ ಅದನ್ನು ನೋಡೋ ಚೆಂದವೇ ಬೇರೆ. ಬಟ್, ಮರಳಿ ಬಾರದ ಲೋಕಕ್ಕೆ ಪ್ರಯಾಣಿಸೋ ಈಕೆಗೆ ದೊಡ್ಡ ಕನಸಿತ್ತು. ತಾನು ಮಾಡೆಲಿಂಗ್ ಕ್ಷೇತ್ರದಲ್ಲಿ ಅಳಿಸಲಾಗದ ಹೆಸರು ಮಾಡ್ಬೇಕು ಅನ್ನೋ ಹಠ ಇತ್ತು. ಸೌಂದರ್ಯ ಲೋಕದಲ್ಲಿ ಚಿಟ್ಟೆಯಂತೆ ಹಾರಾಡ್ಬೇಕು ಅಂತ ಹಗಲು ರಾತ್ರಿ ಕನಸು ಕಾಣ್ತಾ ಶ್ರಮ ವಹಿಸ್ತಾ ಇದ್ದಳು. ವಯಸ್ಸು ಬರೀ 27 ಆಗಿತ್ತು. ಹೀಗಾಗಿ ಇನ್ನು ಬಾಳಿ ಬದುಕ ಬೇಕಾದ ವಯಸ್ಸು ತುಂಬಾನೇ ಇತ್ತು. ಬಟ್, ಆಕೆ ಅಂದುಕೊಂಡಿದ್ದೇ ಒಂದು ವಿಧಿ ಬರಹ ಇದ್ದಿದ್ದೇ ಇನ್ನೊಂದು. ಅಂದ ಹಾಗೇ ಈ ಅಂದಗಾತಿಯ ಹೆಸರು ಗ್ಲೇಸಿ ಕೋರಿಯಾ, ಬ್ರೆಜಿಲ್‌ನ ಮಾಡೆಲ್.
ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ಸಾವು…
ಮಾಡೆಲ್ ಲೋಕಕ್ಕೆ ಮತ್ತೊಂದು ದೊಡ್ಡ ಆಘಾತ..
ಮಾಡೆಲಿಂಗ್ ಜೀವನವೇ ಹಾಗೇ ಅಲ್ಲಿ ಯಾರು ಮಿತ್ರರು ಯಾರು ಶತ್ರುಗಳನ್ನು ಅನ್ನೋದನ್ನು ಗೊತ್ತು ಮಾಡೋದೇ ಅಸಾಧ್ಯದ ಮಾತು. ಜೊತೆ ಜೊತೆಯಲ್ಲಿಯೇ ಇರ್ತಾರೆ, ಅಂತಿವಾಗಿ ಅವರೇ ಮೋಸ ಮಾಡಿ ಬಿಡ್ತಾರೆ. ಯಾವುದಾದ್ರೂ ರೂಪದಲ್ಲಿ ಹಗೆತನ ತೀರಿಕೊಂಡೇ ಬಿಡ್ತಾರೆ. ಮಾಜಿ ಮಿಸ್ ಬ್ರೆಜಿಲ್ ಆಗಿರೋ ಗ್ಲೇಸ್ ಕೊರಿಯಾ ಕ್ಯಾಟ್ ವಾಕ್ ಮಾಡ್ತಾ ಸಖತ್ ಸದ್ದು ಮಾಡಿದ್ಲು. ಯಾವುದೇ ಫ್ಯಾಷನ್ ಶೋ ಅದ್ರೂ ಈಕೆಗೆ ಆಹ್ವಾನ ಇರ್ತಾ ಇತ್ತು. ಈಕೆ ಹೆಜ್ಜೆ ಹಾಕ್ತಾ ಇದ್ದಾಳೆ ಅಂದ್ರೆ ಅಭಿಮಾನಿಗಳು ಮೂಕ ಪ್ರೇಕ್ಷಕರಾಗಿ ಬಿಟ್ಟ ಕಣ್ಣು ಮುಚ್ಚದಂತೆ ನೋಡ್ತಾನೇ ಇರ್ತಿದ್ರು. ನೂರು ಮಾರು ದೂರದಲ್ಲಿ ಈ ಅಂದಗಾತಿ ಹೆಜ್ಜೆ ಹಾಕ್ತಾ ಇದ್ರೆ ಹೃದಯವೇ ಝಲ್ ಅನಿಸೋ ಸಾಮರ್ಥ್ಯ ಆಕೆಗೆ ಇತ್ತು. ಹೀಗಾಗಿ ಗ್ಲೇಸಿ ಕೊರಿಯಾವನ್ನು ಸೌಂದರ್ಯದ ಒಡತಿ ಅಂತಲೇ ಕರೆಯಲಾಗ್ತಾ ಇತ್ತು. ಬಟ್, ಏನೇನೋ ಸಾಧನೆ ಮಾಡ್ಬೇಕು ಅಂತ ಛಲ ಹೊತ್ತ ಈ ಸುಂದರಿ ಸಾವನ್ನಪ್ಪಿದ್ದಾಳೆ. ಈ ಮೂಲಕ ಮಾಡೆಲ್ ಲೋಕಕ್ಕೆ ಮತ್ತೊಂದು ಆಘಾತ ನೀಡಿದ್ದಾಳೆ.
