ಮಂಡ್ಯ: ಸತತವಾಗಿ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದ ನೀರಿನ ರಭಸಕ್ಕೆ ಗೂಡ್ಸ್ ವಾಹನ ಕೊಚ್ಚಿ ಹೋದ ಘಟನೆ ನಾಗಮಂಗಲ ತಾಲೂಕಿನ ಅಣೆಚನ್ನಾಪುರ ಬಳಿ ನಡೆದಿದೆ. ಭಾರೀ ಪ್ರಮಾಣದ ಭಾರಿ ಮಳೆಗೆ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧ ಮಾಡಲಾಗಿತ್ತು.
ಸಂಚಾರ ನಿರ್ಬಂಧ ಲೆಕ್ಕಿಸದೆ ಸೇತುವೆ ಮೇಲೆ ವಾಹನ ತೆಗೆದುಕೊಂಡು ಹೋಗಿದ್ದ ಚಾಲಕನೋರ್ವ ನೀರಿನ ರಭಸಕ್ಕೆ ವಾಹನದ ಸಮೇತ ಕೊಚ್ಚಿ ಹೋಗಿದ್ದಾನೆ. ಆದರೆ ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಿರ್ಬಂಧ ಹೇರಿದ್ದರೂ ಹುಚ್ಚಾಟಕ್ಕೆ ಮುಂದಾಗುತ್ತಿರುವವರ ವಿರುದ್ಥ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post