ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧ ಕಾಂಗ್ರೆಸ್ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸ್ತಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.. ದೇಶದಲ್ಲಿ ಇಂದು ಸರ್ವಾಧಿಕಾರವಿದೆ. ನಾವು ನೋಡುತ್ತಿರುವುದು ಪ್ರಜಾಪ್ರಭುತ್ವದ ಕೊಲೆ. ಸಂಸತ್ತಿನಲ್ಲಿ ಚರ್ಚೆಗೆ ಅವಕಾಶವಿಲ್ಲ, ನಮ್ಮನ್ನು ಬಂಧಿಸಲಾಗುತ್ತಿದೆ ಎಂದು ಕಿಡಿ ಕಾರಿದರು.
ದೇಶದ ಪ್ರತೀ ಸಂಸ್ಥೆಯನ್ನೂ ಬಿಜೆಪಿ, RSS ಕಂಟ್ರೋಲ್ ಮಾಡ್ತಿದೆ
ಮಾಧ್ಯಮಗಳ ಮೇಲೂ ಹೆಚ್ಚಿನ ಒತ್ತಡವಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತಿದೆ. ಜನರು ಮುಂದೆ ಬರಬೇಕು. ಸರ್ವಾಧಿಕಾರದ ವಿರುದ್ಧ ಹೋರಾಡ್ತಿರುವವರ ವಿರುದ್ಧ ದಾಳಿ ಮಾಡಲಾಗ್ತಿದೆ. ಅವರನ್ನ ಜೈಲಿಗೆ ಕಳುಹಿಸುತ್ತಿದ್ದಾರೆ. ಕೆಟ್ಟದಾಗಿ ಥಳಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ದೇಶದ ಮಾಧ್ಯಮವೂ ಸೇರಿದಂತೆ ಪ್ರತಿಯೊಂದು ಸಂಸ್ಥೆಗಳನ್ನೂ ಸರ್ಕಾರ ಆಕ್ರಮಿಸಿಕೊಂಡಿದೆ. ಪ್ರತಿ ಸಂಸ್ಥೆಯಲ್ಲಿ ಒಬ್ಬ ಆರೆಸ್ಸೆಸ್ ವ್ಯಕ್ತಿ ಕುಳಿತಿದ್ದಾನೆ. ನಮ್ಮ ಸರ್ಕಾರ ಸಂಸ್ಥೆಗಳನ್ನ ನಿಯಂತ್ರಿಸಲಿಲ್ಲ. ನಾವು ಸಂಸ್ಥೆಗಳನ್ನು ಸ್ವತಂತ್ರವಾಗಿ ಇಡುತ್ತಿದ್ದೆವು. ಯಾರಾದರೂ ಸರ್ಕಾರದ ವಿರುದ್ಧ ಮಾತಾಡಿದರೆ ಸಿಬಿಐ, ಇ.ಡಿಗಳನ್ನ ಕಳುಹಿಸಲಾಗುತ್ತಿದೆ. ಇಂದು ನಾವು ಸರ್ಕಾರ ಈ ರೀತಿಯ ಕುಂತ್ರಗಳ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದರು.
ಪ್ರಜಾಪ್ರಭುತ್ವಕ್ಕಾಗಿ ಕೆಲಸ ಮಾಡುತ್ತೇನೆ
ನಿರುದ್ಯೋಗ ಮತ್ತು ಹಣದುಬ್ಬರ ಹೆಚ್ಚುತ್ತಿದೆ. ಭಾರತ ಸರ್ಕಾರ ಮಾತ್ರ ಅದ್ಯಾವುದೂ ಇಲ್ಲ ಎನ್ನುತ್ತಿದೆ. ನಾನು ಸತ್ಯವನ್ನು ಹೆಚ್ಚು ಮಾತನಾಡುತ್ತೇನೆ. ಹೀಗಾಗಿ ನನ್ನ ಮೇಲೆ ಹೆಚ್ಚು ದಾಳಿ ಆಗುತ್ತಿದೆ. ನಾನು ನನ್ನ ಕೆಲಸವನ್ನು ಮಾಡುತ್ತೇನೆ. ನಾನು ಪ್ರಜಾಪ್ರಭುತ್ವಕ್ಕಾಗಿ ಕೆಲಸ ಮಾಡುತ್ತೇನೆ. ಭಯಪಡುವವನು ಬೆದರಿಕೆ ಹಾಕುತ್ತಾನೆ. ಅವರು ಭಯಪಡುತ್ತಾರೆ. ಅವರು ನೀಡಿದ ಭರವಸೆಗಳನ್ನು ಈಡೇರಿಸದೆ ಭಯಪಡುತ್ತಿದ್ದಾರೆ. ಅವರು ಸುಳ್ಳು ಹೇಳುತ್ತಾರೆ. ನಿರುದ್ಯೋಗವಿಲ್ಲ, ಹಣದುಬ್ಬರವಿಲ್ಲ ಎಂದು ಅವರು ಚೀನಾದ ಬಗ್ಗೆಯೂ ಸುಳ್ಳು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post