ಇಂದು ದುಬ್ಲಿನ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ 2ನೇ ಟಿ20 ಪಂದ್ಯದಲ್ಲಿ ಐರ್ಲೆಂಡ್ಗೆ ಟೀಂ ಇಂಡಿಯಾ ಬೃಹತ್ ಮೊತ್ತದ ಗುರಿ ನೀಡಿದೆ. ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ನಿಗದಿತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ ಬರೋಬ್ಬರಿ 227 ರನ್ ಗಳಿಸಿದೆ. ಈ ಮೂಲಕ 228 ರನ್ ಟಾರ್ಗೆಟ್ ನೀಡಿದೆ.
ಇಶಾನ್ ಕಿಶನ್ ಔಟ್ ಆದ ಬಳಿಕ ಕ್ರೀಸ್ಗೆ ಬಂದ ಒನ್ ಡೌನ್ ಬ್ಯಾಟ್ಸಮನ್ ದೀಪಕ್ ಟೀಂ ಇಂಡಿಯಾದ ಅದ್ಭುತ ಬ್ಯಾಟಿಂಗ್ ಮಾಡಿದ್ರು. ಕೇವಲ 55 ಬಾಲ್ನಲ್ಲಿ 100 ರನ್ ಚಚ್ಚಿದ ದೀಪಕ್ ಹೂಡಾ ಐರ್ಲೆಂಡ್ ಬೌಲರ್ಸ್ ಬೆಂಡೆತ್ತಿದರು. ಬರೋಬ್ಬರಿ 6 ಬಿಗ್ ಸಿಕ್ಸರ್, 8 ಫೋರ್ ಸಮೇತ ಸೆಂಚೂರಿ ಬಾರಿಸಿದ್ರು.
ಸಂಜು ಸ್ಯಾಮ್ಸನ್ ಕೂಡ ಕೊನೇವರೆಗೂ ಉತ್ತಮ ಆಟ ಆಡಿದ್ರು. 42 ಬಾಲ್ನಲ್ಲಿ 4 ಸಿಕ್ಸರ್, 9 ಫೋರ್ ಸಮೇತ 77 ರನ್ ಚಚ್ಚಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post