ಬೆಂಗಳೂರು: 545 ಮಂದಿ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ತಪ್ಪೊಪ್ಪೊಕೊಂಡಿದ್ದಾರೆ ಎಂಬ ಮಾಹಿತಿ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ. ತನಿಖೆಯ ವೇಳೆ ಆರ್.ಡಿ ಪಾಟೀಲ್ ಕೊಟ್ಟಿರುವ ಹೇಳಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಲಭಿಸಿದೆ.
ಮೂಲಗಳ ಮಾಹಿತಿಯ ಅನ್ವಯ, ಪ್ರಕರಣದಲ್ಲಿ ತನ್ನ ಪಾತ್ರವನ್ನು ಒಪ್ಪಿ ಇರೋ ಬಗ್ಗೆ ಆರ್ಡಿ ಪಾಟೀಲ್, ಅನೇಕ ಸ್ಫೋಟಕ ವಿಚಾರಗಳ ಬಾಯಿಬಿಟ್ಟಿದ್ದಾನೆ. ಈ ಕುರಿತ 1800 ಪುಟಗಳ ಚಾರ್ಜ್ಶೀಟ್ಅನ್ನು ಕಲಬುರಗಿ ಪೊಲೀಸರು ಸಲ್ಲಿಕೆ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕ ಪುತ್ರನ ಹೆಸರನ್ನು ಪ್ರಸ್ತಾಪಿಸಿದ ಆರ್.ಡಿ ಬಾಲ್..
ಪ್ರಕರಣದಲ್ಲಿ ಇದುವರೆಗೂ ಕೆಲ ಆರೋಪಿಗಳಷ್ಟೇ ಹೆಸರು ಕೇಳಿ ಬರುತ್ತಿತ್ತು. ಆದರೆ ಸದ್ಯ ಪ್ರಕರಣದ ಕಿಂಗ್ಪಿನ್ ಎನಿಸಿಕೊಂಡಿರುವ ಆರ್.ಡಿ ಪಾಟೀಲ್ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ, ಆಫ್ಜಲಪುರ ಎಂ ವೈ. ಪಾಟೀಲರ ಪುತ್ರ ಅರುಣಕುಮಾರ ಪಾಟೀಲ ಹೆಸರು ಪ್ರಸ್ತಾಪ ಮಾಡಿದ್ದಾನೆ ಎನ್ನಲಾಗಿದೆ. ಶಾಸಕರ ಪುತ್ರ ತಮ್ಮ ತಂದೆಯ ಗನ್ಮ್ಯಾನ್ ಹಯ್ಯಾಳಿ ಪಾಟೀಲ ನೇಮಕಕ್ಕೆ ಡೀಲ್ ನೀಡಿದ್ದರಂತೆ. ಲಿಖಿತ ಪರೀಕ್ಷೆಗೂ ಮುನ್ನವೇ ಕರೆ ಮಾಡಿ ಡೀಲ್ ಮಾಡಿದ್ದರಂತೆ. ಆರೋಪಿ ಹಯ್ಯಾಳಿ ಪಿಎಸ್ಐಗೆ ಅರ್ಜಿ ಹಾಕಿದ್ದಾನೆ ಅವನ ಪಿಎಸ್ಐ ಮಾಡಿಸು ಎಂದಿದ್ದರಂತೆ. ಇದರಂತೆ ಆರ್ಡಿ ಪಾಟೀಲ್ ಅವರಿಗೆ ಮಂಜುನಾಥ ಮೇಳಕುಂದಿಯ ನಂಬರ್ ನೀಡಿದ್ದರಂತೆ. ಆದರೆ ಅರುಣ ಕುಮಾರ ಮತ್ತು ಮೇಳಕುಂದಿ ಇಬ್ಬರ ನಡುವೆ ಏನು ಮಾತನಾಡಿಕೊಂಡರೆಂದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
ಹಯ್ಯಾಳಿ ಪಾಟೀಲ್ ನೇಮಕಕ್ಕೆ ಮೇಳಕುಂದಿ 40 ಲಕ್ಷ ರೂಪಾಯಿ ಹಣ ಕೇಳಿದ್ದನಂತೆ. ದುಡ್ಡು ಯಾರು ಕೊಡ್ತಾರೆ ಅಂತಾ ಕೇಳಿದಕ್ಕೆ ಚಿಕ್ಕಪ್ಪ ಎಸ್.ವೈ ಪಾಟೀಲ ಹಣ ಕೊಡುತ್ತಾರೆ ಎಂದು ಹೇಳಿದ್ದೆ. ಹಣ ಕೊಡುವ ಬಗ್ಗೆ ಅರುಣ ಕುಮಾರ ನಮಗೆ ಈ ಬಗ್ಗೆ ಹೇಳಿದ್ರು. ನಾನು ಅರುಣ ಕುಮಾರ್ ಸೇರಿ 30 ಲಕ್ಷ ರೂಪಾಯಿಗೆ ಫೈನಲ್ ಮಾಡಿದ್ದವೇವು. ಹಯ್ಯಾಳಿ ದೇಸಾಯಿ ನಮಗೆ 10 ಲಕ್ಷ ರೂಪಾಯಿ ಅಡ್ವಾನ್ಸ್ ಕೂಡ ನೀಡಿದ್ದ, ನಾನು 5 ಲಕ್ಷ ರೂಪಾಯಿಗಳನ್ನು ಕಲಬುರಗಿ ಬಸ್ ಸ್ಟಾಂಡ್ ಬಳಿಕ ಇನೋವಾ ಕಾರ್ ನಲ್ಲಿ ಹೋಗಿ ತೆರೆದುಕೊಂಡೆ. ಇನ್ನೂ ಲಕ್ಷವನ್ನು ನನ್ನ ಅಣ್ಣ ಮಹಾಂತೇಶ್ ಪಾಟೀಲ ತಗೊಂಡ ಎಂದು ಹೇಳಿದ್ದಾರಂತೆ.
