ನ್ಯಾಷನಲ್ ಹೆರಾಲ್ಡ್ ಹಗರಣದ ಭೂತ, ಗಾಂಧಿ ಪರಿವಾರದ ಬೆನ್ನಲ್ಲೇ ಪಕ್ಷದ ಇತರೆ ನಾಯರಿಗೂ ಕಾಡ್ತಿದೆ. ಸಂಸತ್ತಿನ ಅಧಿವೇಶನದ ಮಧ್ಯೆದಲ್ಲೇ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಇ.ಡಿ ನೋಟಿಸ್ ಕೊಟ್ಟಿತ್ತು. ಅದರಂತೆ ನಿನ್ನೆ ವಿಚಾರಣೆಗೆ ಹಾಜರಾಗಿದ್ದ ಖರ್ಗೆಗೆ ಸುಮಾರು 7 ಗಂಟೆಗಳ ಕಾಲ ಇಡಿ ಡ್ರಿಲ್ ಮಾಡಿದೆ.
ಕಾಂಗ್ರೆಸ್ ನಾಯಕರಿಗೆ ತಪ್ಪುತ್ತಿಲ್ಲ ಹೆರಾಲ್ಡ್ ಸಂಕಷ್ಟ..!
ಗಾಂಧಿ ಕುಟುಂಬಕ್ಕೆ ನ್ಯಾಷನಲ್ ಹೆರಾಲ್ಡ್ ಸಂಕಷ್ಟದ ಬೆಟ್ಟವನ್ನೆ ಸೃಷ್ಟಿಸಿಬಿಟ್ಟಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಈಗಾಗಲೇ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮೂರ್ಮೂರು ಹಂತಗಳಲ್ಲಿ ಇಬ್ಬರಿಗೂ ಇಡಿ ಡ್ರಿಲ್ ಮಾಡಿತ್ತು. ಇದರ ಬೆನ್ನಲ್ಲೇ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹಿಡುವಳಿ ಕಂಪನಿಯಾದ ಯಂಗ್ ಇಂಡಿಯನ್ ಕಚೇರಿಯ ಮೇಲೆ ಇಡಿ ದಾಳಿ ನಡೆಸಿತ್ತು. ಕಚೇರಿಯಲ್ಲಿ ಶೋಧ ಕಾರ್ಯಾ ಮಾಡಿ ಕಚೇರಿಗೆ ಬೀಗ ಜಡಿದಿತ್ತು. ಇಷ್ಟರಲ್ಲೇ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿ ಕಾರ್ಜುನ್ ಖರ್ಗೆಗೆ ಇಡಿ ಶಾಕ್ ಕೊಟ್ಟಿತ್ತು.
7 ಗಂಟೆಗಳ ಕಾಲ ಮಲ್ಲಿಕಾರ್ಜುನ್ ಖರ್ಗೆಗೆ ಇ.ಡಿ ಡ್ರಿಲ್..!
ಸಂಸತ್ತಿನ ಅಧಿವೇಶನದ ನಡುವೆಯೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಇದೇ ವಿಚಾರ ಕಲಾಪದಲ್ಲಿ ಕೋಲಾಹಲಕ್ಕೆ ದಾರಿ ಮಾಡಿತ್ತು. ಇಷ್ಟೆಲ್ಲಾ ಆದ ಬಳಿಕ ನಿನ್ನೆ ಮಧ್ಯಾಹ್ಮ 1.30ಕ್ಕೆ ಖರ್ಗೆ ಇ.ಡಿ ಮುಂದೆ ಹಾಜರಾಗಿದ್ದರು.
7 ಗಂಟೆ ಕಾಲ ಖರ್ಗೆಗೆ ಇಡಿ ಡ್ರಿಲ್
- ನ್ಯಾಷನಲ್ ಹೆರಾಲ್ಡ್ ಕಚೇರಿಯಲ್ಲೇ ಖರ್ಗೆ ಇಡಿ ವಿಚಾರಣೆ
- ಮಧ್ಯಾಹ್ಮ 1.30 ರಿಂದ ರಾತ್ರಿ 8.30ರ ವರೆಗೂ ವಿಚಾರಣೆ
- ಯಂಗ್ ಇಂಡಿಯಾ ಕಂಪನಿಯ ವ್ಯವಹಾರದ ಬಗ್ಗೆ ಪ್ರಶ್ನೆ
- ಕಂಪನಿಯಲ್ಲಿ ನಿಮ್ಮ ಪಾತ್ರ, ವ್ಯವಹಾರದ ಪ್ರಕ್ರಿಯೆ ಹೇಗೆ?
- ಖರ್ಗೆಗೆ ಸುಮಾರು 20ಕ್ಕೂ ಹೆಚ್ಚು ಪ್ರಶ್ನೆ ಕೇಳಿದ ಇಡಿ ತಂಡ
- ಸುಮಾರು 7 ಗಂಟೆ ಕಾಲ ಮಲ್ಲಿಕಾರ್ಜುನ್ ಖರ್ಗೆಗೆ ಇಡಿ ಡ್ರಿಲ್
ಮಧ್ಯಾಹ್ನದಿಂದ ವಿಚಾರಣೆಗೊಳಗಾಗಿದ್ದ ಖರ್ಗೆ ಸುಮಾರು 8.30ಕ್ಕೆ ಹೊರಬಂದ್ರು. ಈ ವೇಳೆ ಮಾತನಾಡಿದ ಖರ್ಗೆ, ನಾನು ವಿಚಾರಣೆಯ ಬಗ್ಗೆ ಈಗ ಏನೋ ಹೇಳುವಂತಿಲ್ಲ ಅಂತ ಜಾರಿಕೊಂಡ್ರು. ಒಟ್ಟಾರೆ, ಗಾಂಧಿ ಪರಿವಾರಕ್ಕೆ ಕಂಟಕವಾಗಿದ್ದ ನ್ಯಾಷನಲ್ ಹೆರಾಲ್ಡ್ ಹಗರಣ ಭೂತ ಈಗ ಖರ್ಗೆ ಸಾಹೇಬರಿಗೂ ಬೆನ್ನುಬಿದ್ದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post