ಅಮೆರಿಕ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ಬಳಿಕ ವಿಲವಿಲ ಅಂತಾ ಒದ್ದಾಡುವ ಪರಿಸ್ಥಿತಿ ಉಂಟಾಗಿದೆ. ಇದೀಗ ತೈವಾನ್ ಮೇಲೆ ದ್ವೇಷ ಕಾರಲು ಆರಂಭಿಸಿದೆ. ತೈವಾನ್ ಸುತ್ತಮುತ್ತಲೂ ಅತೀ ದೊಡ್ಡ ಮಿಲಿಟರಿ ವ್ಯಾಯಾಮವನ್ನ ಚೀನಾ ಆರಂಭಿಸಿದೆ. ಅಮೆರಿಕ ಸ್ಪೀಕರ್ ತೈವಾನ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೆಪ್ಪಗಿದ್ದ ಚೀನಾ, ಅವರು ಹೊರಟು ಹೋದ ಮೇಲೆ ತನ್ನ ಕುತಂತ್ರವನ್ನ ಮುಂದುವರಿಸಿದೆ.
ಮಾಧ್ಯಮಗಳ ಪ್ರಕಾರ, ನಿನ್ನೆಯಿಂದ ಯುದ್ಧ ವ್ಯಾಯಾಮವನ್ನ ಆರಂಭಿಸಿದೆ. ಇದರಲ್ಲಿ ‘ಲೈವ್-ಫೈರಿಂಗ್’ ಸಹ ಒಳಗೊಂಡಿದೆ. ಅಲ್ಲಿನ ಸ್ಟೇಟ್ ಬ್ರಾಡ್‌ಕಾಸ್ಟರ್ ಸಿಸಿಟಿವಿ ಪ್ರಕಾರ, ಸಮರಾಭ್ಯಾಸಕ್ಕಾಗಿ ತೈವಾನ್ ದ್ವೀಪದ ಸುತ್ತಲಿನ 6 ಪ್ರಮುಖ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿದೆ. ಚೀನಾದ ಮಿಲಿಟರಿ ವ್ಯಾಯಾಮದ ಪರಿಣಾಮ ತೈವಾನ್ಗೆ ಯಾವುದೇ ಹಡಗುಗಳು ಮತ್ತು ವಿಮಾನಗಳ ಪ್ರವೇಶ ನಿರ್ಬಂಧವಾಗಿದೆ.
ಚೀನಾ, ತೈವಾನ್ ಸುತ್ತಲೂ ಲೈವ್-ಫೈರ್ ಮಿಲಿಟರಿ ಡ್ರಿಲ್ಗಳನ್ನ ಘೋಷಿಸಿದೆ. ತೈವಾನ್‌ನ ರಕ್ಷಣಾ ಸಚಿವಾಲಯ ಮಾಡಿರುವ ಆರೋಪದ ಪ್ರಕಾರ, ಚೀನಾದ ದುಷ್ಟಬುದ್ಧಿಯಿಂದಾಗಿ ತೈವಾನ್‌ನ ಪ್ರಮುಖ ಬಂದರುಗಳು, ನಗರ ಪ್ರದೇಶಗಳು ಆಪಾಯಕ್ಕೆ ಸಿಲುಕಿವೆ. ಪೀಪಲ್ಸ್ ಲಿಬರೇಷನ್ ಆರ್ಮಿ ಎಲ್ಲೆ ಮೀರಿ ವರ್ತಿಸುತ್ತಿದೆ ಎಂದು ಆರೋಪಿಸಿದೆ.
ಮತ್ತೊಂದು ಕಡೆ ಅಮೆಕದ ತೈವಾನ್ ಪ್ರವಾಸ ನಿನ್ನೆಯ ಕೊನೆಗೊಂಡಿದೆ. ಆದರೆ ಅಮೆರಿಕ ಮತ್ತು ಚೀನಾ ನಡುವಿನ ಉದ್ವಿಗ್ನತೆ ಮಾತ್ರ ಮತ್ತಷ್ಟು ಹೆಚ್ಚಾಗಿದೆ. ತೈವಾನ್ ದ್ವೀಪವನ್ನ ತನ್ನ ಭೂಭಾಗವಾಗಿ ನೋಡ್ತಿರುವ ಚೀನಾ, ಅಮೆರಿಕದ ಸ್ಪೀಕರ್ ಭೇಟಿಯಿಂದಾಗಿ ತನ್ನ ಸಾರ್ವಭೌಮತ್ವಕ್ಕೆ ಧಕ್ಕೆ ಆಗಿದೆ ಅಂದ್ಕೊಂಡಿದೆ. ಏತನ್ಮಧ್ಯೆ, ಚೀನಾದ ಬೆದರಿಕೆಗಳಿಗೆ ನಾವು ‘ತಲೆ ಬಾಗುವುದಿಲ್ಲ’ ಎಂದು ತೈವಾನ್ ಅಧ್ಯಕ್ಷೆ ತ್ಸೈ ಇಂಗ್ ವೆನ್ ಹೇಳಿದ್ದಾರೆ.
ಇದನ್ನೂ ಓದಿ: ಹಂಗ್ ಮಾಡ್ತೀವಿ.. ಹಿಂಗ್ ಮಾಡ್ತೀವಿ ಅಂತ ಚೀನಾ ಅಂದಿದ್ದೇ ಬಂತು.. ತೈವಾನ್ನಲ್ಲಿ ಅಮೆರಿಕಾದ್ದೇ ಗೆಲುವಾಯ್ತು..!
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post