ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಆದ್ರೆ, ಇದು ಕೆಲ ಆಟಗಾರರಿಗೆ ಬಂಪರ್ ಲಾಟರಿ ಹೊಡೆದಂತಾಗಿದ್ರೆ, ಇನ್ನು ಕೆಲ ಆಟಗಾರರಿಗೆ ತೀವ್ರ ನಿರಾಸೆಯಾಗಿದೆ. ಅಲ್ಲದೇ, ವಿಶ್ವಕಪ್ ಟೂರ್ನಿ ಆಡೋ ಕನಸನ್ನ ನುಚ್ಚನೂರಾಗಿಸಿದೆ.
NEWS 🚨 – #TeamIndia’s squad for T20I & ODI series against England announced.
More details 👇 #ENGvIND https://t.co/ii121ge0jY
— BCCI (@BCCI) June 30, 2022
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ, ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ಸರಣಿಯಿಂದ ಹೊರಗುಳಿದಿದ್ದ, ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ವೇಗಿ ಜಸ್ಪ್ರಿತ್ ಸೇರಿದಂತೆ ಕೆಲ ಪ್ರಮುಖ ಆಟಗಾರರು ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಮುಂಬರೋ ಟಿ20 ವಿಶ್ವಕಪ್ ಟೂರ್ನಿ ದೃಷ್ಟಿಯಲ್ಲಿಟ್ಟುಕೊಂಡು, ಈ ತಂಡವನ್ನ ಆಯ್ಕೆ ಮಾಡಲಾಗಿದೆ.
ಆಂಗ್ಲರ ನಾಡಲ್ಲಿ ಅಬ್ಬರಿಸಿದ್ರೆ, ಆಸಿಸ್ ಫ್ಲೈಟ್ ಟಿಕೆಟ್ ಪಕ್ಕಾ..!
ಯೆಸ್, ಆಂಗ್ಲರ ನಾಡಲ್ಲಿ ಅಬ್ಬರಿಸೋ ಆಟಗಾರರೇ, ಟಿ20 ವಿಶ್ವಕಪ್ ಟೂರ್ನಿಗಾಗಿ ಆಸ್ಟ್ರೇಲಿಯಾ ಫ್ಲೈಟ್ ಹತ್ತೋದು ಬಹುತೇಕ ಪಕ್ಕಾ..! ಆದ್ರೆ ಮತ್ತೆ ಟಿ20 ತಂಡಕ್ಕೆ ವಾಪಸ್ಸಾಗೋ ಕನಸು ಕಾಣುತ್ತಿದ್ದ ಕೆಲ ಆಟಗಾರರಿಗೆ, ಆಯ್ಕೆ ಸಮಿತಿ ಶಾಕ್ ನೀಡಿದೆ. ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕೆಂಬ ಆಸೆಗೂ, ಬ್ರೇಕ್ ಹಾಕಿದೆ.
ಶಿಖರ್ ಧವನ್ಗೆ ಆಯ್ಕೆ ಸಮಿತಿ ಬಿಗ್ ಶಾಕ್..!
T20 ವಿಶ್ವಕಪ್ ಟೂರ್ನಿ ಆಡೋ ಕನಸು ಭಗ್ನ..?
ಶಿಖರ್ ಧವನ್, ಒನ್ಡೇ ಫಾರ್ಮೆಟ್ನಲ್ಲಿ ಟೀಮ್ ಇಂಡಿಯಾದ ಬಿಗ್ ಪ್ಲೇಯರ್. ಐಸಿಸಿ ಇವೆಂಟ್ಗಳಲ್ಲಿ ತಂಡದ ನಂಬಿಕಸ್ಥ ಬ್ಯಾಟ್ಸ್ಮನ್. ಟಿ20ಯಲ್ಲೂ ಧವನ್ ಮಿಂಚಿದ್ದಾರೆ. ಐಪಿಎಲ್ನಲ್ಲೂ ಸಾಲಿಡ್ ಫರ್ಫಾಮೆನ್ಸ್ ನೀಡ್ತಿದ್ದಾರೆ. ಆದ್ರೆ ಯುವ ಆಟಗಾರರ ಅಬ್ಬರ, ಹೆವಿ ಕಾಂಪಿಟೇಷನ್ನಿಂದಾಗಿ, ಗಬ್ಬರ್ಸಿಂಗ್ಗೆ ಕಳೆದೊಂದು ವರ್ಷದಿಂದ ಟಿ20 ತಂಡದಲ್ಲಿ ಸ್ಥಾನ ಇಲ್ಲದಂತಾಗಿದೆ. ಕಳೆದ ವರ್ಷ ಶ್ರೀಲಂಕಾ ವಿರುದ್ಧ ಕಾಣಿಸಿಕೊಂಡಿದ್ದೇ ಟೀಮ್ ಇಂಡಿಯಾ ಪರ ಧವನ್ ಆಡಿದ ಕೊನೆಯ ಟಿ20 ಪಂದ್ಯ.
ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಲು ಟೀಮ್ ಇಂಡಿಯಾ ಆಟಗಾರರಿಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಸೆಮಿಫೈನಲ್ ಎಂದೇ ಭಾವಿಸಲಾಗಿದೆ. ಈ ಸರಣಿಯಲ್ಲಿ ತಮ್ಮ ಸಾಮರ್ಥ್ಯ ತೋರಿಸಿ, ವಿಶ್ವಕಪ್ ತಂಡಕ್ಕೆ ಎಂಟ್ರಿ ನೀಡೋಕೆ ಧವನ್ ರೆಡಿಯಾಗಿದ್ರು. ಆದ್ರೆ ಧವನ್ಗೆ ಈ ಸರಣಿಯಿಂದ ಕೊಕ್ ನೀಡಲಾಗಿದೆ. ಇದರಿಂದ ಧವನ್ಗೆ ವಿಶ್ವಕಪ್ ತಂಡದಲ್ಲಿ ಚಾನ್ಸ್ ಸಿಗೋದು ಆಲ್ಮೋಸ್ಟ್ ಡೌಟ್.
IPLನಲ್ಲಿ ಮಿಂಚಿದ್ರು ತಂಡದಲ್ಲಿ ಸಿಗಲಿಲ್ಲ ಚಾನ್ಸ್..!
T20 ಫಾರ್ಮೆಟ್ಗೆ ಮೊಹಮ್ಮದ್ ಶಮಿ ಅನ್ಫಿಟ್..?
ಮೊಹಮ್ಮದ್ ಶಮಿ, ಟೆಸ್ಟ್ ಹಾಗೂ ಏಕದಿನ ತಂಡದ ಮೇನ್ ಪೇಸರ್. ಜಸ್ಪ್ರಿತ್ ಬುಮ್ರಾ ಜೊತೆ ಸೇರಿ ಶಮಿ ಅದ್ಭುತ ಬೌಲಿಂಗ್ ಮೂಲಕ ಹಲವು ಪಂದ್ಯ್ಗಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಆದ್ರೆ, ಟಿ20 ತಂಡದಲ್ಲಿ ಮಾತ್ರ ಶಮಿಗೆ ಪ್ಲೇಸ್ ಫಿಕ್ಸ್ ಆಗಿಲ್ಲ. ಕಳೆದ ವರ್ಷ ಯುಎಇನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿ ನಂತರ ಶಮಿಗೆ ಮತ್ತೆ ಟಿ20 ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಕಳೆದ ಎಂಟು ತಿಂಗಳಿಂದ ಶಮಿ ಟೀಮ್ ಇಂಡಿಯಾ ಪರ ಒಂದೇ ಒಂದು ಟಿ20 ಪಂದ್ಯವಾಡಿಲ್ಲ. ಆದ್ರೆ, ಐಪಿಎಲ್ನಲ್ಲಿ ಸೂಪರ್ ಸ್ಪೆಲ್ಗಳ ಮೂಲಕ ತಮ್ಮ ತಾಕತ್ತು ನಿರೂಪಿಸಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಶಮಿ ಗುಜರಾತ್ ಟೈಟನ್ಸ್ ಪರ 16 ಪಂದ್ಯಗಳಿಂದ 8ರ ಎಕನಾಮಿಯಲ್ಲಿ 20 ವಿಕೆಟ್ ಬೇಟೆಯಾಡಿದ್ದಾರೆ. ಆ ಮೂಲಕ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ.
ಆದ್ರೆ ಇಷ್ಟೆಲ್ಲಾ ಇದ್ರೂ ಶಮಿ ಟಿ20 ಫಾರ್ಮೆಟ್ಗೆ ಅನ್ಫಿಟ್ ಅನ್ನೋ ಕಾರಣಕ್ಕೆ, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಶಮಿಯನ್ನ ಕೈ ಬಿಡಲಾಗಿದೆ. ಅಲ್ಲದೇ, ಟಿ20 ಫಾರ್ಮೆಟ್ಗೆ ಶಮಿ ಅನ್ಫಿಟ್ ಅಂತ ಸೆಲೆಕ್ಟರ್ಸ್ ನಿರ್ಧರಿಸಿದ್ದಾರೆ. ಇನ್ನು ಯುವ ವೇಗಿಗಳಾದ ಆವೇಶ್ ಖಾನ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ಗೆ ಹೆಚ್ಚು ಚಾನ್ಸ್ ನೀಡಲು ಮುಂದಾಗಿದ್ದಾರೆ.
