ಬೆಂಗಳೂರು: ನಿನ್ನೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಗ್ಗಟ್ಟಿನ ಮಂತ್ರವನ್ನ ಜಪಿಸಿದರು. ಇಬ್ಬರು ಪರಸ್ಪರ ಕೈಯೆತ್ತಿ ತಮ್ಮ ಕಾರ್ಯಕರ್ತರಿಗೆ ಒಗ್ಗಟ್ಟಾಗಿದ್ದೇವೆ ಎಂದು ತೋರಿಸಿದರು.
ಇಬ್ಬರು ಪರಸ್ಪರ ಕೈ ಎತ್ತಿ ಒಗ್ಗಟ್ಟು ಪ್ರದರ್ಶಿಸಿರೋದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಈ ಬಗ್ಗೆ ರಾಮನಗರದಲ್ಲಿ ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಏನಂದ್ರು ಕುಮಾರಸ್ವಾಮಿ..?
ಒಳ್ಳೇದಲ್ವಾ? ಮೈತ್ರಿ ಸರ್ಕಾರ ಆದಾಗ ನನಗೂ ಕೈಕೈ ಹಿಡಿದುಕೊಂಡು ಕೈಯೇ ಎತ್ತಿಲ್ವಾ? ಕೈ ಎತ್ತೋದು, ಕೈ ಇಳಿಸೋದು ಆಯಾ ಸಂದರ್ಭದಲ್ಲಿ ನಡೀತಲೇ ಇರುತ್ತದೆ. ನಾನು ಕೈ ಎತ್ತಿಸಿಕೊಂಡು ಬೆನ್ನಿಗೆ ಚೂರಿ ಹಾಕಿಸಿಕೊಂಡಿಲ್ವಾ? ಅದೇ ರೀತಿ ಇಬ್ಬರೂ ಕೈ ಎತ್ತಿ ಜನರಿಗೆ ತೋರಿಸಿದ್ದಾರೆ. ಯಾರ ಬೆನ್ನಿಗೆ ಯಾರು ಚೂರಿ ಹಾಕ್ತಾರೆ ಎಂದು ಆನಂತರ ನೋಡೊಣ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post