ಬೆಂಗಳೂರು: ಪಿಎಸ್‌ಐ ನೇಮಕ ಅಕ್ರಮದಲ್ಲಿ ಶಾಮೀಲಾಗಿರುವ ಆರೋಪಿಗಳನ್ನು ಬೆನ್ನಟ್ಟಿರುವ ಸಿಐಡಿ ತನಿಖಾಧಿಕಾರಿಗಳು ಕೇಸ್ ನಲ್ಲಿ ಎ1 ಆರೋಪಿ ಜಾಗೃತ್ನನ್ನು ಅರೆಸ್ಟ್ ಮಾಡಿದ್ದಾರೆ.
ಹೈಗ್ರೌಂಡ್ ಠಾಣೆ ಯಲ್ಲಿ ದಾಖಲಾಗಿದ್ದ ಕೇಸ್ ಇದಾಗಿದು,ಚನ್ನಪಟ್ಟಣದಲ್ಲಿ ಆರೋಪಿಯನ್ನ ವಶಕ್ಕೆ ಪಡೆಯಾಲಾಗಿದೆ. ಕೇರಳ ಹಾಗೂ ಬೇರೆ ಬೇರೆ ಕಡೆ ತಲೆಮರೆಸಿಕೊಂಡು ತಿರುಗುತಿದ್ದ ಆರೋಪಿ ಜಾಗೃತ್ನ್ನು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಹಾಜರು ಪಡಿಸಿದ್ದಾರೆ. ಸಿಐಡಿ ಡಿಎಸ್ ಪಿ ಬಿಕೆ ಶೇಖರ್ ತಂಡದಿಂದ ಆರೋಪಿ ಜಾಗೃತ್ನನ್ನು ಅರೆಸ್ಟ್ ಮಾಡಲಾಗಿದೆ.
ಅಕ್ರಮ ನೇಮಕಾತಿ ಪ್ರಕರಣ ಬೆಳಕಿಗೆ ಬಂದ ಬಳಿಕ ನಡೆದ ಪ್ರತಿಭಟನೆಗಳಲ್ಲಿ ಆರೋಪಿ ಜಾಗೃತ್ ಮುಂದೇ ನಿಂತು ನೇತೃತ್ವ ವಹಿಸಿಕೊಂಡಿದ್ದ. ಅಕ್ರಮ ನೇಮಕಾತಿ ಬೆಳಕಿಗೆ ಬಂದ ನಂತರ ಸರ್ಕಾರ ಪರೀಕ್ಷೆಯನ್ನು ರದ್ದು ಮಾಡಿತ್ತು. ಇದನ್ನು ವಿರೋಧಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ಜಾಗೃತ್ ಮನವಿ ಸಲ್ಲಿಕೆ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post