ಪಾಟ್ನ: ತನ್ನ ಜಮೀನಿನಲ್ಲಿ ಇಟ್ಟಿಗೆ ಇರಿಸಿದ್ದಳು ಎಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವಳು ಪುಟ್ಟಬಾಲಕಿಯನ್ನು ಹತ್ಯೆಗೈದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಆರೋಪಿ ಮಹಿಳೆಯನ್ನು ರಾಮಕಾಳಿ ದೇವಿ ಮತ್ತು ಮೃತ ಪಟ್ಟ ಬಾಲಕಿಯನ್ನು ಸಾಕ್ಷಿರಾಣಿ ಎಂದು ಗುರುತಿಸಲಾಗಿದೆ.
ಬಾಲಕಿ ತನ್ನ ಜಮೀನಿನತ್ತ ಬಾಲಕಿ ಇಟ್ಟಿಗೆ ಹೊತ್ತೊಯ್ಯುತ್ತಿದ್ದು, ಆ ಇಟ್ಟಿಗೆ ಜಮೀನಿನಲ್ಲಿ ಬಿದ್ದ ಕಾರಣ ಆಕ್ರೋಶಗೊಂಡ ಮಹಿಳೆ ಬಾಲಕಿಯ ಎದೆಯ ಮೇಲೆ ಒದ್ದಿದ್ದಾಳೆ. ಈ ಘಟನೆ ವೀಕ್ಷಿಸಿದ ಪೋಷಕರು ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಸದ್ಯ ಈ ಪ್ರಕರಣ ಬೆಟ್ಟಿಯ ಮುಫಸಿಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post