ಸ್ಯಾಂಡಲ್ವುಡ್ ಖ್ಯಾತ ನಟಿ ಪ್ರಣಿತಾ ಸುಭಾಷ್ ಕಳೆದ ವರ್ಷ ಮೇ ತಿಂಗಳಲ್ಲಿ ಉದ್ಯಮಿ ನಿತಿನ್ ರಾಜ್ ಜೊತೆ ಸಪ್ತಪದಿ ತುಳಿದಿದ್ದರು. ಕಳೆದ ತಿಂಗಳು ಹೆಣ್ಣು ಮಗುವಿಗೆ ಜನ್ಮ ನೀಡಿ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದರು. ಸದ್ಯ ತಮ್ಮ ಮುದ್ದು ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನು ಓದಿ: ಭೀಮನ ಅಮಾವಾಸ್ಯೆ; ಪತಿಯ ಪಾದ ಪೂಜೆ ಮಾಡಿದ ನಟಿ ಪ್ರಣಿತಾ-ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿ
ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಬಹುಭಾಷಾ ನಟಿ ಪ್ರಣಿತಾ ಸದ್ಯ ನಟನೆಗೆ ಕೊಂಚ ಬ್ರೇಕ್ ಕೊಟ್ಟು ತಮ್ಮ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಈಗ ಮಗಳ ಫೋಟೋಶೂಟ್ ಮಾಡಿಸುವುದರ ಜೊತೆಗೆ ಹೆಸರನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.
ಪ್ರಣಿತಾ ದಂಪತಿ ತಮ್ಮ ಮುದ್ದು ಮಗಳಿಗೆ ʻಆರ್ನಾʼ ಎಂದು ಹೆಸರಿಟ್ಟಿದ್ದಾರೆ. ಜೊತೆಗೆ ಮಗುವಿನ ಅಂದದ ಫೋಟೋಶೂಟ್ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈಗ ಮಗಳ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post