2 ತಿಂಗಳು ಜೀವನ ಮರಣ ಹೋರಾಟ ಮಾಡಿದ ಗ್ಲೇಸಿ
ಕೊನೆಗೂ ಬದುಕಿ ಬರಲಿಲ್ಲ ದೊಡ್ಡ ಕನಸು ಹೊತ್ತ ಮಾಡೆಲ್
ಯಾರದೋ ತಪ್ಪಿಗೆ ಮತ್ತಾರೋ ಪ್ರಾಣ ಕಳ್ಕೊಂಡ್ರು ಅಂತೀವಲ್ಲ, ಈ ಬ್ರೆಜಿಲ್ ಮಾಡೆಲ್ ಕಥೆಯೂ ಹಾಗೇ ಇದೆ. ಈಕೆ ಯಾರ ವಿರೋಧವೂ ಕಟ್ಟುಕೊಂಡವಳಲ್ಲ, ತಾನಾಯಿತು ಮಾಡೆಲ್ ಲೋಕವಾಯ್ತು ಅಂತ ಇದ್ದವಳು. ಬಟ್, ಈಕೆ ಒಂದು ಕನಸು ಕಂಡಿದ್ರೆ ವಿಧಿ ಮತ್ತೊಂದು ಬರಹ ಬರೆದಿತ್ತು. ಅದು ಹೇಗಿತ್ತು ಅಂದ್ರೆ ಅಕ್ಷರಶಃ ನರಕ. ಹೌದು, ಯಾರೋ ಮಾಡಿದ ತಪ್ಪಿಗೆ ಈಕೆ 2 ತಿಂಗಳು ಕೋಮಾಗೆ ಹೋಗಿದ್ಲು. ಪ್ರಜ್ಞೆ ಇಲ್ಲದೇ ಸಾವು ಬದುಕಿನ ನಡುವೆ ಹೋರಾಟ ಮಾಡಿದ್ದಾಳೆ. ಈಕೆಯ ಪೋಷಕರು ಕಣ್ಣೀರು ಹಾಕುತ್ತಾ ಮಗಳು ಬದುಕಿ ಬಂದ್ರೆ ಸಾಕು ಅಂತ ಬೇಡಿಕೊಳ್ತಾ ಇದ್ರು. ಬಟ್, ಪೋಷಕರ ಕಣ್ಣೀರು ಫಲ ನೀಡಲಿಲ್ಲ, ಗ್ಲೇಸಿ ತಾನು ಸೌಂದರ್ಯ ಜಗತ್ತಿನಲ್ಲಿ ತನ್ನದೇ ಹೆಸರು ಮಾಡ್ಬೇಕು ಅಂತ ಕಾಣ್ತಾ ಇದ್ದ ಕನಸು ಈಡೇರಲಿಲ್ಲ. ಅಂದ್ರೆ, ಸಾವು ಬದುಕಿನ ಹೋರಾಟದಲ್ಲಿ ಜೀವನ ಪಯಣವವನ್ನು ಅಂತ್ಯವಾಗಿಸ್ತಾಳೆ.
