ಬೆಂಗಳೂರು: ಮನೆ ಮಾಲೀಕನ ನಿರ್ಲಕ್ಷ್ಯಕ್ಕೆ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಅನ್ನೋ ಆರೋಪ ಕೇಳಿಬಂದಿದೆ. ವಸಂತನಗರದ 5ನೇ ಕ್ರಾಸ್ನಲ್ಲಿ ವಾಸಿಸುತ್ತಿದ್ದ 6 ವರ್ಷದ ಸಹನಾ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ.
ಆರೋಪ ಏನು..?
ಮನೆ ಮಾಲೀಕ ಶಿವಶಂಕರ್ ಎಂಬುವವರು ಜಿರಳೆ ಕಾಟದಿಂದ ಬೇಸತ್ತು ಹೋಗಿದ್ದರು. ಇದರಿಂದ ಬಾಡಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಿರಳೆ ಔಷಧಿ ಸಿಂಪಡಿಸಿದ್ದಾರೆ ಎನ್ನಲಾಗಿದೆ. ವಿನೋದ್ ಫ್ಯಾಮಿಲಿ ವಾರದ ಹಿಂದೆ ಊರಿಗೆ ತೆರಳಿತ್ತು. ಊರಿನಿಂದ ಬಂದ ಮೇಲೆ ಮರಳಿ ಬಾಡಿಗೆ ಮನೆಗೆ ವಾಪಸ್ ಆಗಿತ್ತು.
ರಾತ್ರಿ ಮಲಗಿದ್ದ ವೇಳೆ ಜಿರಳೆ ಔಷಧಿ ಸಿಂಪಡಿಸಿದ್ದರಿಂದ ಮನೆಯಲ್ಲಿದ್ದವರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಬಾಡಿಗೆ ಮನೆ ನಿವಾಸಿ ವಿನೋದ್ ಮಗಳು ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ. ಅಸ್ವಸ್ಥಗೊಂಡಿದ್ದವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಅಧಿಕಾರಿಗಳು ಮಾಲೀಕ ಶಿವಶಂಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post