ಮುಂಬೈ: ಮಹಾರಾಷ್ಟ್ರ ನೂತನ ಸಿಎಂ ಏಕ್ನಾಥ್ ಶಿಂಧೆ ವಿಶ್ವಾಸಮತ ಸಾಬೀತು ಪಡಿಸಬೇಕಿರುವ 2 ದಿನ ವಿಶೇಷ ವಿಧಾನಸಭಾ ಅಧಿವೇಶನ ಆರಂಭಾಗಿದ್ದು, ಶಿಂಧೆ ಬಣದ ರಾಹುಲ್ ನಾರ್ವೇಕರ್ ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಬಿಜೆಪಿ-ಶಿವಸೇನೆ ಬಂಡಾಯ ಶಿಂಧೆ ಬಣ ಪ್ರಮುಖ ಮುನ್ನಡೆಯನ್ನು ಪಡೆದುಕೊಂಡಿದೆ.
ಬಿಜೆಪಿಯ ರಾಹುಲ್ ನಾರ್ವೇಕರ್ 164 ಮತಗಳನ್ನು ಪಡೆದುಕೊಂಡರೇ, ಶಿವಸೇನೆ-ಕಾಂಗ್ರೆಸ್ ಅಭ್ಯರ್ಥಿ ರಾಜನ್ ಸಾಲ್ವಿ107 ಮತಗಳನ್ನು ಪಡೆದುಕೊಂಡರು. ಚುನಾವಣೆ ಆರಂಭಕ್ಕೂ ಮುನ್ನ ಶಿವಸೇನೆಯ ಉದ್ಧವ್ ಠಾಕ್ರೆ ಹಾಗೂ ಸಿಎಂ ಏಕ್ನಾಥ್ ಶಿಂಧೆ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಶಾಸಕರು ವಿಪ್ ಜಾರಿ ಮಾಡಿದ್ದರು.
ಮಹಾರಾಷ್ಟ್ರ ಶಿವಸೇನೆ ಪಕ್ಷ ಶಾಸಕರ ಬಂಡಾಯ ಹಿನ್ನೆಲೆಯಲ್ಲಿ ವಿಧಾನಸಭಾ ಸ್ಪೀಕರ್ ಚುನಾವಣೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು. ಸದ್ಯ ಸ್ಪೀಕರ್ ಆಗಿ ಆಯ್ಕೆಯಾಗಿರುವ ರಾಹುಲ್ ನಾರ್ವೇಕರ್ ಸಿಎಂ ಶಿಂಧೆ ಸೇರಿದಂತೆ 16 ಬಂಡಾಯ ಶಾಸಕರ ವಿರುದ್ಧದ ಅನರ್ಹತೆಯನ್ನು ವಜಾಗೊಳಿಸಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ತಿಂಗಳು ಡೆಪ್ಯೂಟಿ ಸ್ಪೀಕರ್ ಆಗಿದ್ದ ನರಹರಿ ಜಿರ್ವಾಲ್ 16 ಶಾಸಕರ ಅನರ್ಹತೆಗೆ ನೋಟಿಸ್ ನೀಡಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post