ಪರೀಕ್ಷಾ ಕೇಂದ್ರದ ಪ್ರೀನ್ಸಿಪಾಲ್ಗೆ 2 ಲಕ್ಷ ರೂ. ನೀಡಿದ್ದೆವು..
ನಾನು ಹಾಗೂ ಮಂಜುನಾಥ್ ಮೇಳಕುಂದಿ, ಇಬ್ಬರು ಸ್ನೇಹಿತರು. 2017 ಎಸ್ಡಿಎ ನೇಮಕಾತಿಯಲ್ಲಿ ಅಕ್ರಮ ಮಾಡಿ 20-30 ಮಂದಿಯನ್ನು ಅಕ್ರಮವಾಗಿ ನೇಮಕ ಮಾಡಿಸಿದ್ದೆವು. ಆದರೆ ಈಗ ಅಭ್ಯರ್ಥಿಗಳ ಹೆಸರುಗಳು ನೆನಪಿಗೆ ಇಲ್ಲ. ಅವರಿಂದ ಮಂಜುನಾಥ್ ಮೇಳಕುಂದಿ ಹಣ ಪಡೆದಿದ್ದ, ಆದರೆ ಎಷ್ಟು ಹಣ ಅಂತ ಕೂಡ ಗೊತ್ತಿಲ್ಲ. ಪರೀಕ್ಷಾ ಕೇಂದ್ರದ ಪ್ರೀನ್ಸಿಪಾಲ್ಗೆ ಪ್ರಿನ್ಸಿಪಾಲ್ಗೆ 2 ಲಕ್ಷ ರೂಪಾಯಿ ಹಣವನ್ನ ನೀಡಲಾಗಿತ್ತಂತೆ ಎಂದು ಕೂಡ ಆರ್.ಡಿ ಪಾಟೀಲ್ ಹೇಳಿದ್ದಾನೆ ಎನ್ನಲಾಗಿದೆ.
ಪಿಎಸ್ಐ ಅಭ್ಯರ್ಥಿಗಳಿಂದ ಎಷ್ಟೇಟ್ಟು ಹಣ ಪಡೆಯಲಾಗಿತ್ತು..?
ನಾನು ಬಾತ್ಮೀದಾರ ಹೇಳಿದಂತೆ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆಸಲು 14 ಅಭ್ಯರ್ಥಿಗಳನ್ನು ಸೇರಿಸಿಲ್ಲ ಮತ್ತು ಅಕ್ರಮವಾಗಿ ಸೆಲೆಕ್ಟ್ ಮಾಡಲು ಪರೀಕ್ಷೆಗೆ ಸಹಾಯ ಮಾಡಿಲ್ಲ. ನನ್ನ ದೂರದ ಸಂಬಂಧಿಗೆ ಪಿಎಸ್ಐಗೆ ಸೇರಿಸಲು ಸಹಾಯ ಮಾಡಿದ್ದೇನೆ. ಜೇವರ್ಗಿ ತಾಲೂಕಿನ ನರಿಬೋಳ ಪುತ್ರನಿಗೆ ಸಹಾಯ ಮಾಡಿದ್ದೆ. ಪರೀಕ್ಷಾ ಅಭ್ಯರ್ಥಿಯಾಗಿದ್ದ ಎನ್.ವಿ ಸುನೀಲ್ ಕುಮಾರ್ಗೆ ಅಕ್ರಮಕ್ಕೆ ಸಾಥ್ ನೀಡಿದ್ದೆ. ಇದಕ್ಕಾಗಿ ವಸಂತ ನರಿಬೋಳ ರಿಂದ 30 ಲಕ್ಷ, 2ನೇ ಅಭ್ಯರ್ಥಿ ವಿಶಾಲ ಶಿರೂರ್ನಿಂದ 42 ಲಕ್ಷ ರೂ., 3ನೇ ಕ್ಯಾಂಡಿಡೇಟ್ ಪ್ರಭುಗೆ ಅಕ್ರಮಕ್ಕೆ ಸಾಥ್ ನೀಡಲು ಶರಣಪ್ಪ ಅವರಿಂದ 50 ಲಕ್ಷ ರೂಪಾಯಿ, 4ನೇ ಕ್ಯಾಂಡಿಡೇಟ್ ಇಸ್ಮಾಯಿಲ್ ಖಾದರ್ ನೇಮಕಕ್ಕೆ 50 ಲಕ್ಷ ರೂ. ಪಡೆದುಕೊಂಡಿರುತ್ತೇನೆ ಎಂದು ಆರ್.ಡಿ ಪಾಟೀಲ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಅಭ್ಯರ್ಥಿಗಳಿಂದ ಪಡೆದ ಹಣವನ್ನು ನಾನು ಬಸುರೆಡ್ಡಿ ಮತ್ತು ಅಭಿಜೀತ್ ಕದಮ್ಗೆ ನೀಡಿದ್ದೆ. ಆದರೆ ನಾನು ಅರೆಸ್ಟ್ ಆದಾದ ನನಗೆ ಮತ್ತೊಂದು ಸತ್ಯ ಗೊತ್ತಾಯಿತು. ನನ್ನಿಂದ ಪಡೆದ 70 ಲಕ್ಷ ರೂಪಾಯಿ ಹಣವನ್ನ ಪಿ.