ರಾಷ್ಟ್ರ ಧ್ವಜಕ್ಕೂ ಹುಬ್ಬಳ್ಳಿಗೂ ಬಿಡದ ನಂಟು. ಈದ್ಗಾ ಮೈದಾನ ತಿರಂಗಾ ಯಾತ್ರೆಯಲ್ಲಿ ಅರಳಿದ ಕಮಲಕ್ಕೆ ಕಂಟಕ ತಂದೊಡ್ಡಲು ಕಾಂಗ್ರೆಸ್ ಸಜ್ಜಾಗಿದೆ. ಇದಕ್ಕೆಲ್ಲಾ ನೂತನ ದ್ವಜ ಸಂಹಿತೆಯೇ ಕಾರಣ. ಇದೇ ವಿಷಯಕ್ಕೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಹುಬ್ಬಳ್ಳಿಯಲ್ಲಿರುವ ದೇಶದ ಏಕೈಕ ರಾಷ್ಟ್ರ ಧ್ವಜ ನಿರ್ಮಾಣ ಘಟಕಕ್ಕೆ ಭೇಟಿ ನೀಡಿದ್ದಾರೆ.
ದೇಶದ ಏಕೈಕ್ ಬಿಐಎಸ್ ಮಾನ್ಯತೆ ಪಡೆದ ರಾಷ್ಟ್ರ ದ್ವಜ ಕೈಗಾರಿಕಾ ಘಟಕ ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗಕ್ಕೆ ರಾಹುಲ್ ಗಾಂಧಿ ನಿನ್ನೆ ಭೇಟಿ ನೀಡಿದ್ದರು. ಖಾದಿ ಪಿತಾಮಹ ವೆಂಕಟೇಶ ಮಾಗಡಿ ಪುತ್ತಳಿಗೆ ಕೈ ಮುಗಿದ ಖಾದಿ ಗ್ರಾಮೋದ್ಯೋಕ್ಕೆ ಎಂಟ್ರಿ ಕೊಟ್ಟಿದ್ದರು. ಯಂತ್ರದಿಂದ ಧ್ವಜ ತಯಾರಿಕೆಗೆ ವಿರೋಧಿಸಿ ಕಾಂಗ್ರೆಸ್ ಅಭಿಯಾನ ಶುರು ಮಾಡಿದ್ದು ಈ ಹಿನ್ನೆಲೆ ಖಾಧಿ ಗ್ರಾಮೋದ್ಯೋಗಕ್ಕೆ ರಾಗಾ ಭೇಟಿ ನೀಡಿದ್ದರು. ಈ ವೇಳೆ ಡಿಕೆ ಶಿವಕುಮಾರ್, ವೇಣುಗೋಪಾಲ್ ಸಾಥ್ ರಾಹುಲ್ಗೆ ಜೊತೆಗಿದ್ದರು. ಬೆಂಗೇರಿಯಲ್ಲಿ ಧ್ವಜ ತಯಾರಿಕೆ ಹಿನ್ನೆಲೆ ಖಾಧಿ ಗ್ರಾಮೋದ್ಯೋಗ ವೀಕ್ಷಣೆಗೆ ಸಾರ್ವಜನಿಕರ ವಿಕ್ಷಣೆ ನಿರ್ಬಂಧಿಸಲಾಗಿದ್ದು, ಭಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ರಾಷ್ಟ್ರಧ್ವಜಕ್ಕೂ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಗೂ ಒಂದು ರೀತಿ ಅವಿನಾಭಾವ ಸಂಬಂಧ ಇದೆ. ದೇಶದ ಏಕೈಕ ರಾಷ್ಟ್ರ ಧ್ವಜ ನಿರ್ಮಾಣ ಘಟಕ ಇರೋದು ಕೂಡ ಇದೇ ಹುಬ್ಬಳ್ಳಿಯಲ್ಲಿ. 75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಸಂಭ್ರಮದ ಮಧ್ಯೆ, ಕೇಂದ್ರ ಸರ್ಕಾರದ ಹರ್ಘರ್ ತಿರಂಗಾ ಕಾರ್ಯಕ್ರಮ ಟೀಕೆಗೆ ಗುರಿಯಾಗಿದೆ.
