ಬೆಂಗಳೂರು: ಕ್ಯಾ ಕಮಾಲ್ ಹೇ ಇಮ್ರಾನ್ ಭಾಯ್ ನಿಂದು.. ನೀನು ಯಾವದಾದ್ರು ಮನೆ ಮೇಲೆ ಕಣ್ಣಿಟ್ರೆ ಮುಗೀತಂತೆ. ಎಂತಹ ಹೈ ಸೆಕ್ಯೂರಿಟಿ ಇದ್ರು ಮಿಸ್ಸೆ ಆಗೋ ಮಾತೆ ಇಲ್ಲವಂತೆ. ಮನೆಗಳ್ಳತನವನ್ನೇ ಕರಗತ ಮಾಡಿಕೊಂಡ ಮೊಸ್ಟ್ ವಾಂಟೆಡ್ ಚೋರ್ ಇಮ್ರಾನ್ನನ್ನ ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಚೋರ್ ಇಮ್ರಾನ್ಗೆ ಹದಿನೈದು ವರ್ಷವಿದ್ದಾಗಿನಿಂದ ಕಳ್ಳತನಕ್ಕೆ ಟ್ರೈನಿಂಗ್ ಕೊಟ್ಟಿದ್ದು ಸ್ವಂತ ತಂದೆಯೇ. ಎಂಥದ್ದೆ ಭದ್ರತೆ ಇರುವ ಮನೆಗಳಲ್ಲೂ ಹತ್ತೇ ನಿಮಿಷಕ್ಕೆ ಮನೆಗಳ ಬೀಗ ಮುರಿದು ಕಳವು ಮಾಡ್ತಿದ್ದನಂತೆ. ಬಹಳ ಹಿಂದೆ ಪೊಲೀಸ್ ಇನ್ಫಾರ್ಮರ್ ಆಗಿದ್ದ ಅಪ್ಪ ಎಜಾಜ್ ಖಾನ್ ಮಗ ಚೋರ್ ಇಮ್ರಾನ್ಗೆ ಚಿಕ್ಕವಯಸ್ಸಿನಲ್ಲೇ ಕಳ್ಳತನದ ಟ್ರೇನಿಂಗ್ ಕೊಡ್ತಿದ್ದನಂತೆ.
ಆಗಿನಿಂದಲೇ ಪೊಲೀಸರು, ಯಾವ ಅಂಗಲ್ನಲ್ಲಿ ಕಳ್ಳರನ್ನು ಹಿಡಿಯುತ್ತಾರೆ, ಯಾವೆಲ್ಲಾ ಆಯಾಮಗಳನ್ನು ತನಿಖೆ ನಡೆಸ್ತಾರೆ ಅನ್ನೋದನ್ನ ಅಪ್ಪ ಹೇಳಿ ಕೊಟ್ಟಿದ್ದನಂತೆ. ಈತನ ಸಾಲು ಸಾಲು ಕೃತ್ಯಕ್ಕೆ ತಲೆಕೆಡಿಸಿಕೊಂಡಿದ್ದ ಪೊಲೀಸರು ಸದ್ಯ ಅಪ್ಪ ಏಜಾಜ್ ಖಾನ್, ಮಗ ಚೋರ್ ಇಮ್ರಾನ್, ಸೈಯದ್ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ 15 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಬಂಧಿತರಿಂದ 1ಕೆಜಿ 300 ಗ್ರಾಂ ಚಿನ್ನಾಭರಣ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post