ಎಸ್.ಐ. ಚಂದ್ರಶೇಖರ್ ಗೆ ನೀಡಲ್ಲ. ಅವರು ಕೇವಲ 35 ಲಕ್ಷ ರೂಪಾಯಿ ನೀಡಿ ಉಳಿದ ಹಣ ದುರ್ಬಳಕೆ ಮಾಡಿದ್ದಾರೆ. ಅದರಲ್ಲಿ 2 ಹೊಸ ಟಿಪ್ಪರ್ಗಳನ್ನು ಬೇನಾಮಿ ಹೆಸರಲ್ಲಿ ಖರೀದಿಸಿದ್ದಾರೆ. ಉಳಿದ ಹಣದಲ್ಲಿ ಅಭಿಜಿತ ಕದಮ್ ಮತ್ತು ಇತರರು ಪಡೆದುಕೊಂಡಿದ್ದಾರೆ. ವಿಷಯ ಗೊತ್ತಾದ ಬಳಿಕ ನಾನು 37 ಲಕ್ಷ ರೂಪಾಯಿ ಪಿಎಸ್ಐ ಚಂದ್ರಶೇಖರ್ ನೀಡಿದೆ. ಈ ಕೇಸ್ನಿಂದ ನನ್ನ ಹೆಸರು ಕೈಬಿಡುವಂತೆ ನೋಡಿಕೊಂಡಿರುತ್ತೇನೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿಯನ್ನ ಕೂಡ ಆತ ನೀಡಿದ್ದಾನೆ ಎನ್ನಲಾಗಿದೆ.
ತನ್ನ ಶಿಷ್ಯರನ್ನ ವಿಶ್ವಾಸಿಗಳು ಅಂತ ಹೇಳಿರುವ ಆರ್.ಡಿ ಪಾಟೀಲ್, ಮಣೂರಿನ ಅಸ್ಲಂ ಮುಜಾವರ್ ಹಾಗೂ ಕರ್ಜಗಿ ಮುನಾಫ್ ಇಬ್ಬರು ಪಿಎಸ್ಐ ಅಭ್ಯರ್ಥಿಗಳ ಹುಡುಕಿ ತಂದು ನನ್ನ ಮುಂದೆ ನಿಲ್ಲಿಸ್ತಿದ್ದರು. ಅಭ್ಯರ್ಥಿಗಳು ಮತ್ತು ನನ್ನ ನಡುವೆ ಡೀಲ್ ಮಾಡಿಸುತ್ತಿದ್ದರು. ನಾನು ಅವರಿಗೆ ಬೇಕಾದ ರೀತಿಯಲ್ಲಿ ಅಕ್ರಮ ಮಾಡಿಸುತ್ತಿದ್ದೇನು. Bluetooth deviceಗೆ ಬೇಕಾಗುವ ಪರ್ಯಾಯ SIM & ಸೆಲ್ ವ್ಯವಸ್ಥೆ ಮಾಡಿದ್ದೆ. ಅಲ್ಲದೇ ಉತ್ತರ ನೀಡುವಾಗ ಇತರರಿಗೆ ಗೊತ್ತಾಗದಂತೆ ವಿಸಿಲೇಟರ್ ಗಳನ್ನು ಬಳಕೆ ಮಾಡಿಕೊಂಡಿರುತ್ತೇನೆ. ಇನ್ನೂ ಈ ಅಕ್ರಮಕ್ಕೆ ಕೆಲವು ಹುಡುಗರನ್ನು ಬಳಸಿಕೊಂಡಿರುತ್ತೇನೆ. ಆದರೆ ಹೆಸರುಗಳು ಸದ್ಯ ನನಗೆ ನೆನಪಿಗೆ ಬರತ್ತಿಲ್ಲ ಎಂದು ತಿಳಿಸಿದ್ದಾನೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶೇಷ ವರದಿ: ವಿಷ್ಣುಪ್ರಸಾದ್, ಕ್ರೈಂ ಬ್ಯೂರೋ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post