ನಿರೀಕ್ಷೆಗೂ ಮೀರಿದ ಹೈಪ್. ಬೇಜವಾಬ್ದಾರಿ ಆಟ. ಪದೇ ಪದೇ ಟೀಕೆ. ತಂಡದಿಂದ ಹೊರಬೀಳೋ ಆತಂಕ. ಆದ್ರೆ ಇದ್ಯಾವುದನ್ನ ಲೆಕ್ಕಿಸದ 24ರ ಹರೆಯದ ರಿಷಭ್ ಪಂತ್, ಇಂಗ್ಲೆಂಡ್ನಲ್ಲಿ ತನ್ನ ತಾಖತ್ತು ತೋರಿಸಿದ. ಆದ್ರೆ ಪಂತ್ ಸಕ್ಸಸ್ಗೆ ಕಾರಣರಾಗಿದ್ದೇ, ಆ ಮೂವರು ಗುರುಗಳು.
ಎಡ್ಜ್ಬಸ್ಟನ್ ಟೆಸ್ಟ್ ಪಂದ್ಯದ ಮೊದಲ ದಿನ, ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್ ನಡೆಸಿದ್ರು. ಪಂತ್ರ ಕ್ಲಾಸ್ ಇನ್ನಿಂಗ್ಸ್ ನೋಡಿ, ಇಡೀ ವಿಶ್ವವೇ ಕೊಂಡಾಡಿದೆ. ಜೇಮ್ಸ್ ಌಂಡರ್ಸನ್, ಸ್ಟುವರ್ಟ್ ಬ್ರಾಡ್ರಂತಹ ಅನುಭವಿ ಬೌಲರ್ಗಳು, ಪಂತ್ ಮುಂದೆ ಪಂಚರ್ ಆಗ್ಬಿಟ್ರು.
ಯೆಸ್..! ಟೀಮ್ ಇಂಡಿಯಾ 64 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ಗಿಲ್, ಪೂಜಾರ, ಹನುಮ ವಿಹಾರಿ, ಪೆವಿಲಿಯನ್ ಸೇರಿಕೊಂಡಿದ್ರು. ಆಗ ಕ್ರೀಸ್ಗಿಳಿದ ಪಂತ್, ಇಂಗ್ಲೆಂಡ್ ಬೌಲರ್ಗಳ, ಬೆವರಿಳಿಸಿದ್ರು.
ಒಂದಂತೂ ನಿಜ. ಎಡ್ಜ್ಬಸ್ಟನ್ನಲ್ಲಿ ಪಂತ್ ಬ್ಯಾಟಿಂಗ್ ನೋಡಿ, ಎಲ್ಲರೂ ಆಶ್ಚರ್ಯ ಪಟ್ರು. ಯಾಕಂದ್ರೆ.. ಪಂತ್ ಆಟದಲ್ಲಿ ಅಸಲಿ ಧಮ್ ಇತ್ತು. ತಾಳ್ಮೆ, ಸಮಯೋಜಿತ ಆಟ, ಶಾಟ್ ಸೆಲೆಕ್ಷನ್, ಫುಟ್ ವರ್ಕ್, ಬಿಗ್ ಇನ್ನಿಂಗ್ಸ್ ಆಡೋ ಮೈಂಡ್ಸೆಟ್, ಎದ್ದು ಕಾಣ್ತಿತ್ತು.
ಇದೆಲ್ಲದರ ನಡುವೆ ಪಂತ್ ಸಕ್ಸಸ್ಗೆ ಪ್ರಮುಖ ಕಾರಣ, ಆ ಮೂವರು ಗುರುಗಳು. ಅವ್ರ ಮಾರ್ಗದರ್ಶನದಿಂದಲೇ, ಪಂತ್ ಎಡ್ಜ್ಬಸ್ಟನ್ನಲ್ಲಿ, ಪಂಟರ್ ಇನ್ನಿಂಗ್ಸ್ ಆಡಿದ್ದು.
ನನ್ನ ಸಕ್ಸಸ್ಗೆ ತಾರಖ್ ಸಿನ್ಹ ಕಾರಣ!
