ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಇದರ ಬೆನ್ನಲೇ ಅವರು ನ್ಯೂಸ್ಫಸ್ಟ್ ಜೊತೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ನಟಿ ಪವಿತ್ರಾ ಲೋಕೇಶ್, ಒಬ್ಬ ವ್ಯಕ್ತಿ ಬದುಕಬೇಕಾದರೆ ಅವನಿಗೆ ಒಂದು ಕೆಲಸ ಇರಬೇಕು. ಅದಕ್ಕೆ ಹಣ ಸಂಪಾದನೆ ಮಾಡಬೇಕು. ಸಮಾಜದಲ್ಲಿ ಎಲ್ಲರೂ ಮೆಚ್ಚುವಂತಹ ಜೀವನ ನಡೆಸಬೇಕು. ಅದಕ್ಕೆ ಹಣ ಬೇಕು ಅಲ್ವ? ಹಣ ಇಲ್ಲ, ಏನೂ ಇಲ್ಲ ಅಂದ್ರೆ ಹೊಟ್ಟೆಗೆ ಗಂಜಿ ತಿಂದುಕೊಂಡು ಬದುಕೋಕೆ ಆಗಲ್ಲ. ನಾನೂ ಕಲಾವಿದೆ. ಅದರ ಮೇಲೆ ನಾನೂ ಬಂದು ಹೆಣ್ಣು. ನಾನೂ ರಸ್ತೆ ಮೇಲೆ ನಡೆದುಕೊಂಡು ಹೋಗಲು ಆಗೋದಿಲ್ಲ. ನನಗೆ ಒಂದು ಕಾರು ಬೇಕು. ಅದು ಬೇಕು, ಇದು ಬೇಕು ಅಂದ್ರೆ ಅದು ಮೂರ್ಖತನ. ಅವರ ವ್ಯಕ್ತಿತ್ವಕ್ಕೆ ಮೂರ್ಖತನ ಎಂದು ಹೇಳಿದ್ದಾರೆ.
ಇದನ್ನು ಒದಿ: ಹೆಣ್ಣು-ಗಂಡು ಇಬ್ಬರು ಒಟ್ಟಿಗಿದ್ರೆ ಮದ್ವೆನಾ? -ಪವಿತ್ರಾ ಲೋಕೇಶ್ ಗರಂ
ಇನ್ನು ತೆಲುಗು ನಟ ನರೇಶ್ರವರ ಬಗ್ಗೆ ಮಾತಮನಾಡಿದ ಅವರು , ತುಂಬಾ ಒಳ್ಳೆಯ ಮನುಷ್ಯ ನಾನು ನರೇಶ್ ಜೊತೆಗೆ ಇದ್ದೀವಿ. ಜೊತೆಗೆ ಹೊಗುತ್ತೀವಿ ಅದು ಹಂಗೆ ಇರುತ್ತೆ ಎಂದು ನಟಿ ಪವಿತ್ರಾ ಲೋಕೇಶ್ ಅವರು ನ್ಯೂಸ್ಫಸ್ಟ್ ಜೊತೆ ಪ್ರತಿಕ್ರಿಯೆ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post