ಕೆಲವೇ ತಿಂಗಳುಗಳ ಹಿಂದೆ ಈ ಆಟಗಾರರ ಭವಿಷ್ಯದ ಬಗ್ಗೆಯೇ ಪ್ರಶ್ನೆಗಳು ಎದ್ದಿದ್ವು. ಹಲವ್ರು ಇವರು ಮತ್ತೆ ತಂಡಕ್ಕೆ ಕಮ್ಬ್ಯಾಕ್ ಮಾಡೋದು ಅನುಮಾನ ಅಂದಿದ್ರು. ಆದ್ರೆ, ಈ ಆಟಗಾರರು ಫಿನಿಕ್ಸ್ನಂತೆ ಎದ್ದು ನಿಂತಿದ್ದಾರೆ. ತಮ್ಮ ಅದ್ಭುತ ಆಟದ ಮೂಲಕ ತಂಡದ ಗೆಲುವಿನಲ್ಲಿ ಮಿಂಚ್ತಿದ್ದಾರೆ.
ಸದ್ಯ ಟೀಮ್ ಇಂಡಿಯಾದಲ್ಲಿ ಕಾಂಪಿಟೇಷನ್ ಸಿಕ್ಕಾಪಟ್ಟೆ ಜೋರಾಗಿದೆ. ಹಲವು ಆಟಗಾರರು ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ. ಮತ್ತೊಂದೆಡೆ, ಇವ್ರ ಕಥೆ ಮುಗೀತು, ಮತ್ತೆ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳೋದು ಕಷ್ಟ ಅಂದುಕೊಂಡಿದ್ದ ಆಟಗಾರರು, ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದ್ದಾರೆ. ಅಲ್ಲದೇ, ಟಿ20 ವಿಶ್ವಕಪ್ ತಂಡದ ಆಯ್ಕೆಯ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಖೇಲ್ ಖತಂ ಅಂದವ್ರಿಗೆ ಆಟದ ಮೂಲಕವೇ ಭುವಿ ಉತ್ತರ..!
ಭುವನೇಶ್ವರ್ ಕುಮಾರ್..! ಟೀಮ್ ಇಂಡಿಯಾದ ಸ್ವಿಂಗ್ ಸ್ಪೆಷಲಿಸ್ಟ್. ಪಿಚ್ ಯಾವ್ದೇ ಇದ್ರು ಬಾಲ್ ಸ್ವಿಂಗ್ ಮಾಡೋದ್ರಲ್ಲಿ ಭುವಿ ಪಂಟರ್. ಆದ್ರೆ, ಇಂಜುರಿ, ಹಾಗೂ ಔಟ್ ಆಫ್ ಫಾರ್ಮ್ನಿಂದಾಗಿ ಭುವನೇಶ್ವರ್ ಕುಮಾರ್ ಕರಿಯರ್, ಸಂಕಷ್ಟಕ್ಕೆ ಸಿಲುಕಿತ್ತು. ಕಳೆದ ವರ್ಷ ಭುವಿ ತಮ್ಮ ಖದರ್ ತೋರುವಲ್ಲಿ ವಿಫಲರಾಗಿದ್ರು. 12 ಪಂದ್ಯಗಳಿಂದ ಕೇವಲ 12 ವಿಕೆಟ್ಗಳನ್ನ ಮಾತ್ರ ಭುವಿ ಪಡೆದಿದ್ರು. ಟಿ20 ವಿಶ್ವಕಪ್ ಟೂರ್ನಿಯಲ್ಲೂ, ಭುವಿ ಮ್ಯಾಜಿಕ್ ವರ್ಕೌಟ್ ಆಗಿರಲಿಲ್ಲ. 18 ತಿಂಗಳ ಹಿಂದೆ ಭುವಿ ಕರಿಯರ್ ಖತಂ ಅನ್ನೋ ಮಾತುಗಳು ಕೇಳಿ ಬಂದಿದ್ವು.
ಆದ್ರೆ ಈ ವರ್ಷ ಭುವಿ ಫೀನಿಕ್ಸ್ನಂತೆ ಎದ್ದು ಬಂದ್ರು. ವೆಸ್ಟ್ ಇಂಡೀಸ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಭುವಿ, ಸಾಲಿಡ್ ಫರ್ಫಾಮೆನ್ಸ್ ನೀಡಿದ್ರು. ಈಗ ಕೆರಿಬಿಯನ್ ನಾಡಲ್ಲೂ ಭುವಿ ಕಮಾಲ್ ಮಾಡ್ತಿದ್ದಾರೆ. ಈ ವರ್ಷ ಒಟ್ಟು 16 ಪಂದ್ಯಗಳನ್ನಾಡಿರೋ ಭುವಿ, ಕೇವಲ 6.83ರ ಎಕನಾಮಿಯಲ್ಲಿ ರನ್ ನೀಡಿ 20 ವಿಕೆಟ್ ಬೇಟೆಯಾಡಿದ್ದಾರೆ. ಇನ್ನು 13 ರನ್ ನೀಡಿ 4 ವಿಕೆಟ್ ಪಡೆದದ್ದು ಭುವಿ ಬೆಸ್ಟ್ ಬೌಲಿಂಗ್ ಫಿಗರ್ ಆಗಿದೆ.
ಕ್ರಿಕೆಟ್ ಜಗತ್ತಿಗೆ ಶಾಕ್ ಕೊಟ್ಟ ಡಿಕೆ ರೀ ಎಂಟ್ರಿ..!
