ಮಡಿಕೇರಿ: ಕೊಡಗು, ಉಡುಪಿ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ನಿರಂತವಾಗಿ ಮಳೆಯಾಗುತ್ತಿದ್ದು. ಒಂದ್ಕಡೆ ನದಿ ತೊರೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ರೆ. ಮತ್ತೊಂದು ಕಡೆ ಜನ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ.
ಕಳೆದೆರಡು ದಿನಗಳಿಂದ ಉಡುಪಿ ಹಾಗೂ ಮಡಿಕೇರಿಯಲ್ಲಿ ಭಾರೀ ಮಳೆಯಾಗ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದ್ದಾರೆ. ಗಾಳಿ ಮಳೆಯ ಜೊತೆಯಲ್ಲಿ ಕೊಡಗಿನ ಕೆಲ ಭಾಗಲ್ಲಿ ಭೂಕಂಪ ಕೂಡ ಆಗುತ್ತಿರೋದ್ರಿಂದ ಜಿಲ್ಲೆಯ ಜನತೆಯನ್ನ ಮತ್ತಷ್ಟು ಆತಂಕ ಕಾಡುತ್ತಿದೆ. ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದ ಕಾಫಿ ತೋಟದಲ್ಲಿ ಸಣ್ಣ ಪ್ರಮಾಣದಲ್ಲಿ ಬರೆ ಕುಸಿತವಾಗಿದೆ. ಚೆಂಬು ಗ್ರಾಮದ ಪೂಜಾರಿಗದ್ದೆ ಗಿರಿಧರ ಎಂಬವರ ಮನೆ ಮೇಲೆ ರಾತ್ರಿ ಸುಮಾರು 3 ಗಂಟೆ ಸಮಯದಲ್ಲಿ ಮಣ್ಣು ಕುಸಿದಿದೆ.
ಇತ್ತ ಕೃಷ್ಣನೂರು ಉಡುಪಿಯಲ್ಲಿ ಭಾರೀ ಮಳೆಯಿಂದ ಜನ ಸಂಕಷ್ಟ ಎದುರಿಸುವಂತಾಗಿದೆ. ನಗರಸಭಾ ಅಧ್ಯಕ್ಷರಾಗಿರುವ ಸುಮಿತ್ರಾ ನಾಯಕ್ ಪ್ರತಿನಿಧಿಸುವ ಪರ್ಕಳದಲ್ಲಿ ಅಗಲೀಕರಣ ಕಾಮಗಾರಿಯು ಕಳೆದ ಒಂದೂವರೆ ತಿಂಗಳಿನಿಂದ ನಿಧಾನಗತಿಯಲ್ಲಿ ಸಾಗುತಿದೆ. ಇದ್ರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತಿದ್ದಾರೆ.
ಹೆಬ್ಬಾಳ ಸೇತುವೆಯ ಮುಳುಗಡೆಗೆ 3 ಅಡಿ ಬಾಕಿ..
ಚಿಕ್ಕಮಗಳೂರಿನ ಕುದುರೆಮುಖ ಸುತ್ತಮುತ್ತ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಭದ್ರಾ ನದಿ ಆಪಾಯದ ಮಟ್ಟಕ್ಕೇರಿದೆ. ಭದ್ರಾ ನದಿಯ ಹರಿವಿನಲ್ಲಿ ಹೆಚ್ಚಳವಾಗಿದ್ದು, ಹೆಬ್ಬಾಳ ಸೇತುವೆಯ ಬಳಿ ಆಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ. ಸೇತುವೆ ಮುಳುಗಡೆ ಮೂರು ಅಡಿ ಮಾತ್ರ ಬಾಕಿ ಇದ್ದು, ಹೊರನಾಡು ಕಳಸ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಕಾಫಿ ನಾಡಲ್ಲಿ ಮಳೆಗಾಲದಲ್ಲಿ ಮೊದಲು ಮುಳುಗುವ ಸೇತುವೆಯಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post