ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಅಕ್ರಮ ಕೇಸ್ ಸಂಬಂಧ ಮಾಜಿ ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ವಿಚಾರಣೆಯನ್ನು ಇಡಿ ಅಧಿಕಾರಿಗಳು ಮತ್ತಷ್ಟು ತೀವ್ರಗೊಳಿಸಿದ್ದಾರೆ. ವಿಚಾರಣೆ ವೇಳೆ ಅಚ್ಚರಿ ಸತ್ಯ ಬಯಲಿಗೆ ಬಂದಿದ್ದಾಗಿ ಕೋರ್ಟ್ಗೆ ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರ್ಪಿತಾ ಮುಖರ್ಜಿಗೆ ಜೀವ ಬೆದರಿಕೆ ಇದೆ. ನಮಗೆ ಇನ್ನೂ 14 ದಿನಗಳ ಇವರನ್ನು ಕಸ್ಟಡಿಗೆ ಕೊಡಿ ಎಂದು ಮನವಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಜೈಲಿನಲ್ಲಿ ಇತರ ಖೈದಿಗಳೊಂದಿಗೆ ಇಡಬಾರದು. ಅರ್ಪಿತಾ ಮುಖರ್ಜಿಗೆ ತಿನ್ನೋ ಊಟ, ಕುಡಿಯೋ ನೀರು ಕೂಡ ಪರೀಕ್ಷೆ ಮಾಡಿ ಕೊಡಬೇಕು. ಹಾಗೆಯೇ ಬಿಗಿ ಪೊಲೀಸ್ ಭದ್ರತೆ ನೀಡಿ ಎಂದು ಪೊಲೀಸರಿಗೆ ಆದೇಶಿಸುವಂತೆ ಕೋರ್ಟ್ಗೆ ಇಡಿ ಮನವಿ ಮಾಡಿದೆ.
ಇನ್ನು, ಬಂಧಿತ ಮಾಜಿ ಸಚಿವರ ಆಪ್ತೆ ಅರ್ಪಿತಾ ಮುಖರ್ಜಿಗೆ ಇ.ಡಿ ಕುಣಿಕೆ ಮತ್ತಷ್ಟು ಬಿಗಿಗೊಳಿಸುತ್ತಿದೆ. ಅರ್ಪಿತಾ ಮುಖರ್ಜಿಯ ಹಲವು ಆಸ್ತಿಗಳು ಒಂದೊಂದಾಗಿ ಮುನ್ನೆಲೆಗೆ ಬರುತ್ತಿವೆ. ಅರ್ಪಿತಾ ಮುಖರ್ಜಿಗೆ ಸೇರಿದ ಇನ್ನೂ 7 ಆಸ್ತಿಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post