ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಇಂದು ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಒಂದು ಕ್ಷಣ ಖರ್ಗೆಯನ್ನ ನೋಡಿದ ಕಾಂಗ್ರೆಸ್ ನಾಯಕರೂ ಕೂಡ ಗಾಬರಿ ಬೀಳುವಂತೆ ಕಾಣ್ತಿದ್ದಾರೆ.
ಬ್ಲ್ಯಾಕ್ ಕುರ್ತಾ ಧರಿಸಿರುವ ಕಾಂಗ್ರೆಸ್ ನಾಯಕ ಬಿಳಿ ಪಂಜೆ ಉಟ್ಟುಕೊಂಡಿದ್ದಾರೆ. ಹಾಗೆಯೇ ತಲೆಗೆ ಬ್ಲ್ಯಾಕ್ ರೂಮಾಲ್ ಕಟ್ಟಿಕೊಂಡಿದ್ದರೆ, ಕಾಲಿಗೆ ಹಾಕಿರುವ ಶೂ ಕೂಡ ಕಪ್ಪುಬಣ್ಣದಾಗಿದೆ. ಕೈಗೆ ಕಟ್ಟಿಕೊಂಡಿರುವ ವಾಚಿನ ಬೆಲ್ಟ್ ಕೂಡ ಕಪ್ಪು ಬಣ್ಣದಂತೆ ಕಂಡು ಬರ್ತಿದೆ.
ಯಾಕೆ ಖರ್ಗೆ ಈ ವೇಷ..?
ಅಂದ್ಹಾಗೆ ಇಂದು ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ. ಬೆಲೆ ಏರಿಕೆ, ಹಣದುಬ್ಬರ ಮತ್ತು ನಿರುದ್ಯೋಗ ಹೆಚ್ಚಾಗಿರೋದನ್ನ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಮೋದಿ ಸರ್ಕಾರದ ಆಡಳಿತವನ್ನ ಖಂಡಿಸುವ ಉದ್ದೇಶದಿಂದ ಖರ್ಗೆ ಬ್ಲ್ಯಾಕ್ ಬಟ್ಟೆ ಧರಿಸಿ ಬಂದಿದ್ದಾರೆ.
ನಿನ್ನೆಯಷ್ಟೇ ED ವಿಚಾರಣೆ
ಇನ್ನೊಂದು ವಿಚಾರ ಅಂದರೆ ಮಲ್ಲಿಕಾರ್ಜುನ್ ಖರ್ಗೆಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಿಸಿ ತಟ್ಟಿದೆ. ಇ.ಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ನಿನ್ನೆ ಬರೋಬ್ಬರಿ 7 ಗಂಟೆಗಳ ಕಾಲ ಇಡಿ ವಿಚಾರಣೆಯನ್ನ ಎದುರಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಖರ್ಗೆ ಇವತ್ತು ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post