ಕಾರು-ಬೈಕ್ಗಳ ಮೇಲೆ ವಿಶೇಷ ಕ್ರೇಜ್ ಹೊಂದಿರುವ ಸೂರ್ಯಕುಮಾರ್ ಮತ್ತೊಂದು ಐಷರಾಮಿ ಕಾರು ಖರೀದಿಸಿದ್ದಾರೆ. ಸೂರ್ಯ BMW 5 ಸೀರಿಸ್, ಆಡಿ A6, ರೇಂಜ್ ರೋವರ್, ಹ್ಯುಂಡೈ ಐ20 ಮತ್ತು ಫಾರ್ಚುನರ್ ಕಾರು ಹೊಂದಿದ್ದಾರೆ. ಈಗ ಐಷರಾಮಿ SUV ಸ್ಪೋರ್ಟ್ಸ್ ಕಾರು ಖರೀಸಿದಿದ್ದು, ಶೀಘ್ರದಲ್ಲೇ ಡೆಲಿವರಿ ಆಗಲಿದೆ ಎಂದಿದ್ದಾರೆ. ಇದರ ಬೆಲೆ ಲಕ್ಷಗಟ್ಟಲೇ ಇದೆ.
ಸೂರ್ಯ ತಮ್ಮ ಇನ್ಸ್ಟ್ರಾಗ್ರಾಂ ಸ್ಟೋರಿಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಕಾರಿನ ಚಿತ್ರದೊಂದಿಗೆ ‘ರೆಡಿ ಫಾರ್ ಡೆಲಿವರಿ’ ಎಂದು ಬರೆದಿದ್ದಾರೆ. ಇನ್ನು ಸುಜುಕಿ ಹಯಾಬುಸಾ ಮತ್ತು ಹಾರ್ಲೆ ಡೇವಿಡ್ಸನ್ ಬೈಕ್‌ಗಳನ್ನೂ ಹೊಂದಿದ್ದಾರೆ.
ಪ್ರಸ್ತುತ ಭಾರತ-ಮುಂಬೈ ಇಂಡಿಯನ್ಸ್ ಪ್ರತಿನಿಧಿಸುತ್ತಿರುವ ಸೂರ್ಯರ ವಾರ್ಷಿಕ ಆದಾಯ 20 ಕೋಟಿ ಇದೆ. ಪ್ರಸ್ತುತ ವಿಂಡೀಸ್ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಸೂರ್ಯ, 76 ರನ್ ಸಿಡಿಸಿ ಗೆಲುವಿಗೆ ಪ್ರಮುಖ ಪಾತ್ರರಾಗಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post