2018 ರಲ್ಲಿ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಬ್ರೆಜಿಲ್ ಕಿರೀಟ
ಈಕೆಯ ಸೌಂದರ್ಯಕ್ಕೆ ಮೂಕವಿಸ್ಮಿತವಾಗಿದ್ದ ಬ್ರೇಜಿಲ್
ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿರೋ ಗ್ಲೇಸಿ ಮಾಡೆಲಿಂಗ್‌ನಲ್ಲಿ ತನ್ನದೇ ಛಾಪು ಮುಡಿಸಿದ್ದಳು. 1994 ರಲ್ಲಿ ಜನಿಸಿದವಳು ಕಾಲೇಜು ಜೀವನದಲ್ಲಿಯೇ ಮಾಡೆಲಿಂಗ್‌ಗೆ ಎಂಟ್ರಿ ಕೊಟ್ಟಿದ್ಲು. ಕಾಲೇಜಿನ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ಲು. ಅನೇಕ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ವಿಜಯ ಪತಾಕೆ ಹಾರಿಸಿದ್ಲು. ಆದ್ರೆ, ಈಕೆಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿದ್ದು ಅಂದ್ರೆ ಅದು 2018 ರಲ್ಲಿ ನಡೆದ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಬ್ರೆಜಿಲ್ ಸ್ಪರ್ಧೆ. ಹೌದು, ನೂರಾರು ಸ್ಪರ್ಧಿಗಳು ಪಾಲ್ಗೊಂಡಿದ್ರು, ನೋಡಲು ಒಬ್ಬರಿಗಿಂತ ಒಬ್ಬರು ಅಂದವಾಗಿ ಚೆಂದವಾಗಿ ಬಳಕುವ ಬಳ್ಳಿಯಂತೆ ಹೆಜ್ಜೆ ಹಾಕ್ತಾ ಇದ್ರು. ಅದೇನು ಸೌಂದರ್ಯ ಸ್ಪರ್ಧೆಯೋ ಇಲ್ಲ ದೇವಲೋಕದ ಅಪ್ಸರೆಯರ ನಡಿಗೆಯೋ ಅನ್ನೋ ಹಾಗಿತ್ತು ಆ ಸ್ಪರ್ಧೆ. ಬಟ್, ಜಡ್ಜ್‌ಗಳ ಮನಸ್ಸು ಗೆದ್ದವಳು ಗ್ಲೇಸಿ. ಈಕೆ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ತೊಡುತ್ತಾಳೆ. ಅಲ್ಲಿಯವರೆಗೆ ಈಕೆಯ ಜೀವನ ಒಂದು ರೀತಿಯಲ್ಲಿ ಇದ್ರೆ. ಅನಂತರ ಮತ್ತೊಂದು ರೂಪ ಪಡೆಯುತ್ತೆ. ಒಂದು ಪ್ರತಿಷ್ಠತ ಸ್ಪರ್ಧೆಯ ಗೆಲುವು ಗ್ಲೇಸಿ ಜೀವನದ ದಿಕ್ಕನ್ನೇ ಬದ್ಲಾಯಿಸಿ ಬಿಡುತ್ತೆ. ಅನೇಕ ಮಾಡೆಲ್ ಸ್ಪರ್ಧೆಯಲ್ಲಿ, ಜಾಹೀರಾತಿನಲ್ಲಿ ಈಕೆ ಹೆಜ್ಜೆ ಹಾಕ್ರಿದ್ರೆ ಮಾತ್ರ ಆ ಬ್ರಾಂಡ್‌ಗೆ ಒಂದು ತೂಕ ಅನ್ನೋ ರೇಂಜ್‌ಗೆ ಹೆಸರು ಮಾಡ್ತಾಳೆ. ಬಟ್, ಈಕೆಯ ಪ್ರಗತಿಯನ್ನು ಸಹಿಸದವರು ಇರ್ತಾರೆ. ಇಂದು ಈಕೆಗೆ ಆ ವೈರಿಗಳೇ ಏನಾದ್ರೂ ಮಾಡಿದ್ರಾ ಅನ್ನೋ ಶಂಕೆ ಇದ್ದೆ ಇದೆ.
