ಬಹುಭಾಷಾ ನಟಿ ಪವಿತ್ರ ಲೋಕೇಶ್ ಆರೋಪ ಬೆನ್ನಲ್ಲೇ ನರೇಶ್ ಬಾಬು ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಸುದ್ದಿಗೋಷ್ಟಿ ನಡೆಸಿದರು.
ಈ ವೇಳೆ ಪವಿತ್ರ ಲೋಕೇಶ್ ಹಾಗೂ ತಮ್ಮ ಪತಿ ನರೇಶ್ ಬಾಬು ವಿರುದ್ಧ ಕೆಲವು ಗಂಭೀರ ಆರೋಪಗಳನ್ನ ಮಾಡಿದ್ರು. ಮನೆಯಲ್ಲಿ ಗಲಾಟೆಗಳು ಶುರುವಾದಾಗ ನರೇಶ್, ಮಾತಿಗೂ ಮೊದಲು ಗನ್ ತೆಗೆದುಕೊಳ್ತಾನೆ. ಗನ್ ತೆಗೆದುಕೊಂಡು ಡಿವೋರ್ಸ್ ಆಗಲೇಬೇಕು. ಯಾವತ್ತಿದ್ದರೂ ಆಗಬೇಕು. ಅದಕ್ಕೆ ಕಾರಣ ಕೇಳಬಾರದು ಎಂದು ಗದರಿಸುತ್ತಾನೆ ಎಂದು ಗಂಭೀರ ಆರೋಪ ಮಾಡಿದರು.
ಗನ್ ತೋರಿಸೋದು ಮಾತ್ರವಲ್ಲ, ಬುಲೆಟ್ ತೆಗೆದು ಕೈಮೇಲೆ ಇಟ್ಟುಕೊಂಡು ಒಂದೊಂದೆ ಡೈಲಾಗ್ ಹೊಡೆಯುತ್ತಾನೆ. ಲೈಸೆನ್ಸ್ ಇರುವ ಗನ್ ಅದು. ಆದರೆ ಅದರ ರಿನಿವಲ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post