ಇತ್ತೀಗಷ್ಟೆ ಬಿಡುಗಡೆಯಾದ ‘ಹರ್ ಹರ್ ಶಂಭೋ’ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಹಾಡನ್ನು ಮುಸ್ಲಿಂ ಗಾಯಕಿ ಫರ್ಮಾನಿ ನಾಜ್ ಗಾನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಾಡಿಗೆ ಯೂಟ್ಯೂಬ್ನಲ್ಲಿ ಈವರೆಗೂ 2.4 ಮಿಲಿಯನ್ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
‘ಹರ್ ಹರ್ ಶಂಭೋ’ ಹಾಡನ್ನು ಮುಸ್ಲಿಂ ಗಾಯಕಿ ಫರ್ಮಾನಿ ನಾಜ್ ಹಾಡಿದ್ದರಿಂದ ಮುಸ್ಲಿಮರಿಂದ ವಿರೋಧಗಳು ವ್ಯಕ್ತವಾಗುತ್ತಿದೆ. ಗಾಯಕಿ ಫರ್ಮಾನಿ ಅವರು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದು ಮುಸ್ಲಿಂ ಸಮುದಾಯದ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇಸ್ಲಾಂ ಪ್ರಕಾರ ಆಕೆ ಕೆಟ್ಟ ಕೆಲಸವನ್ನು ಮಾಡಿದ್ದಾಳೆ. ಇಸ್ಲಾಂ ಕಾನೂನು ಷರಿಯಾ ಇವುಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಗಾಯಕಿಯನ್ನು ನಿಂದಿಸಿದ್ದಾರೆ. ಇಂಡಿಯನ್ ಐಡಲ್ ರಿಯಾಲಿಟಿ ಶೋದಲ್ಲಿ ಈ ಹಿಂದೆ ಹಾಡಿದ ಫರ್ಮಾನಿ ನಾಜ್ ಎಂಬುವವರೇ ಈಗ ಹರ್ ಹರ್ ಶಂಭೋ ಹಾಡಿ ಮುಸ್ಲಿಂ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾದವರು. ಈ ಹಾಡು ಹಿಂದೂ ದೇವರಾದ ಭಗವಾನ್ ಶಿವನನ್ನು ಹೊಗಳುವ ಹಾಡಾಗಿದೆ ಎಂದು ಆರೋಪಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post