ಮೈಸೂರು: ಇಂದು ಬೆಳಗಿನ ಜಾವದಿಂದಲೂ ರೂಮ್ ಮುಂದೆ ತೆಲುಗು ನಟ ನರೇಶ್ ಪತ್ನಿ ರಮ್ಯಾ ರಘುಪತಿ, ನಟ ನರೇಶ್, ನಟಿ ಪವಿತ್ರಾ ಲೋಕೇಶ್ ಒಂದ ರೂಮ್ನಲ್ಲಿದ್ದಾರೆಂದು ಧರಣಿ ನಡೆಸಿದ್ದಾರೆ. ಬಾಗಿಲು ತಟ್ಟಿದರೂ ಕೂಡಾ ನಟ ನರೇಶ್ ಹೊರ ಬಾರದಿರುವ ಕಾರಣಕ್ಕೆ 3 ಗಂಟೆಗಳ ಕಾಲ ಹೋಟೆಲ್ನಲ್ಲಿ ಹೈ ಡ್ರಾಮವೇ ನಡೆದು ಹೋಗಿದೆ. ಬೆಳಗ್ಗಿನಿಂದಲೂ ರೂಮ್ ಎದುರೇ ನಿಂತಿದ್ದ ರಮ್ಯಾ ರಘುಪತಿ ಹೋಟೆಲ್ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರಿನ ಹೋಟೆಲ್ನಲ್ಲಿ ಹೈಡ್ರಾಮಾ
ಬಾಗಿಲು ತಟ್ಟಿದ್ರೂ ಓಪನ್ ಮಾಡುತ್ತಿಲ್ಲ ತೆಲುಗು ನಟ ನರೇಶ್
ಸುಮಾರು ಮೂರು ಗಂಟೆಗಳ ಕಾಲ ಹೋಟೆಲ್ ರೂಮ್ ಎದುರು ಹೈಡ್ರಾಮಾ ನಡೆಸಿದ ಬಳಿಕ ನಟ ನರೇಶ್, ನಟಿ ಪವಿತ್ರಾ ಲೋಕೋಶ್ ಕೋರಂ ಹೋಟೆಲ್ನಿಂದ ಹೊರಬಂದರು. ಈ ವೇಳೆ ನರೇಶ್, ಪವಿತ್ರಾ ಲೋಕೇಶ್ರನ್ನು ಪ್ರಶ್ನಿಸಲು ಮುಂದಾದ ರಮ್ಯಾ ಅವರಿಗೆ ನರೇಶ್ ಡೋಂಟ್ ಕೇರ್ ಎಂದರು. ಇನ್ನೂ ನನಗೂ ನರೇಶ್‌ಗೂ ಯಾವುದೇ ಸಂಬಂಧ ಇಲ್ಲವೆಂದಿದ್ದ ಪವಿತ್ರಾ ಲೋಕೇಶ್ ಇಂದು ಮುಂಜಾನೆ ಮೈಸೂರಿನ ಕೋರಂ ಹೋಟೆಲ್ನಿಂದ ನಟ ನರೇಶ್ ಜೊತೆಗೆ ಹೊರ ಬಂದಿದ್ದರು. ಹೋಟೆಲ್ ಮುಂದೇ ಹೈ ಡ್ರಾಮ ನಡೆಯುತ್ತಿದ್ದಂತೆ ಇಬ್ಬರು ಕಾರ್ ಏರಿ ಹೊರಟು ಹೋಗಿದರು.
ಇದಕ್ಕೂ ಮುನ್ನ, ನರೇಶ್, ಪವಿತ್ರಾ ರೂಮ್ನಿಂದ ಹೊರಬರುತ್ತಿದ್ದಂತೆ ಕೂಗಾಡಿದ ರಮ್ಯಾ ಅವರು, ಇಬ್ಬರಿಗೂ ಚಪ್ಪಲಿಯಿಂದ ಹಲ್ಲೆ ಮಾಡಲು ಮುಂದಾದರು. ಈ ವೇಳೆ ಸ್ಥಳದಲ್ಲೇ ಇದ್ದ ಮಹಿಳಾ ಪೊಲೀಸರು ಅವರನ್ನು ತಡೆದರು. ಇತ್ತ ರಮ್ಯಾ ಆರೋಪಗಳಿಗೆ ತಿರುಗೇಟು ನೀಡಿದ ನರೇಶ್, ರಮ್ಯಾ ಫ್ರಾಂಡ್ ಎಂದು ಆರೋಪ ಮಾಡಿದ್ರು.
ನಟ ನರೇಶ್ ಪತ್ನಿ ರಮ್ಯಾ ರಘುಪತಿ ಆಕ್ರೋಶ..
ಇನ್ನೂ, ಈ ಬಗ್ಗೆ ನಟ ನರೇಶ್ ಪತ್ನಿ ರಮ್ಯಾ ರಘುಪತಿ ಆಕ್ರೋಶ ವ್ಯಕ್ತ ಪಡಿಸಿದ್ದು, ಇಬ್ಬರೂ ಕುಳಿತುಕೊಂಡು ಮಾತನಾಡಬಹುದಿತ್ತು. ನನ್ನ ಶೀಲದ ಬಗ್ಗೆ ಮಾತನಾಡಲು ಅವರು ಯಾರು, ಶೀಲದ ಬಗ್ಗೆ ಮಾತಾಡಿದಾಗ ಎದ್ದು ನಿಲ್ಲಲೇಬೇಕು. ಮೊದಲು ಅವರು ನೆಟ್ಟಗಿದ್ದಾರಾ ನೋಡಿಕೊಳ್ಳಲಿ ಎಂದು ಪತಿ ನರೇಶ್, ಪವಿತ್ರಾ ಲೋಕೇಶ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post