ಒಂದು ಕನಸು, ಒಂದು ಗುರಿ, ಸಾಧಿಸಲೇಬೇಕೆಂಬ ಛಲ ಇದ್ರೆ ಏನಾದ್ರೂ ಮಾಡಬಹುದು ಅನ್ನೋದಕ್ಕೆ ದಿನೇಶ್ ಕಾರ್ತಿಕ್ ಬೆಸ್ಟ್ ಎಕ್ಸಾಂಪಲ್. ಕ್ರಿಕೆಟಿಗರ ಪಾಲಿಗಂತೂ DK ಬಾಸ್ ಕಂಬ್ಯಾಕ್, ಒಂದೊಳ್ಳೆ ಪಾಠ. ಹಾಗಾದ್ರೆ, ದಿನೇಶ್ ಕಾರ್ತಿಕ್ ಕಂಬ್ಯಾಕ್ ಹಿಂದಿನ ಸೀಕ್ರೆಟ್ ಏನು.? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ.
ತುಂಬಾ ಹಿಂದಲ್ಲ.. ಕೇವಲ 2 ವರ್ಷದ ಹಿಂದೆ ದಿನೇಶ್ ಕಾರ್ತಿಕ್, ಕ್ರಿಕೆಟ್ ಕರಿಯರ್ ಮುಗಿತು ಅನ್ನೋ ಫೈನಲ್ ನಿರ್ಧಾರಕ್ಕೆ ಇಡೀ ಕ್ರಿಕೆಟ್ ಲೋಕವೇ ಬಂದಿತ್ತು. ಅದರಲ್ಲೂ ಕಾಮೆಂಟೇಟರ್ ಅವತಾರ ಎತ್ತಿದ ಮೇಲಂತೂ ಕಾರ್ತಿಕ್, 2ನೇ ಇನ್ನಿಂಗ್ಸ್ ಸ್ಟಾರ್ಟ್ ಆಯ್ತು ಎಂಬ ಟಾಕ್ ಸ್ಟಾರ್ಟ್ ಆಗಿತ್ತು. ಈ ಎಲ್ಲಾ ಅಭಿಪ್ರಾಯಗಳಿಂದ ಸಾಧಿಸಬೇಕೆಂಬ ಛಲ ಕಾರ್ತಿಕ್ರಲ್ಲಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. 2 ವರ್ಷಗಳ ಬದಲಾಗಿರುವ ಪರಿಸ್ಥಿತಿಯೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.
ತಂಡಕ್ಕೆ ಬೇಡವಾಗಿದ್ದವನಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಫಿಕ್ಸ್
ಕಂಬ್ಯಾಕ್ಗೂ ಮುನ್ನ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾವನ್ನ ಪ್ರತಿನಿಧಿಸಿದ್ದು ಯಾವಾಗ ಗೊತ್ತಾ? 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ. ಸುಮಾರು 3 ವರ್ಷಗಳ ಕಾಲ ಟೀಮ್ ಇಂಡಿಯಾಗೆ ಬೇಡವಾಗಿದ್ದ DK, ಈಗ ವಿಶ್ವಕಪ್ ತಂಡದಲ್ಲಿ ಸ್ಥಾನ ಸೀಲ್ ಮಾಡಿದ್ದಾರೆ. ಯಾವ ಸ್ಲಾಟ್ನಲ್ಲಿ ಸ್ಥಾನ ಪಡೆಯಬೇಕಂದ್ರೂ ಯುವ ಕ್ರಿಕೆಟಿಗರ ನಡುವೆ ತೀವ್ರ ಪೈಪೋಟಿಯಿದೆ. ಇದರ ನಡುವೆ 37ರ ಹರೆಯದ ಡಿಕೆ ಬಾಸ್ ಸ್ಥಾನವನ್ನ ಭದ್ರಪಡಿಸಿಕೊಂಡಿರೋದು ನಿಜಕ್ಕೂ ರೋಚಕ.
