ಹೈದರಾಬಾದ್: ತೆಲುಗು ಧಾರಾವಾಹಿ ಸೆಟ್ನಲ್ಲಿ ಕನ್ನಡ ಕಿರುತೆರೆ ನಟ ಚಂದನ್ಗೆ ಕಪಾಳಮೋಕ್ಷ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
‘ಸಾವಿತ್ರಮ್ಮಗಾರಿ ಅಬ್ಬಾಯಿ’ ಎಂಬ ತೆಲುಗು ಧಾರಾವಾಹಿ ಸೆಟ್ನಲ್ಲಿ ಘಟನೆ ನಡೆದಿದ್ದು, ಧಾರಾವಾಹಿ ತಂತ್ರಜ್ಞಾನರು ನಟ ಚಂದನ್ ಮೇಲೆ ಹಲ್ಲೆ ಮಾಡಿ ಕಪಾಳಮೋಕ್ಷ ಮಾಡಿದ್ದಾರೆ. ಕ್ಯಾಮೆರಾ ಅಸಿಸ್ಟೆಂಟ್ಗೆ ಮೇಲೆ ಕೈ ಮಾಡಿದಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.
ತಾಯಿಗೆ ಹುಷಾರಿಲ್ಲ ಎಂಬ ಕಾರಣಕ್ಕೆ ನಟ ಚಂದನ್ ಟೆಶ್ಶನ್ನಲ್ಲಿ ನಿದ್ದೆ ಇಲ್ಲದೇ ನಟ ಚಂದನ್ ರೆಸ್ಟ್ ಮಾಡ್ತಿದ್ದರಂತೆ. ಆ ವೇಳೆ ಸೆಟ್ ಬಾಯ್ ಅವರನ್ನ ಶೂಟ್ಗೆ ಕರೆದಿದ್ದನಂತೆ. ಈ ವೇಳೆ ಸೆಟ್ ಬಾಯ್ ಜೋರಾಗಿ ಏಕವಚನದಲ್ಲಿ ಕರೆದ ಎಂಬ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ಕೈ ಕೈ ಮೀಲಾಯಿಸೋ ಹಂತಕ್ಕೆ ತಲುಪಿತ್ತು ಎನ್ನಲಾಗಿದೆ.
ಆ ಬಳಿಕ ಸೆಟ್ ಬಾಯ್ ಸ್ಥಳೀಯ ಟೆಕ್ನಿಶಿಯನ್ ಸಂಘದ ಸದಸ್ಯರನ್ನು ಕರೆಯಿಸಿ ಚಂದನ್ಗೆ ಮುತ್ತಿಗೆ ಹಾಕಿ ಜೋರು ಗಲಾಟೆ ಮಾಡಿದ್ದಾರೆ. ಈ ನಡುವೆ ಟೆಕ್ನಿಶಿಯನ್ ಒಬ್ಬ ಚಂದನ್ ಅವರಿಗೆ ಕಪಾಳಮೋಕ್ಷ ಮಾಡಿರೋದು ವಿಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಘಟನೆ ಸಂಬಂಧ ನ್ಯೂಸ್ಫಸ್ಟ್ಗೆ ಪ್ರತಿಕ್ರಿಯೆ ನೀಡಿರೋ ನಟ ಚಂದನ್, ಇದೊಂದು ಸಣ್ಣ ಘಟನೆ. ನಾನು ಇದನ್ನು ದೊಡ್ಡದು ಮಾಡೋ ಯೋಚನೆ ಇರಲಿಲ್ಲ. ಆದರೆ ಬೇಕು ಅಂತ ಈ ರೀತಿ ಮಾಡಿದ್ದಾರೆ ಎಂದಿದ್ದಾರೆ.
ನಟ ಚಂದನ್ ಹೇಳಿದ್ದೇನು..?
ಘಟನೆ ಏನಾಯ್ತು ಎಂದರೆ, ಅಂದು ನಾನು ಅಮ್ಮನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೆ, ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಸ್ವಲ್ಪ ಟೆನ್ಶನ್ ಆಗಿತ್ತು. ನಿದ್ರೆ ಇಲ್ಲದ ಕಾರಣ ನಿರ್ದೇಶಕರಿಗೆ ಹೇಳಿ ಸ್ವಲ್ಪ ಮಲಗಿಕೊಂಡಿದ್ದೆ. ಆಗ ಅಲ್ಲಿದ್ದ ಸೆಟ್ ಅಸಿಸ್ಟೆಂಟ್ ರಂಜಿತ್ ಎಂಬಾತ ಏಕವಚನದಲ್ಲಿ ಮಾತನಾಡಿದ್ದ, ನಾವು ಒಟ್ಟಿಗೆ ಪಾರ್ಟಿ ಮಾಡಿಕೊಂಡು ಎಂಜಾಯ್ ಮಾಡಿದ್ದೆ. ಆ ಸಲಿಗೆಯಿಂದ ಅವನನ್ನು ತಳ್ಳಿದೆ. ಆದರೆ ಆ ಹುಡುಗ ಕಣ್ಣೀರಿಟ್ಟು ಡ್ರಾಮಾ ಕ್ರಿಯೇಟ್ ಮಾಡಿದ. ಆ ನಂತರ ಅಸೋಸಿಯೇಷನ್ ನವರು ಬಂದು ರಂಪಾಟ ಮಾಡಿದರು. ನಿನ್ನೆ ಚಿತ್ರೀಕರಣದ ವೇಳೆ ಈ ಘಟನೆ ನಡೆಯಿತು. ಆ ಗ್ಯಾಪ್ನಲ್ಲಿ ನನ್ನ ಮೇಲೆ ಕೈ ಕೂಡ ಮಾಡಿದ್ರು, ಆದರೂ ನಾನು ತಾಳ್ಮೆಯಿಂದ ಇದ್ದೆ. ಈಗ ಅಮ್ಮನ ಆರೋಗ್ಯ ಚೇತರಿಕೆ ಆಗಿದೆ. ಅದರ ಎದುರು ಇದ್ಯಾವುದು ಮುಖ್ಯ ಅನ್ನಿಸೋದಿಲ್ಲ. ಆದ್ದರಿಂದ ನಾನು ಸೆಟ್ನಲ್ಲೇ ಆ ವಿಚಾರವನ್ನು ನಿರ್ದೇಶಕರಿಗೆ ತಿಳಿಸಿ ಅಲ್ಲಿಗೆ ಬಿಟ್ಟು ಬಿಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post