” ತಾರಖ್ ಸರ್ ನನಗೆ ಯಾವಾಗ್ಲೂ ಹೇಳ್ತಾರೆ.! ನೀನು ಬಿಗ್ ಶಾಟ್ಸ್ ಹೊಡಿತೀಯ. ಆದ್ರೆ ಡಿಫೆನ್ಸ್ ಆಡೋದ್ರ ಬಗ್ಗೆ, ಫೋಕಸ್ ಮಾಡ್ಬೇಕು.! ಹಾಗಾಗಿ ನಾನು ಡಿಫೆನ್ಸ್ ಬಗ್ಗೆ, ಹೆಚ್ಚು ಗಮನ ಹರಿಸುತ್ತಿದ್ದೇನೆ.! ಪ್ರಾಕ್ಟೀಸ್ ವೇಳೆಯೂ, ಡಿಫೆನ್ಸ್ ಆಡೋದ್ರ ಬಗ್ಗೆ ಹೆಚ್ಚು ವರ್ಕ್ಔಟ್ ಮಾಡ್ತಿದ್ದೇನೆ..! ”
ರಿಷಭ್ ಪಂತ್, ಟೀಮ್ ಇಂಡಿಯಾ ಆಟಗಾರ.
ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆದ್ಮೇಲೆ, ಯುವ ಕ್ರಿಕೆಟಿಗರ ಮೇಲೆ ಹೆಚ್ಚು ಗಮನ ಹರಿಸ್ತಿದ್ದಾರೆ. ಅದ್ರಲ್ಲೂ ದ್ರಾವಿಡ್, ಸ್ಪೆಷಲ್ ಟ್ಯಾಲೆಂಟ್ ಪಂತ್ ಮೇಲೆ, ವಿಶೇಷ ಗೌರವ ಹೊಂದಿದ್ದಾರೆ. ಅಂಡರ್ 19, ಟೀಮ್ ಇಂಡಿಯಾ ಕೋಚ್ ಆದಾಗಿನಿಂದ, ಪಂತ್ ಆಟವನ್ನ ನೋಡಿರುವ ದ್ರಾವಿಡ್, ಎಡ್ಜ್ಬಸ್ಟನ್ ಟೆಸ್ಟ್ಗೂ ಮುನ್ನ ಒಂದು ಕಿವಿ ಮಾತೂ ಹೇಳಿದ್ರು. ಅದು ವರ್ಕ್ಔಟ್ ಕೂಡ ಆಗಿದೆ.
ಮುಂದೇನಾಗುತ್ತೆ ಅಂತ ಯೋಚ್ನೆ ಮಾಡ್ಬೇಡ..!
” ರಾಹುಲ್ ಭಾಯ್ ನನಗೆ, ಬಾಲ್ ಹೇಗೆ ಬರುತ್ತೋ ಹಾಗೆ ಆಡು. ಒಂದೊಂದು ಬಾಲ್ ಮೇಲೆ ಫೋಕಸ್ ಮಾಡು. ಸಿಚುವೇಷನ್ಗೆ ತಕ್ಕಂತೆ ಆಟ ಆಡು. ಮುಂದೇನಾಗುತ್ತೆ ಅಂತ, ಜಾಸ್ತಿ ಯೋಚ್ನೆ ಮಾಡಬೇಡ ಅಂತ ಹೇಳಿದ್ರು.!