ಯೆಸ್, ಸದ್ಯ ಟೀಮ್ ಇಂಡಿಯಾದಲ್ಲಿ ವಯಸ್ಸು ಹಾಗೂ ಅನುಭವ ಎರಡದರಲ್ಲೂ ಸೀನಿಯರ್ ಆಟಗಾರ ಅಂದ್ರೆ, ಅದು ದಿನೇಶ್ ಕಾರ್ತಿಕ್. ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಾಗ ತಂಡದಲ್ಲಿದ್ದ ಯಾವೊಬ್ಬ ಆಟಗಾರರು ಈಗ ಇಲ್ಲ. ಆದ್ರೆ ಡಿಕೆ ಮಾತ್ರ, ಮೂರು ವರ್ಷಗಳ ನಂತರ ಟೀಮ್ಗೆ ರೀ ಎಂಟ್ರಿ ಕೊಟ್ಟು, ಅಮೋಘ ಬ್ಯಾಟಿಂಗ್ ಮೂಲಕ, ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸ್ತಿದ್ದಾರೆ.
ಐಪಿಎಲ್ನಲ್ಲಿ ಆರ್ಸಿಬಿ ಪರ ಅಬ್ಬರಿಸಿದಂತೆ ಟೀಮ್ ಇಂಡಿಯಾ ಪರವೂ ಧೂಳೆಬ್ಬಿಸ್ತಿದ್ದಾರೆ. ದಕ್ಷಿಣ ಆಫ್ರಿಕಾ, ಐರ್ಲೆಂಡ್, ಇಂಗ್ಲೆಂಡ್ ಹಾಗೂ ಸದ್ಯ ವಿಂಡೀಸ್ ವಿರುದ್ಧದ ಟಿ20 ದಂಗಲ್ನಲ್ಲೂ ಡಿಕೆ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಆರ್ಭಟಿಸುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯರದ್ದು ಗ್ರೇಟ್ ಕಮ್ಬ್ಯಾಕ್ ಸ್ಟೋರಿ..!
ಹಾರ್ದಿಕ್ ಪಾಂಡ್ಯ, ವೈಟ್ಬಾಲ್ ಕ್ರಿಕೆಟ್ನಲ್ಲಿ ತಂಡದ ಮೇನ್ ಪ್ಲೇಯರ್. ಇಂಜುರಿ ಹಾಗೂ ಫಿಟ್ನೆಸ್ ಕಾರಣದಿಂದಾಗಿ ಏಳು ತಿಂಗಳ ಕಾಲ ಪಾಂಡ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿದ್ರು. ಆದ್ರೆ, ಐಪಿಎಲ್ ಸೀಸನ್ 15ರಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರರಲ್ಲೂ ಜಬರ್ದಸ್ತ್ ಪ್ರದರ್ಶನ ನೀಡಿ ಮತ್ತೆ ತಂಡದಲ್ಲಿ ಸ್ಥಾನ ಪಡೆದ್ರು. ಕಮ್ಬ್ಯಾಕ್ ನಂತರ ಆಡಿದ ಎಲ್ಲಾ ಸರಣಿಗಳಲ್ಲೂ ಪಾಂಡ್ಯ ಆಲ್ರೌಂಡರ್ ಆಟದ ಮೂಲಕ ಘರ್ಜಿಸ್ತಿದ್ದಾರೆ. ಆ ಮೂಲಕ ಟಿ20 ವಿಶ್ವಕಪ್ ತಂಡದಲ್ಲಿ ತಮ್ಮ ಸ್ಥಾನವನ್ನ ಫಿಕ್ಸ್ ಮಾಡಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ ಅಷ್ಟೇ ಅಲ್ಲ, ಗಿಲ್ ಅದ್ಭುತ ಬ್ಯಾಟರ್..!
ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಯಂಗ್ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಮಿಂಚಿದ್ರು. ಮೂರು ಪಂದ್ಯಳಿಂದ 103ರ ಸ್ಟ್ರೈಕ್ರೇಟ್ನಲ್ಲಿ 2 ಅರ್ಧಶತಕಗಳ ಸಹಿತ 205 ರನ್ ಸಿಡಿಸಿದ್ರು. ಆ ಮೂಲಕ ನಾನು ಬರೀ ಟೆಸ್ಟ್ ಕ್ರಿಕೆಟ್ಗೆ ಮಾತ್ರ ಸೀಮಿತವಲ್ಲ. ಬ್ಲೂ ಜೆರ್ಸಿಯಲ್ಲೂ ಮಿಂಚಬಲ್ಲೇ ಅಂತ ತಮ್ಮ ಸಾಮರ್ಥ್ಯ ಪ್ರೂ ಮಾಡಿದ್ದಾರೆ. ಇದರಿಂದ ಗಿಲ್ಗೆ ಟಿ20 ತಂಡದಲ್ಲೂ ಸ್ಥಾನ ನೀಡಬೇಕು ಅನ್ನೋ ಮಾತುಗಳು ಕೇಳಿ ಬರ್ತಿವೆ. ಇದರಿಂದ ಟಿ20 ವಿಶ್ವಕಪ್ ತಂಡದಲ್ಲಿ ಗಿಲ್ ಸ್ಥಾನ ಪಡೆದ್ರು ಅಚ್ಚರಿ ಇಲ್ಲ.
ಅದೇನೆ ಇರಲಿ, ಈ ಎಲ್ಲಾ ಆಟಗಾರರು ತಮ್ಮ ತಾಕತ್ತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವರಿಗೆ, ಇವ್ರ ಕರಿಯರ್ ಫಿನಿಶ್ ಎಂದವರಿಗೇ ತಮ್ಮ ಆಟದ ಮೂಲಕವೇ ಖಡಕ್ ಉತ್ತರ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post