ಉದಯಪುರದ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ಆರೋಪಿಗಳನ್ನು ಇಂದು NIA ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗಿತ್ತು. ಜೈಪುರದಲ್ಲಿರುವ ರಾಷ್ಟ್ರೀಯ ತನಿಖಾ ದಳದ ವಿಶೇಷ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ಗೆ ಕೆರೆದುಕೊಂಡು ಬರುವ ವೇಳೆ ಆರೋಪಿಗಳ ಮೇಲೆ ಸಾರ್ವಜನಿಕರು ಥಳಿಸಿದ್ದಾರೆ ಎಂದು ವರದಿಯಾಗಿದೆ.
ಆರೋಪಿಗಳಾದ ರಿಯಾಜ್, ಗೌಸ್ ಮೊಹಮ್ಮದ್, ಮೊಹ್ಸಿನ್ ಮತ್ತು ಆಸಿಫ್ನನ್ನ ಪೊಲೀಸ್ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ATS ಪ್ರಧಾನ ಕಚೇರಿಯಿಂದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಲಯದ ಆವರಣದಲ್ಲಿ ವಕೀಲರು ಮತ್ತು ಸಾರ್ವಜನಿಕರು ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಪ್ರತಿಭಟನೆ ವೇಳೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು. ವರದಿಗಳ ಪ್ರಕಾರ, ಉದ್ರಿಕ್ತರ ಗುಂಪೊಂದು ಇಬ್ಬರು ಆರೋಪಿಗಳ ಮೇಲೆ ಹಲ್ಲೆ ಮಾಡಿದೆ ಎಂದು ತಿಳಿದುಬಂದಿದೆ.
ಜೈಪುರ ಕೋರ್ಟ್ ಹೊರಗೆ ಇಬ್ಬರು ಆರೋಪಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಕಳೆದ ಮಂಗಳವಾರ ಈ ಇಬ್ಬರು ಆರೋಪಿಗಳು 48 ವರ್ಷದ ಕನ್ಹಯ್ಯ ಲಾಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ವಿಚಾರಣೆ ನಡೆಸಿರುವ ಕೋರ್ಟ್, ಜುಲೈ 12ವರೆಗೆ ಆರೋಪಿಗಳನ್ನ ಎನ್ಐಎ ಕಸ್ಟಡಿಗೆ ನೀಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post