ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರ ಅಂದರೆ ರೆಪೋ ರೇಟ್ ಹೆಚ್ಚಿಸಿದೆ.
ಪರಿಷ್ಕೃತ ದರದ ಪ್ರಕಾರ, ಶೇಕಡಾ 4.9 ರಿಂದ ಶೇಕಡಾ 5.4 ಕ್ಕೆ ಏರಿಕೆ ಮಾಡಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ನಾವು ಹೆಚ್ಚಿನ ಹಣದುಬ್ಬರದ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಹಣಕಾಸು ಮಾರುಕಟ್ಟೆಗಳು ಅಸ್ಥಿರವಾಗಿವೆ. ಹೀಗಾಗಿ ಇಂತಹ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರೆಪೋ ದರ ಅಂದ್ರೆ..?
ರೆಪೋ ದರ ಅಂದರೆ ಆರ್‌ಬಿಐ, ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ವಿವಿಧ ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆ ಉಂಟಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರವೇ ರೆಪೋ ರೇಟ್
ಇವತ್ತಿನ ರೆಪೋ ರೇಟ್ ಹೆಚ್ಚಳದ ಮೂಲಕ ಕೊರೊನಾಗಿಂತ ಮುಂಚೆ ವಿಧಿಸಲಾಗ್ತಿದ್ದ ದರಕ್ಕೆ ಬಂದು ನಿಂತಿದೆ. ಹಣದುಬ್ಬರ ಹಿನ್ನೆಲೆಯಲ್ಲಿ ಆರ್‌ಬಿಐ ಸತತ ಮೂರನೇ ಬಾರಿಗೆ ರೆಪೋ ದರವನ್ನ ಹೆಚ್ಚಳ ಮಾಡಿದೆ. ಇದಕ್ಕೂ ಮುನ್ನ ಆರ್‌ಬಿಐ ಮೇ ಮತ್ತು ಜೂನ್‌ನಲ್ಲಿ ಒಟ್ಟು ಶೇ.0.90ರಷ್ಟು ಹೆಚ್ಚಿಸಿತ್ತು. ಅಂದರೆ ಕಳೆದ ನಾಲ್ಕು ತಿಂಗಳಲ್ಲಿ ರೆಪೋ ದರ ಶೇ.1.4ರಷ್ಟು ಏರಿಕೆಯಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post