ಕೋಲಾರ: ಕಾಂಗ್ರೆಸ್ ಹಿರಿಯ ನಾಯಕ ಕೆ.ಹೆಚ್ ಮುನಿಯಪ್ಪ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ತೀವೃವಾದ ವಾಗ್ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದಂತೆ ಕಾಣುತ್ತಿರುವ ರಮೇಶ್ ಕುಮಾರ್ ತಮ್ಮ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
ಪುರಸಭೆ ಹಾಲಿ ಅಧ್ಯಕ್ಷರನ್ನೇ ಆಪರೇಷನ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ಮಾಜಿ ಶಾಸಕ ಜಿ.ವೆಂಕಟಶಿವಾರೆಡ್ಡಿ ಮತ್ತು ರಮೇಶ್ ಕುಮಾರ್ ನಡುವೆ ಕೋಲಾರದ ಶ್ರೀನಿವಾಸಪುರ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ರಾಜಕಾರಣವಿದ್ದು, 24 ಸದಸ್ಯ ಬಲದ ಶ್ರೀನಿವಾಸಪುರ ಪುರಸಭೆಯಲ್ಲಿ ಕಾಂಗ್ರೆಸ್ 11 ಮತ್ತು ಜೆಡಿಎಸ್ 13 ಸ್ಥಾನಗಳಿವೆ. ಜೆಡಿಎಸ್ ಪಕ್ಷದ ಲಲಿತಾ ಅಧ್ಯಕ್ಷೆಯಾಗಿದ್ದರು. ಈಗ ಪುರಸಭೆ ಅಧ್ಯಕ್ಷರನ್ನೇ ತಮ್ಮ ಪಕ್ಷಕ್ಕೆ ರಮೇಶ್ ಕುಮಾರ್ ಸೆಳೆದಿದ್ದಾರೆ. ಹೀಗಾಗಿ ಇದೂವರೆಗಿನ ಅವಧಿಯಲ್ಲಿ ಪುರಸಭೆ ಅಧ್ಯಕ್ಷೆಯಾಗಿದ್ದ, ಲಲಿತಾ ಈಗ ಪಕ್ಷ ಬದಲಾವಣೆ ಮೂಲಕ ಮತ್ತೆ ಅವರೇ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: ರಮೇಶ್ ಕುಮಾರ್ ಶಕುನಿ- ಕೆ.ಹೆಚ್.ಮುನಿಯಪ್ಪ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post