ತೆಲುಗಿನ ‘ಶ್ರೀಮತಿ ಶ್ರೀನಿವಾಸ್’ ಧಾರಾವಾಹಿ ಶೂಟಿಂಗ್ ವೇಳೆ ಕಿರುತರೆ ನಟ ಚಂದನ್ ಕುಮಾರ್ ಅವರ ಮೇಲೆ ಅಲ್ಲಿನ ಜನರು ಹಲ್ಲೆ ಮಾಡಿದ್ದರು. ಇದೇ ಗಲಾಟೆ ವಿಚಾರವಾಗಿ ಇದೀಗ ತೆಲುಗು ಟಿವಿ ಇಂಡಸ್ಟ್ರಿಯಿಂದ ಕನ್ನಡದ ನಟ ಚಂದನ್ ಅವರನ್ನ ಬ್ಯಾನ್ ಮಾಡಲಾಗಿದೆ.
ಟೆಕ್ನಿಷಿಯನ್ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ತೆಲುಗು ಟಿವಿ ಅಸೋಸಿಯೇಷನ್ ಬ್ಯಾನ್ ಮಾಡಿರೋದಾಗಿ ಹೇಳಿದೆ. ತೆಲುಗು ಇಂಡಸ್ಟ್ರಿಯ ಆತ್ಮಗೌರವ ಕಾಪಾಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಎಂದು ತೆಲುಗು ಟಿವಿ ಅಸೋಶಿಯೇಷನ್ ಹೇಳಿಕೊಂಡಿದೆ.
ಘಟನೆ ಬಗ್ಗೆ ಪೂರ್ತಿ ವಿವರ ಪಡೆದು ಸಭೆಯಲ್ಲಿ ಚರ್ಚಿಸಿದ್ದೇವೆ. ಅವರು ಮಾಡಿದ ತಪ್ಪಿನಿಂದ ಇಡೀ ಇಂಡಸ್ಟ್ರಿ ವಿರುದ್ಧ ಎತ್ತು ಕಟ್ಟುವ ಕೆಲಸ ಮಾಡ್ತಿದ್ದಾರೆ. ಚಂದನ್ ಇಲ್ಲದೇ ಕೂಡ ಇಂದು ಶ್ರೀಮತಿ ಶ್ರೀನಿವಾಸ್ ಶೂಟಿಂಗ್ ನಡೆಯುತ್ತಿದೆ. ಕನ್ನಡದ ಕಲಾವಿದರೇ ಇಂದು ಭಾಗವಹಿಸಿದ್ದಾರೆ. ಇದು ನಮ್ಮ ಆತ್ಮಗೌರವಕ್ಕೆ ಸಂಬಂಧಿಸಿದ ವಿಷಯ. ಕರ್ನಾಟಕದಲ್ಲೂ ಒಂದು ಸಂಘಟನೆಯಿದ್ದು, ಅವರು ನಮ್ಮನ್ನ ಸಂಪರ್ಕಿಸಿದ್ರೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಇನ್ನು ಬ್ಯಾನ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿರವ ನಟ ಚಂದನ್, ನನ್ನನ್ನ ಅಲ್ಲಿಂದ ಬ್ಯಾನ್ ಮಾಡುವ ಅಗತ್ಯ ಇಲ್ಲ. ನಾನೇ ತೆಲುಗು ಟಿವಿ ಇಂಡಸ್ಟ್ರಿಯಿಂದ ವಾಕೌಟ್ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post