ಅಂತಿಮ ಟೆಸ್ಟ್ ಪಂದ್ಯದಲ್ಲಿ ವೇಗಿ ಜಸ್ಪ್ರಿತ್ ಬೂಮ್ರಾ, ಅನುಭವಿ ಬೌಲರ್ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ 35 ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಲಾರಾ 18 ವರ್ಷಗಳ ಹಿಂದೆ ಅಂದ್ರೆ 2004ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.
ಇನ್ನಿಂಗ್ಸ್ನ 84ನೇ ಓವರ್ ಬೌಲ್ ಮಾಡಿದ ಬ್ರಾಡ್, 35 ರನ್ ನೀಡಿದ್ರು. ಈವರೆಗೆ ಟೆಸ್ಟ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ ಇಷ್ಟು ರನ್ ನೀಡಿಲ್ಲ ಎಂಬುದು ಗಮನಾರ್ಹ.
ಲಾರಾ ಜೊತೆಗೆ ಜಾರ್ಜ್ ಬೈಲಿ, ಕೇಶವ್ ಮಹಾರಾಜ್ ಕೂಡ 28 ರನ್ ಸಿಡಿಸಿದ್ರು ಅನ್ನೋದು ಮತ್ತೊಂದು ವಿಶೇಷ. ಅಲ್ಲದೆ, ಬ್ರಾಡ್, ಟಿ20ಯಲ್ಲೂ ಓವರ್‌ನಲ್ಲಿ ಹೆಚ್ಚು ರನ್ ಬಿಟ್ಟು ಕೊಟ್ಟ ಮೊದಲ ಬೌಲರ್ ಎಂಬ ಕೆಟ್ಟ ದಾಖಲೆಗೂ ಪಾತ್ರರಾಗಿದ್ದಾರೆ.
ಇನ್ನೊಂದೆಡೆ ಬ್ಯಾಟಿಂಗ್, ಬೌಲಿಂಗ್ನಲ್ಲೂ ಕಮಾಲ್ ಮಾಡಿದ ಬುಮ್ರಾ ಕ್ಯಾಪ್ಟನ್ ಆಗಿಯೂ ಸೈ ಎನಿಸಿಕೊಂಡಿದ್ದಾರೆ. ಹೀಗೊಂದು ದಾಖಲೆ ಬರೆದ ಭಾರತದ ಮೊದಲ ಬೌಲರ್ ಕೂಡ ಹೌದು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post