ಟೀಮ್ ಇಂಡಿಯಾದಲ್ಲಿ ಸ್ಥಾನ ವಂಚಿತನಾದ್ರೂ ವಿಶ್ವಕಪ್ ಆಡಬೇಕು ಅನ್ನೋ ಒಂದು ಕನಸು ದಿನೇಶ್ ಕಾರ್ತಿಕ್ಗಿತ್ತು. ಆ ನಿಟ್ಟಿನಲ್ಲಿ ಛಲವನ್ನ ಬಿಡದ ಕಾರ್ತಿಕ್ ಕಠಿಣ ನಡೆಸುತ್ತಲೇ ಇದ್ರು. ಅದನ್ನ ಎಕ್ಸಿಕ್ಯೂಟ್ ಮಾಡೋಕ್ಕೆ ಸೂಕ್ತ ಅವಕಾಶದ ಕೊರತೆ ಕಾಡ್ತಿತ್ತು. ಕೊನೆಗೂ ಅದು ಸಿಕ್ಕಿದ್ದು, 15ನೇ ಆವೃತ್ತಿಯ IPLನಲ್ಲಿ ಆರ್ಸಿಬಿ ಪರ.
ಐಪಿಎಲ್ ಅಖಾಡಕ್ಕಿಳಿಯೋ ಮುನ್ನ ವಿಶೇಷ ಅಭ್ಯಾಸ
ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯೋ ಗುರಿ ಹೊಂದಿದ್ದ ದಿನೇಶ್ ಕಾರ್ತಿಕ್ಗೆ, IPLನಲ್ಲಿ ಅಬ್ಬರಿಸೋದು ಅನಿವಾರ್ಯ ಅನ್ನೋದು ಸ್ಪಷ್ಟವಾಗಿತ್ತು. ಹೀಗಾಗಿಯೇ ಇದಕ್ಕೆಂದು ಕಾರ್ತಿಕ್ ವಿಶೇಷ ಅಭ್ಯಾಸದ ಮೋರೆ ಹೋದ್ರು. ತಮಿಳುನಾಡಿನ ಚೆನ್ನೈನಿಂದ ಸುಮಾರು 500 ಕಿಲೋ ಮೀಟರ್ ದೂರದಲ್ಲಿರೋ ಥೇನಿಯಲ್ಲಿ ಡಿಕೆ ವಿಶೇಷ ಅಭ್ಯಾಸ ನಡೆಸಿದ್ರು. ಇಲ್ಲಿ ಇಂಡಿಯಾ ಸಿಮೆಂಟ್ಸ್ ಪರ ಕ್ಲಬ್ ಕ್ರಿಕೆಟ್ ಆಡಿದ ಕಾರ್ತಿಕ್, ಕ್ರಿಕೆಟ್ ಟಚ್ ಪಡೆದುಕೊಂಡ್ರು. ಇಲ್ಲಾಡಿದ ಅನುಭವವೇ ಐಪಿಎಲ್ನಲ್ಲಿ ಕಾರ್ತಿಕ್ ಕೈ ಹಿಡಿದಿದ್ದು.
RCB ಪರ ಅಬ್ಬರ, ಟೀಮ್ ಇಂಡಿಯಾಗೆ ಎಂಟ್ರಿ..!
ಆರ್ಸಿಬಿ ತಂಡ ಹರಾಜಿನಲ್ಲಿ ದಿನೇಶ್ ಕಾರ್ತಿಕ್ಗೆ ಮಣೆ ಹಾಕಿದ್ದೇ ತಡ ಟೀಕೆಗಳ ಸುರಿಮಳೆಯೇ ವ್ಯಕ್ತವಾಗಿತ್ತು. ಆದ್ರೆ, ಈ ವಿಚಾರದಲ್ಲಿ ಮ್ಯಾನೇಜ್ಮೆಂಟ್ ಹಾಗೂ ದಿನೇಶ್ ಕಾರ್ತಿಕ್ ಇಬ್ಬರೂ ಸ್ಪಷ್ಟವಾಗಿದ್ರು. ತಂಡ ನೀಡಿದ ಫಿನಿಷರ್ ಹೊಣೆಗಾರಿಕೆಯನ್ನ ಸೂಪರ್ ಡೂಪರ್ ಆಗಿ ಕಾರ್ತಿಕ್ ನಿಭಾಯಿಸಿದ್ರು. ಇದರ ಬೆನ್ನಲ್ಲೆ, ನೋಡಿ, ಟೀಮ್ ಇಂಡಿಯಾ ಡೋರ್ ಕೂಡ ಓಪನ್ ಆಗಿದ್ದು.