ಹೌದು.. ಕಾಶ್ಮೀರದಲ್ಲಿ ಮುರುಳಿ ಮನೋಹರ್ ಜೋಶಿ ತಿರಂಗಾ ಯಾತ್ರೆಯಿಂದ ಉತ್ತರದಲ್ಲಿ ಬಿಜೆಪಿಗೆ ನೆಲೆ ಸಿಕ್ಕರೆ, ಹುಬ್ಬಳ್ಳಿ ಈದ್ಗಾ ಮೈದಾನದಿಂದ ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ತೆರೆದಿತ್ತು. ಅದೆಲ್ಲಾ ಈಗ ಇತಿಹಾಸ. ಆದ್ರೆ ರಾಷ್ಟ್ರಧ್ವಜದಿಂದ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ ಅದೇ ರಾಷ್ಟ್ರಧ್ವಜಕ್ಕೆ ಅವಮಾನಿಸುತ್ತಿದೆ ಅನ್ನೋದು ಕಾಂಗ್ರೆಸ್ ನಾಯಕರ ಆರೋಪವಾಗಿದೆ.
कर्नाटक खादी ग्रामोद्योग के सभी साथियों से मिलकर बहुत खुशी हुई।
इतिहास गवाह है, 'हर घर तिरंगा' मुहीम चलाने वाले, उस देशद्रोही संगठन से निकले हैं, जिन्होंने 52 सालों तक तिरंगा नहीं फहराया।
आज़ादी की लड़ाई से, ये कांग्रेस पार्टी को तब भी नहीं रोक पाए और आज भी नहीं रोक पाएंगे। pic.twitter.com/tp2fjLki75
— Rahul Gandhi (@RahulGandhi) August 3, 2022
ಕಾಂಗ್ರೆಸ್ ನಾಯಕರ ಆರೋಪವೇನು?
1950ರ ಕಾನೂನಿನ ಪ್ರಕಾರ ರಾಷ್ಟ್ರಧ್ವಜವನ್ನು ಖಾದಿ, ಉಣ್ಣೆ, ರೇಷ್ಮೆ ಬಟ್ಟೆಗಳಿಂದ ಮಾತ್ರ ತಯಾರಿಸಬೇಕು ಹಾಗೂ ಕೈನಿಂದ ತಯಾರಿಸಿದ್ದಾಗಿರಬೇಕು ಎಂಬ ಕಾನೂನಿದೆ. ಇದು ಕಾಲಾನಂತರ ಹಲವು ಬಾರಿ ತಿದ್ದುಪಡಿ ಮಾಡಲಾಗಿದೆ. ಆದರೆ ಧ್ವಜ ತಯಾರಿಕೆ ನಿಯಮದಲ್ಲಿ ಮಾತ್ರ ರಾಜಿಯಾಗಿರಲಿಲ್ಲ. ಆದ್ರೀಗ ಕೇಂದ್ರದ ಬಿಜೆಪಿ ಸರ್ಕಾರ 2021ರ ಡಿಸೆಂಬರ್ನಲ್ಲಿ ಧ್ವಜ ನೀತಿ ಸಂಹಿತೆಗೆ ತಿದ್ದುಪಡಿ ತಂದಿದೆ. ಇದರಲ್ಲಿ ಧ್ವಜ ತಯಾರಿಕೆಯಲ್ಲಿ ಪಾಲಿಸ್ಟರ್ ಬಟ್ಟೆಗೂ ಅವಕಾಶ ಕಲ್ಪಿಸಿದೆ. ಅಷ್ಟೇ ಅಲ್ಲ, ಯಂತ್ರಗಳಿಂದಲೂ ಧ್ವಜ ತಯಾರಿಸಬಹುದೆಂದು ತಿದ್ದುಪಡಿ ಮಾಡಿದೆ.
