ಬೆಂಗಳೂರು: ಕೊರೊನಾ ಮಾಹಾಮಾರಿಯ 3ನೇ ಅಲೆ ಆಟದಿಂದ ದೇಶ ಈಗಷ್ಟೇ ಹೊರ ಬಂದಿದೆ. ಲಾಕ್ ಡೌನ್, ಕರ್ಫ್ಯೂಯಿಂದ ಕಂಗೆಟ್ಟಿದ ಜನರ ಮನ ಹಾಗೂ ಮನಿ ಸ್ಥಿತಿ ಸುಧಾರಿಸಿಕೊಳ್ಳುತ್ತಿದೆ. ಆದ್ರೀಗ ಕಾಣದ ಕ್ರಿಮಿ ಮತ್ತೆ ದೇಶದಲ್ಲಿ ಹಾವಳಿ ಸ್ಟಾರ್ಟ್ ಮಾಡಿದೆ. ರಾಜ್ಯದಲ್ಲೂ ಕೊರೊನಾ ಓಟ ಮುಂದುವರಿದಿದ್ದು, ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಇದೀಗ ಮಾಸ್ಕ್ ದಂಡಾಸ್ತ್ರಕ್ಕೂ ಪ್ಲಾನ್ ಸಿದ್ಧವಾಗಿದೆ.
ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿನ ಹಾವಳಿ
ಮಾಸ್ಕ್ ದಂಡಾಸ್ತ್ರಕ್ಕೆ ಆರೋಗ್ಯ ಇಲಾಖೆ ಸಜ್ಜು!
ರಾಜ್ಯದಲ್ಲಿ ಸದ್ದಿಲ್ಲದೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಬಿಟ್ಟರೂ ಬಿಡದೀ ಮಾಯೆ ಎಂಬಂತೆ ಕಾಣದ ಕ್ರಿಮಿ ಮತ್ತೆ ಹಾವಳಿ ಇಟ್ಟಿದೆ. ಕಳೆದ ಕೆಲದಿನಗಳಿಂದ ರಾಜ್ಯದಲ್ಲಿ 500ಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾಗುತ್ತಿವೆ. ಹೀಗಾಗಿ ಸರ್ಕಾರ ಮತ್ತೆ ಮಾಸ್ಕ್‌ನ ಕಡ್ಡಾಯಗೊಳಿಸಿತ್ತು. ಆದ್ರೆ, ಜನರು ಮಾತ್ರ ಇದಕ್ಕೆಲ್ಲಾ ಜಗ್ಗುತ್ತಿಲ್ಲ. ಮಾಸ್ಕ್‌ನ ಧರಿಸುತ್ತಿಲ್ಲ. ಇದೆಲ್ಲವನ್ನ ಗಮನಿಸಿರೋ ಆರೋಗ್ಯ ಇಲಾಖೆ ಮಾಸ್ಕ್ ದಂಡಾಸ್ತ್ರದ ಮೊರೆ ಹೋಗಿದೆ. ಮಾಸ್ಕ್ ಧರಿಸದೇ ಅಸಡ್ಡೆ ತೋರುವವರಿಗೆ ದಂಡ ಪ್ರಯೋಗಕ್ಕೆ ಸಜ್ಜಾಗಿದೆ. ಕೊರೊನಾ ಹೆಚ್ಚುತ್ತಿದ್ದರೂ ಮಾಸ್ಕ್ ಹಾಕದೇ ಜನರು ನಿರ್ಲಕ್ಷ್ಯ ತೋರ್ತಿದ್ದಾರೆ. ದಂಡ ಇಲ್ಲದೇ ಇರೋದ್ರಿಂದ ಜನರು ಮಾಸ್ಕ್ ಬಗ್ಗೆ ತಲೆ ಕೆಡಿಸಿ ಕೊಳ್ತಿಲ್ಲ. ಹೀಗಾಗಿ ಆರೋಗ್ಯ ಇಲಾಖೆ ದಂಡಾಸ್ತ್ರಕ್ಕೆ ಮುಂದಾಗಿದೆ. ದಂಡಾಸ್ತ್ರಕ್ಕೆ ಅನುಮತಿ ನೀಡಲು ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.
ಮಾರಿಗೆ ‘ಮಾಸ್ಕ್’ ಮಂತ್ರ
1. ಮಾಸ್ಕ್ ಬಗ್ಗೆ ಮಾರ್ಷಲ್ ಎಷ್ಟೇ ಅರಿವು ಮೂಡಿಸಿದರೂ ನೋ ಯೂಸ್
2. ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನಂತೆ ದಂಡಾಸ್ತ್ರಕ್ಕೆ ಅನುಮತಿ ನೀಡಿ
3. ಬಹುತೇಕ ಕಡೆ RAT ಪಾಸಿಟಿವ್ ಬರ್ತಾಯಿದೆ ಅಂತಲೂ ಉಲ್ಲೇಖ
4. RAT ರಿಪೋರ್ಟ್ ಜಿನೋಮಿಕ್ ಸೀಕ್ವೆನ್ಸ್ಗೆ ಕಳುಹಿಸಲು TAC ಸಲಹೆ
5. ಬಳಿಕ 4 ರಿಂದ 5 ದಿನದ ಒಳಗೆ ವರದಿ ಕೊಡುವಂತೆ ಸರ್ಕಾರಕ್ಕೆ ಮನವಿ
ಮಾಸ್ಕ್ ಬಗ್ಗೆ ಮಾರ್ಷಲ್ಸ್ ಎಷ್ಟೇ ಅರಿವು ಮೂಡಿಸಿದ್ರೂ ಅದು ಪ್ರಯೋಜನಕ್ಕೆ ಬರ್ತಿಲ್ಲ. ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನಂತೆ ದಂಡಾಸ್ತ್ರಕ್ಕೆ ಅನುಮತಿ ನೀಡಿ. ಇನ್ನೂ ಬಹುತೇಕ ಕಡೆ ಱಪಿಡ್ ಆ್ಯಂಟಿಜೆನ್ ಟೆಸ್ಟ್ ಪಾಸಿಟಿವ್ ಬರ್ತಿದೆ ಅಂತಲೂ ಉಲ್ಲೇಖಿಸಲಾಗ್ತಿದೆ. ಹೀಗಾಗಿ ಱಪಿಡ್ ಆ್ಯಂಟಿಜನ್ ಟೆಸ್ಟ್ ರಿಪೋರ್ಟ್ ಜಿನೋಮಿಕ್ ಸೀಕ್ವೆನ್ಸ್ಗೆ ಕಳುಹಿಸಲು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಬಳಿಕ 4 ರಿಂದ 5 ದಿನದ ಒಳಗೆ ವರದಿ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಕೊರೊನಾ ಮಾರಿಯನ್ನ ಕಟ್ಟಿಹಾಕಲು ಮಾರ್ಗಸೂಚಿಯನ್ನೂ ಪ್ರಕಟಿಸುವಂತೆ ಆರೋಗ್ಯ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಸಿನಿಮಾ, ಮಾಲ್, ಜನ ಸಂದಣಿ ಪ್ರದೇಶದಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆಯಂತೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post