ಕಾರವಾರ: ಕುಡಿತದ ಗೀಳು ರಾತ್ರೋರಾತ್ರಿ ಒಂದು ಮನೆಯನ್ನ ಸಂಪೂರ್ಣ ಸಾವಿನ ಮನೆಯನ್ನಾಗಿ ಬದಲಾಯಿಸಿದೆ. ಕ್ಲುಲಕ ಕಾರಣಕ್ಕೆ ಆ ಕುಟುಂಬದಲ್ಲಿ ರಾತ್ರಿ ವೇಳೆ ಗಲಾಟೆ ಆರಂಭವಾಗಿತ್ತು. ಕುಡಿತದ ಅಮಲಿನಲ್ಲಿ ಬಂದ ಆತನೊಂದಿಗೆ ಪತ್ನಿ ಜಗಳಕ್ಕಿಳಿದಿದ್ದಳು. ಪ್ರತಿನಿತ್ಯದಂತೆ ಜಗಳ ಎಂದೇ ಎಲ್ಲರೂ ಸುಮ್ಮನಾಗಿದ್ದರು. ಆದ್ರೆ, ಬೆಳಗಾಗುವ ವೇಳೆ ಒಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಸಾವನಪ್ಪಿದರೆ, ಇನ್ನಿಬ್ಬರು ಮಚ್ಚಿನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆಯಾಗಿ ಬಿದ್ದಿದ್ದು, ಇಡೀ ಊರನ್ನೇ ಬೆಚ್ಚಿಬಿಳಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಗಣೆ ಅನ್ನೋ ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಮೂವರು ಬಲಿಯಾಗಿದ್ದಾರೆ. ಗ್ರಾಮದ ರಾಮಾ ಮರಾಠಿ (40), ಆತನ ಪತ್ನಿ ತಾಕಿ ಹಾಗೂ ಮಗ ಲಕ್ಷ್ಮಣ (12) ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಈ ದುರಂತದಲ್ಲಿ ದಂಪತಿಯ ಇನ್ನೊರ್ವ ಪುತ್ರ ಭಾಸ್ಕರ ಬದುಕಿದ್ದಾನೆ.
ಪತ್ನಿ ಕೊಂದ ಬಳಿಕ ಇಬ್ಬರು ಮಕ್ಕಳ ಹತ್ಯೆಗೆ ರಾಮಾ ಮುಂದಾಗಿದ್ದು, ಈ ವೇಳೆ ಇಬ್ಬರು ಮನೆಯಿಂದ ಓಡಿದ್ದಾರೆ. ಭಾಸ್ಕರ ತಪ್ಪಿಸಿಕೊಂಡಿದ್ದಾನೆ. ಆದರೆ ತಂದೆಯ ಮಚ್ಚಿಗೆ ಲಕ್ಷ್ಮಣ ಬಲಿಯಾಗಿದ್ದಾನೆ. ಇದಾದ ನಂತರ ರಾಮಾ ಕೂಡ ನೇಣಿಗೆ ಕೊರಳೊಡ್ಡಿದ್ದಾನೆ. ಭಾಸ್ಕರ್ ಹೇಳಿಕೆ ಮೇಲೆ ಕುಮಟಾ ಠಾಣಾ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post