ರಿಷಭ್ ಪಂತ್, ಟೀಮ್ ಇಂಡಿಯಾ ಆಟಗಾರ
ರಿಷಭ್ ಪಂತ್ರನ್ನ ಹತ್ತಿರದಿಂದ ನೋಡಿದವರಲ್ಲಿ, ಮಾಜಿ ಕೋಚ್ ರವಿ ಶಾಸ್ತ್ರಿ ಕೂಡ ಒಬ್ರು. ಕಳೆದ ವರ್ಷ ಶಾಸ್ತ್ರಿ, ಪಂತ್ಗೆ ಒಂದು ಮಾತು ಹೇಳಿದ್ರು. ಆ ಮಾತನ್ನ ಗಂಭೀರವಾಗಿ ಪರಿಗಣಿಸಿದ ಪಂತ್, ಎಡ್ಜ್ಬಸ್ಟನ್ ಟೆಸ್ಟ್ನಲ್ಲಿ ಚಾಚೂ ತಪ್ಪದೇ ಪಾಲಿಸಿದ್ರು. ಪರಿಣಾಮ ಪಂತ್, ಬ್ರಿಲಿಯಂಟ್ ಸೆಂಚುರಿ.
ಪಂತ್ಗೆ ಮಾಜಿ ಕೋಚ್ ಹೇಳಿದ್ದೇನು..?
“ಕಳೆದ ವರ್ಷ ನಾನು, ಪಂತ್ ಜೊತೆ ಮಾತನಾಡುವಾಗ ಹೇಳಿದ್ದೆ..! ನೀನು ಪದೇ ಪದೇ ಅದೇ ಸ್ಟೈಲ್ನಲ್ಲಿ ವಿಕೆಟ್ ಒಪ್ಪಿಸ್ತೀಯಾ..! ನನಗಂತೂ ಅದನ್ನ ನೋಡಿ ನೋಡಿ, ಬೋರ್ ಆಗ್ತಿದೆ. ನಿನಗೇನು ಬೇಜಾರ್ ಆಗಲ್ವಾ ಅಂತ ಕೇಳಿದ್ದೆ..! ಹಾಗೆ ನೀನ್ಯಾಕೆ ಸ್ವಲ್ಪ ಡಿಫರೆಂಟ್ ಆಗಿ ಆಡಬಾರದು..? ಅಂದ್ರೆ, ರಿವರ್ಸ್ ಸ್ವೀಪ್ ಸೇರಿದಂತೆ ಕೆಲ ಶಾಟ್ಸ್ಗಳನ್ನ ಟ್ರೈ ಮಾಡಬಹುದು ಅಂತ, ಸಲಹೆ ಕೂಡ ಕೊಟ್ಟಿದ್ದೆ. ಆಗ ನನ್ನ ಮಾತು ಕೇಳ್ತಿದ್ದ ಪಂತ್ ಕಣ್ಣಲ್ಲಿ, ಸ್ಪಾರ್ಕ್ಸ್ ನೋಡಿದ್ದೆ..!
ರವಿ ಶಾಸ್ತ್ರಿ, ಮಾಜಿ ಕೋಚ್
ತಾರಖ್ ಸಿನ್ಹ, ರಾಹುಲ್ ದ್ರಾವಿಡ್, ರವಿ ಶಾಸ್ತ್ರಿ ಅಷ್ಟೇ ಅಲ್ಲ..! ಟೀಮ್ ಇಂಡಿಯಾ ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಕೂಡ, ಪಂತ್ ಕರಿಯರ್ನಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ದಾರೆ.
ಏನೇ ಇರಲಿ ಪಂತ್, ಓರ್ವ ಎಕ್ಸ್ಟ್ರಾರ್ಡಿನರಿ ಟ್ಯಾಲೆಂಟೆಡ್ ಕ್ರಿಕೆಟರ್ ಅಷ್ಟೇ ಅಲ್ಲ. ಬಿಗ್ ಮ್ಯಾಚ್ ಪ್ಲೇಯರ್ ಕೂಡ ಹೌದು. ಇದನ್ನ ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾದಲ್ಲಿ ಪಂತ್ ಸ್ಟ್ಯಾಟ್ಸೇ ಹೇಳುತ್ತೆ. ಗುರುಬಲ ಇದ್ರೆ ಏನ್ ಬೇಕಾದ್ರೂ ಸಾಧಿಸಿಬಹುದು ಅನ್ನೋದಕ್ಕೆ, ಪಂತ್ ಬೆಸ್ಟ್ ಎಕ್ಸಾಂಪಲ್. ನೀವೇನಂತೀರಾ..?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post