ಐರ್ಲೆಂಡ್, ಇಂಗ್ಲೆಂಡ್ ವಿರುದ್ಧ ಪ್ಲಾಫ್, ಆಯ್ಕೆ ಬಗ್ಗೆ ಪ್ರಶ್ನೆ
ತವರಿನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ರು. ಈ ಸರಣಿಯಲ್ಲಿ ಕಾರ್ತಿಕ್ ಇಂಪ್ಯಾಕ್ಟ್ಫುಲ್ ಪ್ರದರ್ಶನವನ್ನೇ ನೀಡಿದ್ರು. ಆದ್ರೆ, ಆ ನಂತರದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಕಾರ್ತಿಕ್ ಫ್ಲಾಪ್ ಆದ್ರು. ಎರಡೂ ಸರಣಿಯಿಂದ 5 ಪಂದ್ಯವನ್ನಾಡಿದ ಕಾರ್ತಿಕ್, ಗಳಿಸಿದ್ದು, ಕೇವಲ 34 ರನ್ ಮಾತ್ರ. ಇದರ ಬೆನ್ನಲ್ಲೇ ಆಯ್ಕೆಯ ಬಗ್ಗೆ ಮತ್ತೆ ಪ್ರಶ್ನೆಗಳು ಎದುರಾದ್ವು. ಇದಕ್ಕೆಲ್ಲಾ ಡಿಕೆ ಬಾಸ್ ವಿಂಡೀಸ್ ಸರಣಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಇದರ ಹಿಂದಿರೋದು ದೇಶಿ ಕ್ರಿಕೆಟ್ನ ಸಹಾಯವೇ.
ರಾಯಲ್ ಕಮ್ಬ್ಯಾಕ್ಗೂ ಮುನ್ನ TNPL ಆಡಿದ ಡಿಕೆ
ಇಂಗ್ಲೆಂಡ್ ಪ್ರವಾಸ ಮುಗಿದ ಬೆನ್ನಲ್ಲೇ, ತವರಿಗೆ ವಾಪಾಸ್ಸಾದ ಕಾರ್ತಿಕ್ ರಿಲ್ಯಾಕ್ಸ್ ಮೂಡ್ಗೆ ಜಾರಲಿಲ್ಲ. TNPLನ ತಿರುಪ್ಪುರ್ ತಮಿಝಾನ್ಸ್ ತಂಡವನ್ನ ಕಾರ್ತಿಕ್ ಸೇರಿದ್ರು. ಇಲ್ಲಿ ತಂಡವನ್ನ ಪ್ರತಿನಿಧಿಸಿದ್ದು, ಒಂದೇ ಪಂದ್ಯದಲ್ಲಾದ್ರೂ ನೆಟ್ಸ್ನಲ್ಲಿ ಬೆವರಿಳಿಸಿದ್ರು. ಸವಾಲಿನ ಪಿಚ್ನಲ್ಲಿ ಕಠಿಣ ಅಭ್ಯಾಸ ನಡೆಸಿಯೇ ಕಾರ್ತಿಕ್ ವಿಂಡೀಸ್ ಫ್ಲೈಟ್ ಹತ್ತಿದ್ದು. ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಡಿಕೆ ಅಬ್ಬರಿಸಿ ಬೊಬ್ಬಿರಿದ ಹಿಂದಿನ ಸೀಕ್ರೆಟ್ ಇದೇ.
ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅಬ್ಬರಿಸೋದ್ರಿಂದಿಗೆ ಟೀಮ್ ಇಂಡಿಯಾಗೆ ಗೆಲುವಿನ ಗಿಫ್ಟ್ ನೀಡಿದ್ದಾರೆ. ಸರಣಿಯ ಉಳಿದ ಪಂದ್ಯದಗಳಲ್ಲೂ ಕಾರ್ತಿಕ್, ಮಾಸ್ಟರ್ ಕ್ಲಾಸ್ ಫಿನಿಷಿಂಗ್ ಮಾಡಲಿ. ಈ ಮೂಲಕ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನ ಭದ್ರಪಡಿಸಿಕೊಳ್ಳಲಿ ಅನ್ನೋದೇ ಅಭಿಮಾನಿಗಳ ಅಶಯ.
ವಿಶೇಷ ವರದಿ: ವಸಂತ್ ಮಳವತ್ತಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post