ಬೆಂಗಳೂರು: ಕನ್ನಡ ಕಿರುತೆರೆ ನಟ ಚಂದನ್ಗೆ ಕಪಾಳಮೋಕ್ಷ ಮಾಡಿರುವ ಘಟನೆ ಹೈದರಾಬಾದ್ನ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಎಂಬ ತೆಲುಗು ಧಾರಾವಾಹಿ ಸೆಟ್ನಲ್ಲಿ ನಡೆದಿತ್ತು.
ಇದನ್ನು ಓದಿ: ತೆಲುಗು ಧಾರಾವಾಹಿ ಸೆಟ್ನಲ್ಲಿ ಕನ್ನಡ ಕಿರುತೆರೆ ನಟನಿಗೆ ಕಪಾಳಮೋಕ್ಷ- ನಟ ಚಂದನ್ ಹೇಳಿದ್ದೇನು..?
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ನಟ ಚಂದನ್ ಕುಮಾರ್.. ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ನನ್ನ ಮೇಲೆ ಗಲಾಟೆ ಮಾಡಿದರು. ಒಬ್ಬನ ಮೇಲೆ ಏಕಾಏಕಿ 50 ಜನ ಮುಗಿಬಿದ್ದರು. ನನ್ನ ಜೊತೆ ಅಸಭ್ಯವಾಗಿ ವರ್ತನೆ ಮಾಡಿದರು. ಆದರೆ ಕನ್ನಡ ಪರ ಸಂಘಟನೆಗಳು ನನಗೆ ಧೈರ್ಯ ತುಂಬಿದರು. ಸದ್ಯಕ್ಕೆ ಆ ಧಾರವಾಹಿಯಲ್ಲಿ ನಟಿಸದಂತೆ ತೀರ್ಮಾನ ತೆಗೆದುಕೊಂಡಿದ್ದೇನೆ. ಕನ್ನಡ ಪರ ಸಂಘಟನೆಗಳು ಮತ್ತು ನನ್ನ ಹಿತೈಷಿಗಳು ಇದೇ ಸಲಹೆ ನೀಡಿದ್ದಾರೆ. ತೆಲುಗಿನ ಜನರು ಕೂಡ ಒಳ್ಳೆಯವರೇ, ಕೆಲವು ಉದ್ದೇಶ ಪೂರ್ವಕವಾಗಿಯೇ ಮಾಡಿದಂತೆ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post