ಆತ್ಮನಿರ್ಭರ ಭಾರತದ ಭವ್ಯ ಭವಿಷ್ಯಕ್ಕೆ ಮತ್ತೊಂದು ಸುವರ್ನ ಗರಿ ಸೇರ್ಪಡೆಯಾಗಿದೆ. ಶತ್ರುಗಳ ಎದೆಯಲ್ಲಿ ಭಯ ಹುಟ್ಟಿಸುವ ಯುದ್ಧ ವಿಮಾನ ವಾಹಕ ನೌಕೆ ಭಾರತದ ನೇವಿಗೆ ಹಸ್ತಾಂತರವಾಗಿದೆ.
ಸುಮಾರು 30 ಸಾವಿರ ಕೋಟಿ ಮೌಲ್ಯದ ಈ ಯೋಜನೆಯನ್ನು ಕೊಚ್ಚಿ ಶಿಪ್ಯಾರ್ಡ್ ಪೂರ್ಣ ಗೊಳಿಸಿದ್ದು, ಇಂದು ನಡೆದ ಚಿಕ್ಕ ಸಮಾರಂಭದಲ್ಲಿ ಜಲಸೇನೆಗೆ ಹಸ್ತಾಂತರ ಮಾಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಯುದ್ಧ ವಾಹಕ ಲೋಕಾರ್ಪಣೆಯಾಗಲಿದ್ದು, ಕಡಲಿನಲ್ಲಿ ಭಾರತದ ಸಾರ್ವಭೌಮತೆಯ ರಕ್ಷಣೆಗೆ ನಿಯೋಜಿತವಾಗಲಿದೆ. ಮತ್ತೂ ವಿಶೇಷವೆಂದ್ರೆ ಇನ್ನೊಂದು ವಿಮಾನ ವಾಹಕ ನೌಕೆ ತಯಾರಿಗೂ ಕೊಚ್ಚಿ ಶಿಪ್ಯಾರ್ಡ್ ಸಿದ್ಧತೆ ಶುರು ಮಾಡಿದ್ದು, ಅದರ ಮೌಲ್ಯ ಸುಮಾರು 50 ಸಾವಿರ ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ವಿಮಾನ ವಾಹಕ ನೌಕೆ ಎಂದ್ರೇನು?
ಒಂದು ಚಿಕ್ಕ ಪಟ್ಟಣವೇ ಸಮುದ್ರದಲ್ಲಿ ತೇಲುವಂತಿರುವ ವಿಮಾನ ವಾಹಕ ನೌಕೆಗಳು, ಯಾವುದೇ ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ಅಟ್ಯಾಕ್ ಹೆಲಿಕಾಪ್ಟರ್ಗಳು, ಮಿಸೈಲ್ಗಳನ್ನು ಹೊತ್ತು ಈ ನೌಕೆಗಳು ಕಡಲಿನಲ್ಲಿ ಪಹರೆ ನಡೆಸುತ್ತಿರುತ್ತವೆ. ತನ್ನದೇ ಆದ ರನ್ವೆಯನ್ನು ಕೂಡ ಇವು ಹೊಂದಿದ್ದು, ಸ್ವ-ರಕ್ಷಣೆಗಾಗಿ ಆ್ಯಂಟಿ ಮಿಸೈಲ್ ಸಿಸ್ಟಂ, ಆ್ಯಂಟಿ ವಾರ್ಫೇರ್ ಸಿಸ್ಟಂ, ರೆಡಾರ್ಸ್, ಸೋನಾರ್ಗಳನ್ನು ಕೂಡ ಹೊಂದಿರುತ್ತವೆ. ಸದ್ಯ ಜಗತ್ತಿನಲ್ಲಿಯೇ ಅತಿ ಹೆಚ್ಚು ವಿಮಾನ ವಾಹಕ ನೌಕೆಗಳು ಅಮೆರಿಕಾದ ಬಳಿ ಇವೆ. ಇಂದಿಗೂ ಅಮೆರಿಕಾ ಸೂಪರ್ ಪವರ್ ಆಗಿರೋದ್ರಲ್ಲಿ ಇವುಗಳ ಪಾತ್ರ ದೊಡ್ಡದು ಅಂತಾ ರಕ್ಷಣಾ ತಜ್ಞರು ಹಲವು ಬಾರಿ ವಿಶ್ಲೇಷಿಸಿದ್ದಾರೆ. ಇನ್ನು ಭಾರತದ ಬಳಿ ಸದ್ಯ ರಷ್ಯಾ ನಿರ್ಮಿತ ವಿಕ್ರಮಾದಿತ್ಯ ಅನ್ನೋ ಯುದ್ಧ ವಾಹಕ ನೌಕೆ ಕೂಡ ಇದೆ. ಅಲ್ಲದೇ, ಕಡುವೈರಿ ಚೀನಾ ಕೂಡ ಇತ್ತೀಚೆಗೆ ತನ್ನ ಮೂರನೇ ವಿಮಾನ ವಾಹಕ ನೌಕೆಯನ್ನು ಲೋಕಾರ್ಪಣೆ ಮಾಡಿದ್ದು, ದಕ್ಷಿಣ ಚೀನಾ ಕಡಲಲ್ಲಿ ಸದ್ದು ಮಾಡ್ತಿದೆ. ಇನ್ನು ಪಾಕಿಸ್ತಾನದ ಬಳಿ ಇಂಥ ಯಾವುದೇ ಯುದ್ಧ ವಾಹಕಗಳೂ ಇಲ್ಲ ಅಥವಾ ಅದನ್ನು ಹೊಂದುವಂಥ ಆರ್ಥಿಕ ಬಲ ಕೂಡ ಇಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post