ಈ ಮೂವರಲ್ಲಿ ಯಾರು ಇಂಗ್ಲೆಂಡ್ನಲ್ಲಿ ತಮ್ಮ ತಾಕತ್ತು ತೋರಿಸ್ತಾರೋ ಅವ್ರು, ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲಿದ್ದಾರೆ. ಅಲ್ಲದೇ, ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಜೊತೆ, ತಂಡದ ಪೇಸ್ ಬೌಲಿಂಗ್ ಅಟ್ಯಾಕ್ನ ಅಸ್ತ್ರಗಳಾಗಲಿದ್ದಾರೆ ಎನ್ನಲಾಗ್ತಿದೆ.
ಸಂಜು ಸ್ಯಾಮ್ಸನ್ಗೂ ಸೆಲೆಕ್ಟರ್ಸ್ ಬಿಗ್ ಶಾಕ್..!
ಯೆಸ್, ಸಂಜು ಸ್ಯಾಮ್ಸನ್ಗೂ ಆಯ್ಕೆ ಸಮಿತಿ ಬಿಗ್ ಶಾಕ್ ನೀಡಿದೆ. ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿರೊ ಸಂಜು ಸ್ಯಾಮ್ಸನ್, ಈ ಬಾರಿಯ ಐಪಿಎಲ್ನಲ್ಲಿ 17 ಪಂದ್ಯಗಳಿಂದ 147ರ ಸ್ಟ್ರೈಕ್ರೇಟ್ನಲ್ಲಿ 458 ರನ್ ಸಿಡಿಸಿದ್ರು. ಇದೇ ಕಾರಣಕ್ಕೆ ಲಾಂಗ್ ಗ್ಯಾಪನ್ನ ನಂತರ ಸಂಜು, ಐರ್ಲೆಂಡ್ ವಿರುದ್ಧದ ಟಿ20 ಸರಣಿ ಮೂಲಕ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ರಲ್ಲದೇ, ಸಿಕ್ಕ ಅವಕಾಶದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ರು.
ಯಾವುದೇ ಕ್ರಮಾಂಕದಲ್ಲೂ ಆಡಬಲ್ಲ ಸಾಮರ್ಥ್ಯವಿರೋ ಸಂಜು, ಫಿನಿಶರ್ ರೋಲ್ನ ಕೂಡ ಸಖತ್ತಾಗಿ ನಿಭಾಯಿಸಬಲ್ಲರು. ಬಿಗ್ ಹಿಟ್ಟಿಂಗ್ ಮೂಲಕ ಅಬ್ಬರಿಸೋ ಸಂಜು, ಡೆತ್ ಓವರ್ಗಳಲ್ಲಿ ರನ್ ಹೊಳೆ ಹರಿಸಬಲ್ಲ ಬ್ಯಾಟ್ಸ್ಮನ್. ಇಷ್ಟೆಲ್ಲಾ ಇದ್ರೂ, ಕೇವಲ ಮೊದಲ ಟಿ20 ಪಂದ್ಯಕ್ಕೆ ಮಾತ್ರ ಸಂಜುರನ್ನ ಆಯ್ಕೆ ಮಾಡಲಾಗಿದೆ.
ಔಟ್ ಆಫ್ ಫಾರ್ಮ್ ಸಿರಾಜ್ಗೂ ಭಾರೀ ನಿರಾಸೆ..
ಮೊಹಮ್ಮದ್ ಸಿರಾಜ್, ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪ್ರಮುಖ ಬೌಲರ್. ಐಪಿಎಲ್ನಲ್ಲಿ ನೀಡಿದ್ದ ಜಬರ್ದಸ್ತ್ ಪ್ರದರ್ಶನದಿಂದಾದೇ ಸಿರಾಜ್ಗೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಕ್ಕಿತ್ತು. ಸಿಕ್ಕ ಅವಕಾಶದಲ್ಲಿ ಸಿರಾಜ್, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನೆಲದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಮಿಂಚಿದ್ರು. ಆದ್ರೆ, ಟಿ20 ತಂಡದಲ್ಲಿ ಸಿರಾಜ್ ತಮ್ಮ ಸಾಮರ್ಥ್ಯ ಪ್ರೂವ್ ಮಾಡವುಲ್ಲಿ ಎಡವಿದ್ರು.
