ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು. ಮೇಕ್ ಇನ್ ಇಂಡಿಯಾದ ಜೊತೆಗೆ ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಮತ್ತೊಂದು ಹೆಜ್ಜೆ. ಸೇನೆಯಲ್ಲಿ ಆಧುನಿಕ ತಂತ್ರಜ್ಞಾನದ ಮತ್ತೊಂದು ಮಜಲನ್ನು ದಾಟಿದೆ. ಇತ್ತೀಚೆಗೆ ರಕ್ಷಣಾ ಇಲಾಖೆಗೆ ಸಂಬಂಧಪಟ್ಟಂತೆ ಹಲವು ದಾಖಲೆಗಳನ್ನು ಬರೆದಿರೋ ಡಿಆರ್ಡಿಒ ಮತ್ತೊಂದು ರೆಕಾರ್ಡ್ ಮಾಡಿದೆ.
ಯೆಸ್, ರಕ್ಷಣಾ ಕ್ಷೇತ್ರದಲ್ಲಿ ಮೋದಿ ಸರ್ಕಾರ ಒಂದಲ್ಲ ಒಂದು ಯಶಸ್ವೀ ಪರೀಕ್ಷೆಗಳನ್ನು ನಡೆಸ್ತಿದೆ. ಭಾರತೀಯ ಸೇನೆಯ ಸಾಮರ್ಥ್ಯ ಹೆಚ್ಚಿಸೋ ನಿಟ್ಟಿನಲ್ಲಿ ವಿನೂತನ ತಂತ್ರಜ್ಞಾನಕ್ಕೆ ಸರ್ಕಾರ ಹೆಚ್ಚು ಒತ್ತು ಕೊಡ್ತಿದೆ. ಅದ್ರಲ್ಲೂ ಸ್ವದೇಶಿ ನಿರ್ಮಾಣದ ಮೂಲಕ ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ಅಭಿಯಾನವನ್ನು ಮತ್ತೊಂದು ಲೆವೆಲ್ಗೆ ತೆಗೆದುಕೊಂಡು ಹೋಗ್ತಿದೆ. ಒಂದಾದ ಮೇಲೊಂದು ಸಂಶೋಧನೆ ಮೂಲಕ ರಕ್ಷಣಾ ಇಲಾಖೆ ಬಲರ್ವನೆ ಮಾಡ್ತಿದೆ. ಇದೀಗ ಡಿಆರ್ಡಿಒ ಮತ್ತೊಂದು ಪರೀಕ್ಷೆಯಲ್ಲಿ ಸಕ್ಸಸ್ ಆಗಿದೆ. ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ನಲ್ಲಿ ನಡೆದ ಮಾನವ ರಹಿತ ಲಘು ವಿಮಾನ ಹಾರಾಟ ಯಶಸ್ವಿಯಾಗಿದೆ.
#DRDOUpdates | Successful Maiden Flight of Autonomous Flying Wing Technology Demonstrator@PMOIndia https://t.co/K2bsCRXaYp https://t.co/brHxaH7wbF pic.twitter.com/SbMnI5tgUM
— DRDO (@DRDO_India) July 1, 2022
ಡಿಆರ್ಡಿಓ UAV ಸಕ್ಸಸ್..
ಬೆಂಗಳೂರಿನ ಎಡಿಇ ಅಂದ್ರೆ ಡಿಆರ್ಡಿಒನ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ನಿಂದ ವಿಮಾನವನ್ನು ಅಭಿವೃದ್ಧಿಪಡಿಸಲಾಗಿದೆ. ಸಂಪೂರ್ಣ ಸ್ವಾಯತ್ತವಾಗಿ ಕಾರ್ಯನಿರ್ವಹಣೆ ಮಾಡುವ ಈ ವಿಮಾನ ಸಣ್ಣ ಟರ್ಬೋಫ್ಯಾನ್ ಇಂಜಿನ್ ಚಾಲಿತವಾಗಿದೆ. ಟೇಕಾಫ್, ಲ್ಯಾಂಡಿಂಗ್, ವೇ ಪಾಯಿಂಟ್, ನೇವಿಗೇಷನ್ ಎಲ್ಲಾ ಬಗೆಯ ಟೆಸ್ಟ್ನಲ್ಲಿ ಮಾನವರಹಿತ ವಿಮಾನ ಪರೀಕ್ಷೆ ಸಕ್ಸಸ್ ಆಗಿದೆ. ಈ ಮೂಲಕ ಭವಿಷ್ಯದ ಚಾಲಕರಹಿತ ವಿಮಾನ ಅಭಿವೃದ್ಧಿಗೆ ಮೊದಲ ಮೆಟ್ಟಿಲು ಏರಿದಂತಾಗಿದೆ.
