ಇತ್ತೀಚೆಗೆ ಕರಾವಳಿ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಮನೆ ಕಟ್ಟಿಸಿಕೊಡುವುದಾಗಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಘೋಷಿಸಿದ್ದಾರೆ.
We will build a home for you Amma 🙏
Praveen has gone but you will never be alone
This is the least that we can do as Hindu brothers and sisters of #PraveenNettaru
We as Hindus are indebted to Praveen and his family#HinduEcosystem https://t.co/gAQ80oD9DU
— Kapil Mishra (@KapilMishra_IND) July 28, 2022
ನಮಗೆ ಒಬ್ಬನೇ ಮಗ. ನನ್ನ ಗಂಡ ಕೂಡ ಹಾರ್ಟ್ ಪೇಶೆಂಟ್. ಪ್ರವೀಣ್ ಮನೆ ಕಟ್ಟೋ ಪ್ಲಾನ್ ಮಾಡಿದ್ದ. ನನ್ನ ಮಗನ ಪ್ರಾಣ ವಾಪಸ್ ತರೋರು ಯಾರು..? ನಮಗೆ ಮನೆ ಕಟ್ಟಿಸಿಕೋಡೋರು ಯಾರು? ಎಂದು ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ತಾಯಿ ಕಣ್ಣೀರಿಟ್ಟಿದ್ದರು. ಈ ಸಂಬಂಧ ಟ್ವೀಟ್ ಮಾಡಿರೋ ಕಪಿಲ್ ಮಿಶ್ರಾ, ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಇನ್ನು, ಬ್ಯುಸಿನೆಸ್ ಮ್ಯಾನ್ ಮನೀಶ್ ಮುಂದ್ರಾ ಕೂಡ 11 ಲಕ್ಷ ಆರ್ಥಿಕ ಸಹಾಯ ಮಾಡೋದಾಗಿ ತಿಳಿಸಿದ್ದಾರೆ. ಇದೇ ಬ್ಯುಸಿನೆಸ್ ಮ್ಯಾನ್ ಈ ಹಿಂದೆ ಕನ್ಹಯ್ಯ ಲಾಲ್ಗೆ 11 ಲಕ್ಷ ಹಣ ನೀಡಿದ್ದರು.
Will contribute 11 lacs. Let me have the bank details. https://t.co/OqZ0Hz9kmR
— Manish Mundra (@ManMundra) July 28, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post