ಈವರೆಗೂ ಟೀಮ್ ಇಂಡಿಯಾ ಪರ 5 ಟಿ20 ಪಂದ್ಯಗಳನ್ನಾಡಿರೋ ಸಿರಾಜ್, 10.45ರಲ್ಲಿ ರನ್ ನೀಡಿ ಕೇವಲ 5 ವಿಕೆಟ್ ಪಡೆದುಕೊಂಡಿದ್ದಾರೆ. ಅಲ್ಲದೇ, ಈ ಬಾರಿಯ ಐಪಿಎಲ್ನಲ್ಲೂ ಸಿರಾಜ್ ಕಂಪ್ಲೀಟ್ ಫೇಲ್ಯೂರ್ ಆಗಿದ್ರು. ಒಟ್ಟು 15 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಸಿರಾಜ್, 10ರ ಎಕನಾಮಿಯಲ್ಲಿ ರನ್ ನೀಡಿ, ಕೇವಲ 9 ವಿಕೆಟ್ ಮಾತ್ರ ಗಳಿಸಿದ್ರು.
ರಾಹುಲ್ ತ್ರಿಪಾಠಿ, ಅರ್ಷ್ದೀಪ್ ಸಿಂಗ್ ಒಲಿಯುತ್ತಾ ಅದೃಷ್ಟ..!
ಯೆಸ್, ಐಪಿಎಲ್ ಮಿಂಚಿದ್ದ ಹಲವು ಯಂಗ್ಸ್ಟರ್ಗಳೂ, ಇಂಗ್ಲೆಂಡ್ ವಿರುದ್ಧದ ಟಿ20 ಸಮರಕ್ಕೆ ಆಯ್ಕೆಯಾಗೋ ಕನುಸ ಕಾಣ್ತಿದ್ರು. ಆದ್ರೆ, ಸೆಲೆಕ್ಷನ್ ಕಮಿಟಿ ಅವರ ಕನಸನ್ನೂ ನುಚ್ಚುನೂರಾಗಿಸಿದೆ. ಕಳೆದ ಕೆಲ ವರ್ಷಗಳಿಂದ ಐಪಿಎಲ್ನಲ್ಲಿ ಮಿಂಚ್ತಿರೋ ರಾಹುಲ್ ತ್ರಿಪಾಠಿ, ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ರು. ಆದ್ರೆ, ಪ್ಲೇಯಿಂಗ್ ಇಲೆವೆನ್ನಲ್ಲಿ ಆಡೋ ಅದೃಷ್ಟ ಸಿಗಲಿಲ್ಲ.
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಮಾತ್ರ ತ್ರಿಪಾಠಿಗೆ ಚಾನ್ಸ್ ನೀಡಲಾಗಿದೆ. ಇನ್ನು ಯುವ ವೇಗಿ ಅರ್ಷ್ದೀಪ್ ಸಿಂಗ್ ಕಥೆಯೂ ಅಷ್ಟೇ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಫೈಟ್ಗೆ ಅರ್ಷ್ದೀಪ್ಗೆ ಅವಕಾಶ ನೀಡಿದ್ದರೂ, ಸರಣಿಯ ನಾಲ್ಕು ಪಂದ್ಯಗಳಲ್ಲೂ ಒಮ್ಮೆಯೂ ಅರ್ಷ್ದೀಪ್ರನ್ನ ಕಣಕ್ಕಿಳಿಸಿಲಿಲ್ಲ. ಕೇವಲ ಒಂದು ಮಾತ್ರಕ್ಕೆ ಇವರಿಬ್ಬರನ್ನು ಆಯ್ಕೆ ಮಾಡಲಾಗಿದೆ. ಆದ್ರೆ ಆ ಒಂದು ಪಂದ್ಯದಲ್ಲೂ ಇವ್ರಿಬ್ಬರು ಆಡೋದು ಅನುಮಾನ. ಅದೇನೆ ಇರಲಿ, ಟಿ20 ವಿಶ್ವಕಪ್ ಆಡ್ಬೇಕು ಅಂದುಕೊಂಡಿದ್ದವರಿಗೆ ಸದ್ಯದ ಮಟ್ಟಿಗೆ ಭಾರೀ ನಿರಾಸೆಯಾಗಿರೋದಂತೂ ಸುಳ್ಳಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post