ಡಿಆರ್ಡಿಓ ಸಾಧನೆಗೆ ರಾಜನಾಥ್ ಸಿಂಗ್, ಸಿಎಂ ಬೊಮ್ಮಾಯಿ ಶ್ಲಾಘನೆ
ಇನ್ನು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಮಾನವರಹಿತ ವಿಮಾನ ಹಾರಾಟ ಪರೀಕ್ಷೆ ಸಕ್ಸಸ್ ಆಗ್ತಿದ್ದಂತೆ ಡಿಆರ್ಡಿಓಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಈಬಗ್ಗೆ ಟ್ವೀಟ್ ಮಾಡಿರೋ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೊದಲ ಯತ್ನದಲ್ಲೇ ಯಶಸ್ವಿಯಾದ ಅಧಿಕಾರಿಗಳು ವಿಜ್ಞಾನಿಗಳನ್ನು ಅಭಿನಂದಿಸಿದ್ರು.
Kudos @DRDO_India on successful inaugural flight of the Autonomous Flying Wing Technology Demonstrator from Chitradurga ATR, Karnataka. It’s a major milestone towards the development of future unmanned aircrafts & self-reliance in strategic defence technologies.
Well done DRDO. pic.twitter.com/lHvoo6zPpF— Basavaraj S Bommai (@BSBommai) July 1, 2022
ಡಿಆರ್ಡಿಓಗೆ ಅಭಿನಂದನೆಗಳು
ಚಿತ್ರದುರ್ಗದ ಎಟಿಆರ್ನಿಂದ ಮೊಟ್ಟಮೊದಲ ಸ್ವಾಯತ್ತ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾಸ್ಟ್ರೇಟರ್ನ ಯಶಸ್ವಿಗೆ ಡಿಆರ್ಡಿಓಗೆ ಅಭಿನಂದನೆಗಳು. ಇದು ಸ್ವಾಯತ್ತ ವಿಮಾನ ತಯಾರಿಕೆಯ ಕಾರ್ಯದಲ್ಲಿ ದೊಡ್ಡ ಸಾಧನೆಯಾಗಿದೆ. ಅಲ್ಲದೆ ಆತ್ಮನಿರ್ಭರ ಭಾರತದ ಕಡೆಗೆ ಒಂದು ಮಹತ್ವದ ಹೆಜ್ಜೆಯಾಗಿದ್ದು, ಸೇನೆಯ ಅಗತ್ಯ ಸಂದರ್ಭಕ್ಕೆ ಮಾವ ರಹಿತ ವಿಮಾನ ಒದಗಿಸುವಲ್ಲಿ ನೆರವಾಗಲಿದೆ.
-ರಾಜನಾಥ್ ಸಿಂಗ್, ರಕ್ಷಣಾ ಸಚಿವ
ಇನ್ನು ಈ ಬಗ್ಗೆ ಟ್ವೀಟ್ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇದು ಭವಿಷ್ಯದ ಮಾನವ ರಹಿತ ವಿಮಾನ ನಿರ್ಮಾಣ ಕಾರ್ಯದಲ್ಲಿ ಮೈಲುಗಲ್ಲಾಗಲಿದೆ. ವೆಲ್ಡನ್ ಡಿಆರ್ಡಿಓ ಅಂತಾ ಅಭಿನಂದಿಸಿದ್ದಾರೆ.
ಡಿಆರ್ಡಿಓ ಇತ್ತೀಚೆಗಷ್ಟೇ ಅಭ್ಯಾಸ್ ಮಿಸೈಲ್ ಪರೀಕ್ಷೆಯನ್ನೂ ಯಶಸ್ವಿಯಾಗಿ ಮಾಡಿತ್ತು. ಇದಕ್ಕೂ ಮುನ್ನ ಸ್ವದೇಶಿ ನಿರ್ಮಿತ ಆಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಪರೀಕ್ಷೆಯನ್ನೂ ಯಶಸ್ವಿಯಾಗಿ ಮಾಡಿ ಸೈ ಎನಿಸಿಕೊಂಡಿತ್ತು. ಇದೀಗ ನಿನ್ನೆ ಚಿತ್ರದುರ್ಗದಲ್ಲಿ ಮಾನವ ರಹಿತ ಲಘು ವಿಮಾನ ಯಶಸ್ವಿ ಹಾರಾಟ ಮಾಡೋ ಮೂಲಕ ದೇಶದ ಗಮನವನ್ನು ಸೆಳೆದಿದೆ. ಈ ಮೂಲಕ ಭವಿಷ್ಯದಲ್ಲಿ ಸೇನೆಗೆ ಮತ್ತಷ್ಟು ಬಲ ತುಂಬುವ ಸಂಶೋಧನೆಯ ಜೈತ್ರಯಾತ್ರೆಯನ್ನು ಮುಂದುವರಿಸಿದೆ.
Congratulations to @DRDO_India on successful maiden flight of the Autonomous Flying Wing Technology Demonstrator from Chitradurga ATR.
It is a major achievement towards autonomous aircrafts which will pave the way for Aatmanirbhar Bharat in terms of critical military systems. pic.twitter.com/pQ4wAhA2ax
— Rajnath Singh (@rajnathsingh) July 1, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post