ಹರ್ ಘರ್ ತಿರಂಗಾ ಕಾರ್ಯಕ್ರಮ ಹಿನ್ನಲೆ ಧ್ವಜಗಳ ಕೊರತೆ ಸರಿದೂಗಿಸಲು ಕಂಪನಿಯೊಂದು ಚೈನಾದಿಂದ ಪಾಲಿಸ್ಟರ್ ಬಟ್ಟೆಯನ್ನು ಆಮುದು ಮಾಡಿಕೊಂಡಿದೆ. ಮಷಿನ್ ನಲ್ಲಿ 20 ಕೋಟಿಗೂ ಹೆಚ್ಚು ಧ್ವಜ ತಯಾರಿಕೆಯಲ್ಲಿ ನಿರತವಾಗಿದೆ. ಈ ಕಂಪನಿ ಕೇಂದ್ರ ಸಚಿವರೊಬ್ಬರ ಸ್ನೇಹಿತರದ್ದು ಎನ್ನಲಾಗಿದೆ. ರಾಷ್ಟ್ರ ಧ್ವಜಕ್ಕಿರುವ ನೀತಿ ಸಂಹಿತೆಗಳಿಗೆ ತಮ್ಮಿಷ್ಟದಂತೆ ತಿದ್ದುಪಡಿ ತಂದು ಅವಮಾನ ಮಾಡಲಾಗುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.
देश की शान है, हमारा तिरंगा
हर हिंदुस्तानी के दिल में है, हमारा तिरंगा pic.twitter.com/lhm0MWd3kM— Rahul Gandhi (@RahulGandhi) August 3, 2022
ಇದೇ ವಿಚಾರವನ್ನು ಅಸ್ತ್ರವಾಗಿ ಮಾಡಿಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಹುಬ್ಬಳ್ಳಿ ಬೆಂಗೇರಿಯಲ್ಲಿರುವ ಬಿಎಸ್ಐ ಮಾನ್ಯತೆ ಪಡೆದ ದೇಶದ ಏಕೈಕ ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ರಾಹುಲ್ ಗಾಂಧಿ ಭೇಟಿಗೂ ಮುನ್ನ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕೈ ನಾಯಕರು ಭೇಟಿ ನೀಡಿ, ಸಾಂಕೇತಿಕ ಸತ್ಯಾಗ್ರಹ ಮಾಡಿದ್ದರು. ದಶಕಗಳಿಂದ ಬೆಂಗೇರಿ ಖಾದಿ ಗ್ರಾಮೋಧ್ಯೋಗದಲ್ಲಿ ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿರುವ ಕೆಲಸಗಾರರಿಗೆ ಮಶಿನ್ ಮೇಡ್ ಧ್ವಜದಿಂದ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಹತ್ತಿ, ರೇಷ್ಮೆ ಹಾಗೂ ಉಣ್ಣೆ ಬಟ್ಟೆಗಳು ಪರಿಸರ ಸ್ನೇಹಿ, ಅಲ್ಲದೇ ಹೆಚ್ಚು ಜನರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಮತ್ತು ರಾಷ್ಟ್ರದ್ವಜ ಪಾವಿತ್ರೆತೆ ಕಾಪಾಡಲು ಸಂಹಿತೆಗಳನ್ನು ಜಾರಿ ಮಾಡಲಾಗಿತ್ತು. ಆದ್ರೆ ಈ ಧ್ವಜ ನಿರ್ಮಾಣದಲ್ಲಿ ಪಾಲಿಸ್ಟರ್ ಬಟ್ಟೆ ಕಾಲಿಟ್ಟರೆ ಪರಿಸರಕ್ಕೆ ಮಾರಕವಾಗಲಿದೆ. ಇನ್ನು ಯಂತ್ರಗಳು ಬಹುಜನರ ಉದ್ಯೋಗವನ್ನೂ ಕಿತ್ತುಕೊಳ್ಳಲಿವೆ ಎಂಬ ಆತಂಕ ಮನೆ ಮಾಡಿದೆ. ಇತ್ತ ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ಇದೇ ರಾಷ್ಟ್ರ ಧ್ವಜ ವಿಚಾರವನ್ನು ಪ್ರಬಲ ಅಸ್ತ್ರ ಮಾಡಿಕೊಳ್ಳಲು ಹವಣಿಸುತ್ತಿದೆ.
Former AICC President @RahulGandhi visited the National Flag manufacturing unit of Bengeri Khadi Village Industry in Hubli-Dharwad on Wednesday evening. AICC General Secretary @kcvenugopalmp , KPCC President @DKShivakumar and others were present.@INCKarnataka @prasad_abbayya pic.twitter.com/IeAmm8wbRE
— INC Hubli-Dharwad East-72. My Tiranga My Pride (@INCHubDwdEast) August 3, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post