ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಸ್ವಂತ ತಮ್ಮನನ್ನೇ ಚಾಕುವಿನಿಂದ ಇರಿದು ಅಣ್ಣ ಕೊಲೆ ಮಾಡಿರುವ ಘಟನೆ ಕೆ ಆರ್ ಪುರಂ ನ ಪ್ರಿಯಾಂಕ್ ನಗರದಲ್ಲಿ ನಡೆದಿದೆ.
ಕೆಆರ್ ಪುರಂನ ನಿವಾಸಿ ಅಣ್ಣ ರಾಮಕೃಷ್ಣ ಎಂಬಾತನಿಂದ ತಮ್ಮ ಬಾಲಕೃಷ್ಣ (26)ನ ಕೊಲೆಯಾಗಿದೆ. ಗುರಾಯಿಸಿದ ಎಂಬ ಕಾರಣಕ್ಕೆ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಇನ್ನೂ ಅಣ್ಣ ರಾಮಕೃಷ್ಣ ಪೊಲೀಸ್ ಅಧಿಕಾರಿಗಳಿಗೆ ಶರಣಾಗಿದ್ದಾನೆ. ಈ ಕುರಿತು ಕೆ ಆರ್ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋದರರಿಬ್ಬರು ಅವಿವಾಹಿತರಾಗಿದ್ದು, ಪೋಷಕರೊಂದಿಗೆ ವಾಸವಿಗಿದ್ದರು. ಕ್ಷುಲ್ಲಕ ವಿಚಾರಗಳಿಗೆ ಆಗಾಗ ಜಗಳವಾಡ್ತಿದ್ದರಂತೆ. ಈ ಹಿನ್ನೆಲೆಯಲ್ಲೇ ಕಳೆದ ಕಲೆ ದಿನಗಳಿಂದ ಇಬ್ಬರ ನಡುವೆ ಮಾತು ಕೂಡ ಇಲ್ಲ ಎನ್ನಲಾಗಿದೆ. ಈ ನಡುವೆ ನಿನ್ನೆ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಿದ್ದ ತಮ್ಮ-ಅಣ್ಣನನ್ನು ಗುರಾಯಿಸಿ ನೋಡಿದ್ದು, ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post