ಶ್ರೀನಗರ: ಲಷ್ಕರ್-ಇ-ತೈಬಾ (ಎಲ್ಇಟಿ)ದ ಇಬ್ಬರು ಭಯೋತ್ಪಾದಕರನ್ನು ರಿಯಾಸಿ ಜಿಲ್ಲೆಯ ತುಕ್ಸಾನ್ ಗ್ರಾಮಸ್ಥರು ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇಬ್ಬರು ಭಯೋತ್ಪಾದಕರನ್ನು ಪಾಂಪೋರ್‌ನ ಶಾರ್ ಶಾಲಿ ಖ್ರೂ ನಿವಾಸಿ ನವೀದ್ ಶಾಫಿ ವಾನಿ ಮತ್ತು ಅದೇ ಜಿಲ್ಲೆಯ ಕಡ್ಲಾಬಲ್ ನಿವಾಸಿ ಫೈಜಾನ್ ರಶೀದ್ ತೇಲಿ ಎಂದು ಗುರುತಿಸಲಾಗಿದೆ.
ಇನ್ನು, ಉಗ್ರರನ್ನು ಹಿಡಿದುಕೊಟ್ಟ ಗ್ರಾಮಸ್ಥರಿಗೆ ಎಲ್‌ಇಟಿ ಕಮಾಂಡರ್ ಕಡೆಯಿಂದ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಹಾಗೂ ಉಗ್ರರ ಹತ್ತಿರವಿದ್ದ ಎರಡು ಎಕೆ-47 ರೈಫಲ್‌ಗಳು, ಏಳು ಗ್ರೆನೇಡ್‌ಗಳು ಮತ್ತು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಬ್ಬರು ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಬಂಧಿಸಿದ ಟಕ್ಸನ್ ಧೋಕ್, ರಿಯಾಸಿ ಗ್ರಾಮಸ್ಥರ ಶೌರ್ಯಕ್ಕೆ ನಾನು ಅಭಿನಂದನೆಗಳು. ಜನಸಾಮಾನ್ಯರ ನಿರ್ಣಯವೂ ಭಯೋತ್ಪಾದನೆ ಅಂತ್ಯವಾಗೋದು ದೂರವಿಲ್ಲ ಎಂದು ತೋರಿಸುತ್ತದೆ. ಯುಟಿ ಸರ್ಕಾರ ಗ್ರಾಮಸ್ಥರಿಗೆ ಘೋಷಣೆ ಮಾಡಿದ್ದ ಬಹುಮಾನವನ್ನು 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮಾಹಿತಿ ನೀಡಿದ್ದಾರೆ.
I salute the bravery of villagers of Tukson Dhok, Reasi, who apprehended two most-wanted terrorists. Such determination by common man shows end of terrorism is not far away. UT Govt to extend Rs. 5 Lakh cash reward to villagers for gallant act against terrorists and terrorism.
— Office of LG J&K (@OfficeOfLGJandK) July 3, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post