ಬೆಂಗಳೂರು: ಹೆತ್ತ ತಾಯಿಯೇ ಹುಟ್ಟಿದ ಮಗು ಬುದ್ಧಿಮಾಂದ್ಯ ಎಂದು ನಾಲ್ಕನೇ ಮಹಡಿಯಿಂದ ಕೆಳಗೆ ಎಸೆದಿರೋ ಹೃದಯ ವಿದ್ರಾವಕ ಘಟನೆ ನಗರದ ಸಂಪಂಗಿರಾಮನಗರ ಅದ್ವಿತ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ದ್ವಿತಿ (4) ಮೃತ ಕಂದಮ್ಮ. ಈ ಕೃತ್ಯದ ಹಿಂದಿನ ರಹಸ್ಯ ಬಯಲಾಗಿದೆ.
ನಾಲ್ಕನೇ ಫ್ಲೋರ್ಗೆ ಹೋಗಿ ಮಗುವನ್ನ ಆಟವಾಡಿಸುತ್ತಾ ಆರೋಪಿ ತಾಯಿ ಸುಷ್ಮಾ ಕೆಳಗೆ ಎಸೆದಿದ್ದಾಳೆ. ಬಳಿಕ ತಾನೂ ಆತ್ಮಹತ್ಯೆಗೆ ಮುಂದಾಗಲು ಯತ್ನಿಸಿದ್ದಾಳೆ. ನಂತರ ಭಯಗೊಂಡು ಕಾಪಾಡಿ ಕಾಪಾಡಿ ಎಂದು ಕೂಗುತ್ತಾ ತಾನೂ ಕೆಳಗೆ ಬೀಳುವಂತೆ ನಟಿಸಿದ್ದಾಳೆ. ಕೂಡಲೇ ಅಕ್ಕಪಕ್ಕದ ನಿವಾಸಿಗಳು ಬಂದು ಆರೋಪಿ ತಾಯಿ ಸುಷ್ಮಾಳನ್ನು ರಕ್ಷಣೆ ಮಾಡಿದ್ದಾರೆ.
ಪೊಲೀಸರು ವಿಚಾರಣೆ ನಡೆಸುತ್ತಿದ್ದಾಗ ತಾಯಿ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಮಗುವನ್ನ ಆಟಡಿಸುತ್ತಿದ್ದೆ. ಈ ವೇಳೆ ಅಚಾನಕ್ಕಾಗಿ ಮಗು ಕೆಳಗೆ ಬಿತ್ತು. ನಾನು ಕೂಡ ಬೀಳುವ ಸ್ಥಿತಿಯಲ್ಲಿದ್ದೆ. ಈ ವೇಳೆ ಪಕ್ಕದ ಫ್ಲಾಟ್ನ ನಿವಾಸಿಗಳು ನನ್ನ ಕಾಪಾಡಿದರು ಎಂದಿದ್ದಾಳೆ. ಆದರೆ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ತೋರಿಸಿದ ಬಳಿಕ ಸುಷ್ಮಾ ಗಪ್ ಚುಪ್ ಆಗಿದ್ದಾಳೆ.
ಈ ಕೇಸ್ಗೆ ಸಂಬಂಧಿಸಿದಂತೆ ಮಾತನಾಡಿದ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ, ಮಗುವನ್ನು ದಾಖಲಿಸಲಾಗಿತ್ತು. ನಾಲ್ಕನೇ ಮಹಡಿಯಿಂದ ಮಗು ಕಳಗಡೆ ಬಿದ್ದಿದೆ ಎಂದು ಮಾಹಿತಿ ಬಂತು. ಹಾಗಾಗಿ ನಾವು ಕುಲಂಕುಶವಾಗಿ ತನಿಖೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಾಯಿಯು ಬೇಕು ಎಂದೇ ಮಗುವನ್ನು ಎಸೆದಿದ್ದಾರೆ. ಆರೋಪಿ ತಾಯಿಯನ್ನು ಅರೆಸ್ಟ್ ಮಾಡಿ ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post