ಮಾಡೆಲ್ ಜೊತೆಗೆ ಖ್ಯಾತ ಮೇಕಪ್ ಆರ್ಟಿಸ್ಟ್
ಈಕೆಗೆ ಇತ್ತು ದೊಡ್ಡ ಬ್ಯುಸಿನೆಸ್ ಮಾಡೋ ಕನಸು
ಜೀವನದಲ್ಲಿ ಕಾಣೋದಾದ್ರೆ ದೊಡ್ಡ ದೊಡ್ಡ ಕನಸನ್ನು ಕಾಣ್ಬೇಕು. ಮುಂದೊಂದು ದಿನ ಆ ಕನಸು ಈಡೇರುತ್ತೆ ಅಂತ ತಜ್ಞರು ಹೇಳ್ತಾರೆ. ಅಂದ್ರೆ, ಕನಸು ಕಂಡ ತಕ್ಷಣ ಅದು ಈಡೇರೋದಿಲ್ಲ, ಅದಕ್ಕೆ ಪೂರಕವಾಗಿ ಶ್ರಮವಹಿಸಿದ್ರೆ ಖಂಡಿತ ಅದು ಈಡೇರುತ್ತೆ ಅಂತ ಅರ್ಥ. ಇದೀಗ ಇಹಲೋಕ ತ್ಯಜಿಸಿರೋ ಗ್ಲೇಸಿ ಕೂಡ ದೊಡ್ಡ ದೊಡ್ಡ ಕನಸನ್ನು ಹೊಂದಿದ್ದ ಅಂದಗಾತಿಯಾಗಿದ್ಲು. ಬಟ್, ಕನಸು ಕಂಡು ಮಾರನೇ ದಿನ ಮರೆತು ಬಿಡೋ ಜಾಯಮಾನ ಆಕೆಗೆ ಇರ್ಲೇ ಇಲ್ಲ. ಮಾಡೆಲಿಂಗ್‌ನಲ್ಲಿ ಹೆಸರು ಮಾಡ್ಬೇಕು ಅಂತ ನುಗ್ಗಿದವಳು ಅದನ್ನು ಮಾಡಿಯಾಗಿತ್ತು. ಹಾಗೇ ಈಕೆ ಖ್ಯಾತ ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ಲು. ತಾನೊಬ್ಬಳು ಬ್ಯುಸಿನೆಸ್ ವುಮೆನ್ ಆಗ್ಬೇಕು ಅನ್ನೋ ಭಯಕೆಯನ್ನು ಹೊಂದಿದ್ಲು. ಒಟ್ಟಿಗೆ ಮೂರು ದಾರಿಯಲ್ಲಿ ಸಾಗ್ತಾ ಇದ್ಲು. ಬಟ್, ವಿಧಿಯಾಟ ಎಲ್ಲದಕ್ಕೂ ಫುಲ್ ಸ್ಟಾಪ್ ನೀಡಿದೆ. ಕೇವಲ 27ನೇ ವರ್ಷದಲ್ಲಿಯೇ ಗ್ಲೇಸಿ ಒಂದು ಲೆವೆಲ್‌ಗೆ ಹೆಸರು ಮಾಡಿದ್ಲು. ಗ್ಲೇಸಿ ಅಂದ್ರೆ ಯಾರು ಅನ್ನೋದನ್ನು ಬ್ರೆಜಿಲ್ ಜನತೆಗೆ ಪರಿಚಯ ಮಾಡಿಸಿದ್ಲು. ಆದ್ರೆ, ಈಕೆ ಸಾಗಬೇಕಾದ ಹಾದಿ ಇನ್ನೂ ಇತ್ತು. ಮಾಡಬೇಕಾದ ಸಾಧ್ಯನೆ ಬಾಕಿ ಇತ್ತು. ದುರಾದೃಷ್ಟ ಅಂದ್ರೆ ಸಾಧನೆಯ ಹಾದಿಯಲ್ಲಿ ಇರುವಾಗ್ಲೇ ಜೀವನ ಅಂತ್ಯವಾಗಿದೆ.
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post