ನವದೆಹಲಿ: ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಹಂತಕರಿಗೂ ತಕ್ಕ ಶಾಸ್ತಿಯಾಗಲೇ ಬೇಕು. ಅದರಲ್ಲಿ ಎರಡು ಮಾತಿಲ್ಲ. ಆದ್ರೆ ಇಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಕಣ್ಣೀರು ಹಾಕುವಂತಾಗಿದೆ. ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕಾಗಿ ಕನ್ಹಯ್ಯಾ ಲಾಲ್ ಹತ್ಯೆ ಮಾಡಿದ್ದಾಗಿ ಹಂತಕರು ವಿಡಿಯೋ ಮಾಡಿ ಹೇಳಿಕೊಂಡಿದ್ದರು. ಮನುಷತ್ವವೇ ಇಲ್ಲದ ಕ್ರೂರಿ ಹಂತಕರಿಗೆ ಗಲ್ಲುಶಿಕ್ಷೆಯಾಗಬೇಕೆಂದು ಇಡೀ ದೇಶವೇ ಆಗ್ರಹಿಸಿತ್ತು.
ಅವರನ್ನು ಗಲ್ಲಿಗೇರಿಸುವವರೂ ನೆಮ್ಮದಿ ಇಲ್ಲ
ಕನ್ಹಯ್ಯ ಲಾಲ್ ಪುತ್ರನ ಆಕ್ರೋಶದ ಮಾತು
ತನ್ನ ತಂದೆಯ ಹತ್ಯೆ ಬಗ್ಗೆ ಆಕ್ರೋಶ ಹೊರ ಹಾಕಿರುವ ಕನ್ಹಯ್ಯ ಲಾಲ್ ಪುತ್ರ, ಈ ಕ್ರೂರಿಗಳಿಗೆ ಬದುಕುವ ಹಕ್ಕೇ ಇಲ್ಲ. ಇವರನ್ನ ಆದಷ್ಟು ಬೇಗ ಗಲ್ಲಿಗೇರಿಸಿ. ಅಲ್ಲಿಯವರೆಗೂ ಮನಶಾಂತಿ ಇಲ್ಲ ಎಂದು ತಂದೆಯ ಸಾವಿನ ಆಕ್ರೋಶವನ್ನು ಮಾಧ್ಯಮಗಳ ಮುಂದೆ ಹೊರಹಾಕಿದ್ದಾರೆ.
ತನಿಖೆಯಲ್ಲಿ ಮತ್ತೊಂದು ಸ್ಫೋಟ ಅಂಶ ಬಯಲು
ಮುಂಬೈ ಮೇಲಿನ ಉಗ್ರರ ದಾಳಿ ನೆನಪಿಸಿದ ಬೈಕ್
ಉದಯಪುರ ಟೈಲರ್ ಕನ್ಹಯ್ಯಾ ಲಾಲ್ ಬರ್ಬರ ಹತ್ಯೆ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಸ್ಫೋಟ ಅಂಶ ಬೆಳಕಿಗೆ ಬಂದಿದೆ. ಹಂತಕರಿಗೆ ಪಾಕ್ ಸಂಘಟನೆ ಲಿಂಕ್ ಇರೋದು ತಿಳಿದು ಬಂದಿತ್ತು. ಇದೀಗ ಅವರ ಮುಂಬೈ ಮೇಲಿನ ಉಗ್ರರ ದಾಳಿಯನ್ನು ನೆನಪಿಸಿದೆ. ಹಂತಕ ರಿಯಾಜ್ ಅಠಾರಿಯನ ಬೈಕ್ ನಂಬರ್ ಪ್ಲೇಟ್ ಆರ್ ಜೆ 27 ಎಎಸ್ 2611 ಆಗಿದ್ದು, ನವೆಂಬರ್ 26, 2008 ರಂದು ನಡೆದ ಮುಂಬೈ ಉಗ್ರರ ಮೇಲಿನ ದಾಳಿಯ ದಿನಾಂಕವನ್ನು ನೆನಪಿಸುತ್ತಿದೆ.
2013ರಲ್ಲಿ ಹೆಚ್ಚುವರಿಯಾಗಿ ರೂ. 5,000 ಪಾವತಿಸಿದ ನಂತರ 2611 ನಂಬರ್ ಪಡೆಯಲಾಗಿದೆ ಎಂದು ವರದಿಯಾಗಿದೆ. ಜೂನ್ 29 ರಂದು ಟೈಲರ್ ಕನ್ಹಾಯ್ಯ ಲಾಲ್ ಹತ್ಯೆ ನಂತರ ಆರೋಪಿ ಇದೇ ಬೈಕ್ನಲ್ಲಿ ಪರಾರಿಯಾಗಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಯ ಬೈಕ್ ನಂಬರ್ ಗೂ, ಮುಂಬೈ ಉಗ್ರರ ದಾಳಿಗೂ ಇರುವ ಸಂಬಂಧವಾದರೂ ಏನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು, ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಈ ಹತ್ಯೆಯ ಹಿಂದೆ ಇವರಿಬ್ಬರೇ ಅಲ್ಲ. 10 ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಹೆಚ್ಚಿನ ವಿಚಾರಣೆಗಾಗಿ ಇಬ್ಬರು ಆರೋಪಿಗಳು ತಮ್ಮ ವಶಕ್ಕೆ ನೀಡುವಂತೆ ಕೋರಿ ಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ.
ಸೂಕ್ತ ಭದ್ರತೆ ನೀಡುವಂತೆ ಜೈನ ಕುಟುಂಬಗಳ ಬೇಡಿಕೆ..
ಕನ್ಹಯ್ಯ ಹತ್ಯೆಯ ನಂತರ ಪ್ರಾಣ ಭೀತಿಯಲ್ಲಿರುವ ಉದಯಪುರದ ಸ್ಥಳೀಯ ಜೈನ ಸಮುದಾಯದ ಕುಟುಂಬಗಳು ಹೆಚ್ಚಿನ ಭದ್ರತೆ ಒದಗಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಒಟ್ಟಾರೆ ಕನ್ಹಯ್ಯ ಲಾಲ್ ಹತ್ಯೆಯ ತನಿಖೆ ಚುರುಕಿನಿಂದ ಸಾಗಿದ್ದು, ಹೊಸ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ. ಸರಿಯಾದ ರೀತಿ ತನಿಖೆ ನಡೆದು, ಕನ್ಹಯ್ಯಲಾಲ್ ಹಂತಕರಿಗೆ ಸರಿಯಾದ ಶಿಕ್ಷೆಯಾಗಬೇಕು ಅನ್ನೋದೇ ಭಾರತೀಯರ ಆಶಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post