ಮಂಗಳ ಗೌರಿ ಮದುವೆ ಧಾರಾವಾಹಿಗೆ ಕರ್ನಾಟಕದಲ್ಲಿ ಒಂದೊಳ್ಳೆ ಫ್ಯಾನ್ ಫಾಲೋವರ್ಸ್ ಇದ್ದಾರೆ.. ಏನಿಲ್ಲ ಅಂದ್ರು 10 ವರ್ಷದಿಂದ ಧಾರಾವಾಹಿ ನಮ್ಮನ್ನೆಲ್ಲಾ ರಂಜಿಸ್ತಾನೆ ಬಂದಿದ್ದಾರೆ.. ಈ ಧಾರಾವಾಹಿ ನಟ ನಟಿಯರು ಅಷ್ಟೆ ಧಾರಾವಾಹಿಗೆ ಒಳ್ಳೆ ಕಾಂಟ್ರಿಬ್ಯೂಷನ್ ಕೊಡ್ತಿದ್ದಾರೆ..
ಸದ್ಯ ವಿಷ್ಯ ಎನಪ್ಪ ಅಂದ್ರೆ ಧಾರಾವಾಹಿಯಲ್ಲಿ ನಾಯಕ ನಟ ರಾಜೀವ್ ಅಣ್ಣನ ಪಾತ್ರಧಾರಿಯಾದ ನಟ ಹರೀಶ್ ಗೌಡ ಸ್ವಲ್ಪ ದಿನಗಳ ಕಾಲ ಸೀರಿಯಲ್ನಲ್ಲಿ ಕಾಣಿಸಿಕೊಂಡಿರಲಿಲ್ಲ.. ಅದು ಸ್ಕ್ರಿಪ್ಟ್ ಆ ರೀತಿ ಬೆಳವಣಿಗೆ ಆಯಿತೋ ಅಥವಾ ವೈಯಕ್ತಿಕ ಕಾರಣಗಳಿಂದ ಆಚೆ ಇದ್ದರೋ.. ಇದರ ಬಗ್ಗೆ ಯಾವುದೇ ಸರಿಯಾದ ಮಾಹಿತಿಯಿಲ್ಲ..
ಆದ್ರೆ.. ಇವರ ಸ್ಕ್ರೀನ್ ಸ್ಪೇಸ್ ಇತ್ತೀಚೆಗೆ ಕಮ್ಮಿಯಾಗಿತ್ತು.. ವೀಕ್ಷಕರು ಇವರ ಪಾತ್ರ ಮುಗಿದೋಯ್ತೇನು ಅಂತಾ ಅನ್ಕೊಂಡಿದ್ರು.. ಆದ್ರೆ ಮೊನ್ನೆಯ ಎಪಿಸೋಡ್ನಲ್ಲಿ ದಿಢೀರ್ ಅಂತಾ ಹರೀಶ್ ಗೌಡ ರಾಜೀವ್ ಮುಂದೆ ಪ್ರತ್ಯಕ್ಷವಾಗಿದ್ದಾರೆ..
ಯೆಸ್, ನಟ ಹರೀಶ್ ಒಂಥರ ಮಂಗಳ ಗೌರಿ ಮದುವೆಗೆ ಸೂಪರ್ ಕಂಬ್ಯಾಕ್ ಮಾಡಿದ್ದಾರೆ ಅಂತಾನೆ ಹೇಳ್ಬೋದು.. ಧಾರಾವಾಹಿಯ ಟ್ರ್ಯಾಕ್ ಅ್ವಲ್ಪ ಬದಲಾವಣೆ ಆಗಿದ್ದ ಕಾರಣದಿಂದ ಇವರ ಪಾತ್ರ ಸ್ಕ್ರೀನ್ ಮೇಲೆ ಬಂದಿರ್ಲಿಲ್ಲ.. ಆದ್ರೆ ಈಗ ಮತ್ತೆ ರಾಜೀವ್ಗೆ ಸೂಪರ್ ಸಪೋರ್ಟಿವ್ ಆಗಲು ಸೀರಿಯಲ್ಗೆ ವಾಪಸ್ ಆಗಿದ್ದಾರೆ..
ಒಟ್ನಲ್ಲಿ.. ಈ ಪಾತ್ರ ಎಲ್ಲಿ ಹೋಯ್ತಪ್ಪ ಅಂತಾ ಅನ್ಕೊಂತಿದ್ದವರಿಗೆ ಈಗ ಉತ್ತರ ಸಿಕ್ಕಿದಂತಾಗಿದೆ.. ಮತ್ತೆ ನಟ ಹರೀಶ್ ಗೌಡ ಮಂಗಳ ಧಾರಾವಾಹಿಯ ಮೂಲಕ ನಿಮ್ಮನ್ನೆಲ್ಲಾ ರಂಜಿಸಲು ಮತ್ತೆ ಬಂದಿದ್ದಾರೆ..
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post